Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಬೇಸಿಗೆಯಲ್ಲಿ ದೇಹಕ್ಕೆ ಬೇಕಿರೋದು ಈ ಶೇಂಗಾ ಉಸ್ಲಿ..! ನಿಮಿಷದಲ್ಲಿ ಮಾಡಿ ಸವಿಯಿರಿ!!
ಶೇಂಗಾ ಬೀಜಗಳು ಅಥವಾ ಕಡಲೆ ಕಾಯಿ ಬೀಜ ಆರೋಗ್ಯದಲ್ಲಿ ಎಷ್ಟು ಉತ್ತಮ ಎಂಬುದನ್ನು ನೀವು ತಿಳಿದಿರಬಹುದು. ಅದರಲ್ಲು ಪ್ರೋಟಿನ್ ತುಂಬಿರುವ ಈ ಶೇಂಗಾ ಬೀಜಗಳು ದೇಹದ ಬಲವರ್ಧನೆಗೆ ಬಹಳ ಮುಖ್ಯ. ಹೀಗಾಗಿ ಮಕ್ಕಳಿಗೂ ಈ ಶೇಂಗಾದಿಂದ ಮಾಡಿರುವ ಚಿಕ್ಕಿಯನ್ನು ನೀಡುವುದು ನೋಡಬಹುದು, ಹಾಗೆ ಗರ್ಭಿಣಿಯರಿಗೆ ಶೇಂಗಾದಿಂದ ಮಾಡಿದ ಹಲವು ಬಗೆಯ ಖಾದ್ಯಗಳ ಸವಿಯಲು ಸಲಹೆ ನೀಡಲಾಗುತ್ತದೆ.
ಈ ಶೇಂಗಾದಲ್ಲಿ ಅತೀ ಹೆಚ್ಚು ಪ್ರೋಟಿಸ್ ಅಂಶವಿರುವುದು ನಿಮ್ಮ ದೇಹಕ್ಕೆ ಬಹಳ ಮುಖ್ಯ. ನಿಮ್ಮ ಮಾಂಸಖಂಡಗಳ ಬೆಳವಣಿಗೆಗೆ ಅಗತ್ಯ ಪ್ರೋಟಿಸ್ ಒದಗಿಸುವ ಅಂಶಗಳಲ್ಲಿ ಇದೂ ಕೂಡ ಒಂದಾಗಿದೆ. ಹಾಗೆ ಇದರಲ್ಲಿ ಉತ್ತಮ ಪ್ರಮಾಣದ ಕೊಬ್ಬಿನಾಂಶ ಹೊಂದಿರಲಿದೆ. ಇದರಲ್ಲಿನ ಆಮ್ಲ, ಲಿಯೋನಿಕ್ ಆಮ್ಲ ದೇಹಕ್ಕೆ ಮುಖ್ಯವಾಗಿದೆ.

ಶೇಂಗಾದಲ್ಲಿನ ಅಪಾರ ಪ್ರಮಾಣದ ಫೈಬರ್ ಅಂಶ ನಿಮ್ಮ ಕರುಳಿನ ಆರೋಗ್ಯಕ್ಕೂ ಉತ್ತಮ. ಹಾಗೆ ಜೀರ್ಣಕ್ರಿಯೆಗೂ ಬಹಳ ಮುಖ್ಯ. ಇಂತಹ ಆರೋಗ್ಯಕರ ಅಂಶಗಳ ಹೊಂದಿರುವ ಈ ಶೇಂಗಾದಿಂದ ಹಲವು ಬಗೆಯ ಖಾದ್ಯ ಮಾಡಿ ಸವಿಯುವುದು ನೋಡಬಹುದು, ಅದರಲ್ಲೂ ಶೇಂಗಾ ಚಿಕ್ಕಿ ಬಹಳ ರುಚಿಕರ ಹಾಗೆ ಮಕ್ಕಳಿಗೂ ಇಷ್ಟವಾಗುವ ಖಾದ್ಯ.
ಈ ಶೇಂಗಾವನ್ನು ಮೊಳಕೆ ಬರಿಸಿ ಅದರಿಂದ ಹಲವು ರೀತಿಯ ಖಾದ್ಯ ಸವಿಯುವುದು ನೋಡಬಹುದು. ಅದರಲ್ಲೂ ಈ ಶೇಂಗಾ ಬೀಜ ಬಳಸಿ ರಾಜಾ ಮಸಾಲೆ, ಪಲ್ಯ, ಉಸ್ಲಿ, ಗ್ರೇವಿ ಕೂಡ ಮಾಡುತ್ತಾರೆ. ಆದ್ರೆ ನಾವಿಂದು ಈ ಶೇಂಗಾ ಬೀಜದಿಂದ ಆರೋಗ್ಯ ಕಾಪಾಡುವಂತಹ ಉಸ್ಲಿ ಮಾಡುವ ಕುರಿತು ತಿಳಿದುಕೊಳ್ಳೋಣ.
ಈ ಶೇಂಗಾ ಉಸ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಶೇಂಗಾ ಉಸ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಶೇಂಗಾ ಬೀಜಗಳು
- ತೆಂಗಿನಕಾಯಿ ತುರಿ
- ಸಾಸಿವೆ
- ಜೀರಿಗೆ
- ಕಡ್ಲೆಬೇಳೆ
- ಉದ್ದಿನಬೇಳೆ
- ಹಸಿ ಶುಂಠಿ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಹಸಿಮೆಣಸಿನ ಕಾಯಿ
- ನಿಂಬೆಹಣ್ಣಿನ ರಸ
- ರುಚಿಗೆ ತಕ್ಕಷ್ಟು ಉಪ್ಪು
- ಎಣ್ಣೆ
ಶೇಂಗಾ ಉಸ್ಲಿ ಮಾಡುವುದು ಹೇಗೆ?
