Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ರುಚಿಯಾದ ಮಟರ್ ಬಿರಿಯಾನಿ (ಹಸಿ ಬಟಾಣಿ) ಈಸಿಯಾಗಿ ಮಾಡುವುದು ಹೇಗೆ?
ಈಗ ಮಾರುಕಟ್ಟೆಯಲ್ಲಿ ಹಸಿ ಬಟಾಣಿ ಬರಲಾರಂಭಿಸಿದೆ. ಈ ಸಮಯದಲ್ಲಿ ಹಸಿ ಬಟಣಿ ಬಳಸಿ ನೀವು ಅದ್ಭುತ ರುಚಿಯ ಹಸಿ ಬಟಾಣಿ ಬಿರಿಯಾನಿ ಅಥವಾ ಮಟರ್ ಪಲಾವ್ ಮಾಡಬಹುದು. ಸಾಮಾನ್ಯವಾಗಿ ಮಟರ್ ಬಿರಿಯಾನಿ ನೀವು ರೆಸ್ಟೋರೆಂಟ್ಗಳಲ್ಲಿ ಖರೀದಿಸುವುದಾದರೆ ಒಂದು ಪ್ಲೇಟ್ಗೆ 200 ರುಪಾಯಿಗಿಂತ ಅಧಿಕವಿರುತ್ತದೆ, ಆದರೆ ಅಷ್ಟೇ ಹಣದಲ್ಲಿ ಮನೆ ಮಂದಿಯೆಲ್ಲಾ ಸವಿಯಬಹುದಾದ ಬಿರಿಯಾನಿ ಮಾಡಬಹುದು. ಈ ಬಟಾಣಿ ಬಿರಿಯಾನಿ ಹಲವು ರುಚಿಯಲ್ಲಿ ಹಲವು ವಿಧಾನದಲ್ಲಿ ಮಾಡಬಹುದು.
ಇಲ್ಲಿ ಹೆಚ್ಚೇನು ಶ್ರಮವಿಲ್ಲದೆ ಮಾಡಬಹುದಾಗ ಬಟಾಣಿ ಬಿರಿಯಾನಿ ರೆಸಿಪಿ ನೀಡಿದ್ದೇವೆ, ಇದನ್ನು ಪಲಾವ್ ಅಂತಲೂ ಕರಿಯಬಹುದು, ಬೆಳಗ್ಗೆ ಬ್ರೇಕ್ಫಾಸ್ಟ್ಗೆ ಅಥವಾ ನೈಟ್ ಡಿನ್ನರ್ಗೆ ಇದನ್ನು ಮಾಡಬಹುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಮಾಡುವ ವಿಧಾನ
ಒಂದು ಮುಷ್ಠಿಯಷ್ಟು ಕೊತ್ತಂಬರಿ ಸೊಪ್ಪು
ಅದರ ಅರ್ಧ ಭಾಗದಷ್ಟು ಪುದೀನಾ ಸೊಪ್ಪು
ಶುಂಠಿ (ಒಂದು ತುಂಡು)
ಬೆಳ್ಳುಳ್ಳಿ ಎಸಳು 8-10
10 ಬಾದಾಮಿ
6 ಗೋಡಂಬಿ
(ಬಾದಾಮಿ, ಗೋಡಂಬಿ ಸ್ವಲ್ಪ ನೆನೆ ಹಾಕಿ)
ಹಸಿ ಮೆಣಸು 3-4 ಕೆಲವು ಮೆಣಸು ತುಂಬಾ ಖಾರವಿರುತ್ತೆ, ಹಾಗಾಗಿ (ನಿಮ್ಮ ಖಾರಕ್ಕೆ
ತಕ್ಕಷ್ಟು ಬಳಸಿ,
ಟೊಮೆಟೊ 4-5
ಅಕ್ಕಿ 2 ಚಮಚ
ತುಪ್ಪ 2 ಚಮಚ
ಚಕ್ಕೆ ಒಂದು ತುಂಡು
ಲವಂಗ 3-4
ನಕ್ಷತ್ರ ಮೊಗ್ಗು 1
ಏಲಕ್ಕಿ 2
ಪಲಾವ್ ಎಲೆ 2
ಹಸಿ ಬಟಾಣಿ ಅರ್ಧ ಕಪ್
ಉಪ್ಪಿನ ಪುಡಿ ಒಂದೂವರೆ ಚಮಚ
ನೀರು 4 ಕಪ್