ಮೊದಲು ಹಸಿ ಶೇಂಗಾವನ್ನು ಚೆನ್ನಾಗಿ ತೊಳೆದು ಬಳಿಕ 2 ಗಂಟೆಗಳ ಕಾಲ ಆದರೂ ನೀರಿನಲ್ಲಿ ನೆನೆಸಿಡಬೇಕು. ಬಿಸಿಯಾದ ನೀರಿನಲ್ಲಿ ನೆನೆಸುವುದು ಬಹಳ ಉತ್ತಮ. 2 ಗಂಟೆಯ ಬಳಿಕ ನೀರನ್ನು ಬಸಿದು ಬರಿ ಕಡಲೆ ಬೀಜವನ್ನು ತೆಗೆದು ಒಂದು ಕುಕ್ಕರ್‌ಗೆ ಹಾಕಿಕೊಳ್ಳಿ. ನಂತರ ಸ್ವಲ್ಪ ನೀರು ಹಾಕಿ ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 2 ಸೀಟಿ ಹೊಡೆಸಿಕೊಳ್ಳಿ.
2 ಸೀಟಿಯ ಬಳಿಕ ಒಲೆ ಆಫ್ ಮಾಡಿಕೊಂಡು ಗ್ಯಾಸ್ ಹೋದ ಬಳಿಕ ಕುಕ್ಕರ್ ಮುಚ್ಚಳ ತೆಗೆದುಕೊಳ್ಳಿ. ಈಗ ಕಡಲೆಯನ್ನು ನೀರಿನಿಂದ ಬೇರ್ಪಡಿಸಿ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ.
ಇಗ ಎರಡು ಹಸಿ ಮೆಣಸು, ಕರಿಬೇವು, ಶುಂಠಿ ಹಾಕಿ ಮತ್ತೆ 1 ನಿಮಿಷ ಫ್ರೈ ಮಾಡಬೇಕು. 1 ನಿಮಿಷದ ಬಳಿಕ ಒಲೆ ಆಫ್ ಮಾಡಿಕೊಂಡು ನೀರಿನಿಂದ ತೆಗೆದಿಟ್ಟ ಬೇಯಿಸಿದ ಶೇಂಗಾ ಕಡಲೆಯನ್ನು ಇದಕ್ಕೆ ಹಾಕಿ ಒಮ್ಮೆ ಮಿಕ್ಸ್ ಮಾಡಿ ಹಾಗೆ ತುರಿದುಕೊಂಡಿರುವ ತೆಂಗಿನ ಕಾಯಿ ತುರಿಯನ್ನು ಹಾಕಿಕೊಳ್ಳಿ. ಹಾಗೆ ಒಂದು ಸ್ಪೂನ್ ನಿಂಬೆ ಹಣ್ಣಿನ ರಸ, ಹಾಗೆ ಕೊತ್ತಂಬರಿ ಸೊಪ್ಪು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಶೇಂಗಾ ಬೀಜದ ಉಸ್ಲಿ ರೆಡಿಯಾಗುತ್ತದೆ. ಇದು ಆರೋಗ್ಯಕ್ಕೆ ಬಹಳ ಉತ್ತಮ. ಮಕ್ಕಳಿಗೆ ಈ ರೀತಿ ಉಸ್ಲಿ ನೀಡುವುದರಿಂದ ಅವರ ಮಾಂಸ ಖಂಡಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇದು ಬೆಳಗ್ಗೆ ಬ್ರೇಕ್ ಫಾಸ್ಟ್ ಜೊತೆಗೆ ಸವಿಯಲು ನೀಡಿದರೆ ಇಡೀ ದಿನ ಅತ್ಯುತ್ತಮ ಆಗಿರಲಿದೆ. ಹಾಗೆ ಮಸಾಳೆಗಳು ಕಡಿಮೆ ಬಳಸುವುದರಿಂದ ಬೇಸಿಗೆಯಲ್ಲಿ ನಿಮ್ಮ ಆರೋಗ್ಯ ಕಾಪಾಡಲು ಶ್ರೇಷ್ಠವಾದ ತಿಂಡಿ ಇದಾಗಿರಲಿದೆ.
ಇದೇ ವಿಧಾನದಲ್ಲಿ ನೀವು ಹಲವು ಖಾದ್ಯಳಿಂದಲೂ ಉಸ್ಲಿ ಮಾಡಬಹುದು. ಹೆಸರು ಕಾಳು, ಬೇಳೆ ಕಾಳುಗಳನ್ನೂ ಕೂಡ ನೆನೆಸಿಟ್ಟು ಮೊಳಕೆ ಬರಿಸಿಕೊಂಡು ಇದೇ ವಿಧಾನದಲ್ಲಿ ಉಸ್ಲಿ ಮಾಡಿ ಸವಿಯಬಹುದು, ತೂಕ ನಿಯಂತ್ರಣದಲ್ಲಿಡಲು ಇಚ್ಛಿಸುವವರು ಈ ರೀತಿಯ ಉಸ್ಲಿಯ ಮಾಡಿ ಸವಿಯುವುದು ಬಹಳ ಉತ್ತಮ. ಇಂತಹ ಖಾದ್ಯ ವಾರದಲ್ಲಿ ಒಮ್ಮೆಯಾದರು ಮಾಡಿ ಸವಿಯುವುದು ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ. ನೀವು ಕೂಡ ಮನೆಯಲ್ಲಿ ಇಂತಹ ಖಾದ್ಯವನ್ನು ಸವಿದು ನೋಡಿ.



Click it and Unblock the Notifications