ಅರ್ಧ ನಿಂಬೆ ಹಣ್ಣು
(ಆಲೂಗಡ್ಡೆ 2 , ದೊಡ್ಡ ಗಾತ್ರದಲ್ಲಿ ಕತ್ತರಿಸಿದ್ದು, ಇದನ್ನು ಬಳಸದೆಯೂ ಇರಬಹುದು)
ಮಾಡುವ ವಿಧಾನ
- ನೀವು ಟೊಮೆಟೊ ಕತ್ತರಿಸಿ ಮಿಕ್ಸಿ ಜಾರ್ಗೆ ಹಾಕಿ ನುಣ್ಣನೆ ರುಬ್ಬಿಕೊಳ್ಳಿ , ಅದನ್ನು ಒಂದು ಬೌಲ್ಗೆ ಹಾಕಿ
- ಈಗ ನೀವು ಗೋಡಂಬಿ, ಬಾದಾಮಿ, ಹಸಿ ಮೆಣಸು, ಬಾದಾಮಿ , ಗೋಡಂಬಿ ಮಿಕ್ಸಿಯಲ್ಲಿ ನುಣ್ಣನೆ ರುಬ್ಬಿ, ಈಗ ಅದೇ ಮಿಶ್ರಣಕ್ಕೆ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಸೇರಿಸಿ ರುಬ್ಬಿಕೊಳ್ಳಿ
- ಈಗ ಕುಕ್ಕರ್ ಬಿಸಿ ಮಾಡಿ ತುಪ್ಪ ಆಕಿ, ತುಪ್ಪ ಬಿಸಿಯಾದಾಗ ಚಕ್ಕೆ, ಲವಂಗ, ಪಲಾವ್ ಎಲೆ, ಏಲಕ್ಕಿ, ನಕ್ಷತ್ರ ಮೊಗ್ಗು ಸೇರಿಸಿ
- ನಂತರ ಈರುಳ್ಳಿ ಹಾಕಿ, ಈರುಳ್ಳಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ
- ಈಗ ರುಬ್ಬಿದ ಶುಂಠಿ-ಬೆಳ್ಳುಳ್ಳಿ , ಪುದೀನಾಸೊಪ್ಪು, ಕೊತ್ತಂಬರಿ ಸೊಪ್ಪು, ಗೋಡಂಬಿ, ಬಾದಾಮಿ ಮಿಶ್ರಣವನ್ನು ಸೇರಿಸಿ 3-4 ನಿಮಿಷ ಫ್ರೈ ಮಾಡಿ.
- ಈಗ ನೀವು ರುಬ್ಬಿದ ಟೊಮೆಟೊ ಸೇರಿಸಿ ಮತ್ತೆ 5 ನಿಮಿಷ ಫ್ರೈ ಮಾಡಿ, ಅರ್ಧ ಚಮಚ ಅರಿಶಿಣ ಪುಡಿ ಸೇರಿಸಿ
- ನಂತರ ಹಸಿ ಬಟಾಣಿ ಸೇರಿಸಿ ಮಿಕ್ಸ್ ಮಾಡಿ
- ಅಕ್ಕಿ ತೊಳೆದು ಸೇರಿಸಿ
- ಈಗ ಉಪ್ಪು ಹಾಕಿ ಮಿಕ್ಸ್ ಮಾಡಿ ನಂತರ 4 ಕಪ್ ನೀರು ಸೇರಿಸಿ (2 ಕಪ್ ಅಕ್ಕಿಗೆ 4 ಕಪ್ ನೀರು)
- 2 ವಿಶಲ್ ಬರುವವರೆಗೆ ಬೇಯಿಸಿ (ಕೆಲ ಅಕ್ಕಿಗೆ ಒಂದು ವಿಶಲ್ ಸಾಕು)
ಸ್ವಲ್ಪ ಹೊತ್ತು ಬಿಟ್ಟು ಅರ್ಧ ನಿಂಬೆಹಣ್ಣಿನ ರಸ ಹಿಂಡಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮಟರ್ ಬಿರಿಯಾನಿ ರೆಡಿ.



Click it and Unblock the Notifications