Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಒಮ್ಮೆ ಸವಿದರೆ ಮೈ ಮರೆಯುವ ರುಚಿಯ ಶೇಂಗಾ ಬೆಲ್ಲದ ಉಂಡೆ!
ಮನೆಯಲ್ಲಿ ಮಕ್ಕಳಿಗೂ ಇಷ್ಟವಾಗುವಂತಹ ಹಲವು ರೀತಿಯ ತಿಂಡಿಯನ್ನು ಮಾಡಿ ಸವಿಯುವುದು ಅಂದ್ರೆ ನಿಮಗೆಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಸಿಹಿಯಲ್ಲಿ ಅದ್ಭುತ ರುಚಿ ನೀಡುವಂತಹ ಸಿಹಿಯುವ ಎಲ್ಲರಿಗೂ ಇಷ್ಟ. ಹಾಗೆ ನಾವಿಂದು ಶೇಂಗಾ ಬಳಸಿ ಮಾಡುವಂತಹ ಸಿಹಿಯಾದ ಉಂಡೆ ಅಂತು ಎಲ್ಲರ ಬಾಯಲ್ಲಿ ನೀರು ತರಿಸುತ್ತದೆ.
ಇಂದಿಗೂ ಅಂಗಡಿ, ಬೇಕರಿಗಳಲ್ಲಿ ಈ ಬೆಲ್ಲ ಹಾಗೂ ಶೇಂಗಾದಿಂದ ಮಾಡಿರುವ ರುಚಿಯಾದ ಸಿಹಿ ಉಂಡೆ ನೋಡಲು ಸಿಗುತ್ತದೆ. ಇದು ಮಕ್ಕಳ ಬಾಯಲ್ಲಿ ನೀರು ತರಿಸುತ್ತದೆ. ಹಾಗೆ ಶೇಂಗಾ ಮತ್ತು ಬೆಲ್ಲದಿಂದ ಮಾಡುವುದರಿಂದ ಆರೋಗ್ಯದಕ್ಕೂ ಬಹಳ ಉತ್ತಮ. ಶೇಂಗಾದಲ್ಲಿನ ಅಂಶ ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶ ನೀಡಲಿದೆ.

ಹಾಗೆ ಈ ಸ್ವೀಟ್ ಅನ್ನು ಮಕ್ಕಳಿಗೆ ನೀಡಬಹುದು. ಇದರಿಂದ ಯಾವುದೇ ದುಷ್ಪರಿಣಾಮವಿರುವುದಿಲ್ಲ. ಹಾಗೆ ಈ ಸ್ವೀಟ್ ಹಲವು ದಿನಗಳ ಕಾಲ ಇಟ್ಟು ನೀವು ಸವಿಯಬಹುದು. ಹಾಗಾದ್ರೆ ಈ ಶೇಂಗಾ ಉಂಡೆ ಮಾಡುವ ಕುರಿತು ನಾವಿಂದು ತಿಳಿದುಕೊಳ್ಳೋಣ. ಈ ರುಚಿ ರುಚಿಯ ಸ್ವೀಟ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿಯೋಣ.
ಶೇಂಗಾ ಉಂಡೆ ಮಾಡಲು ಎಷ್ಟು ಪದಾರ್ಥ ಬೇಕು?
- ಶೇಂಗಾ- 2 ಕಪ್
- ಬೆಲ್ಲ-
- ತುಪ್ಪ
- ಪುಟಾಣಿ
ಶೇಂಗಾ ಬೆಲ್ಲದ ಸಿಹಿ ಉಂಡೆ ಮಾಡುವುದು ಹೇಗೆ?
ಮೊದಲು ಬಾಣಲೆ ಇಟ್ಟು ಒಲೆ ಸಣ್ಣ ಉರಿಯಲ್ಲಿ ಅಥವಾ ಮಧ್ಯಮ ಉರಿಯಲ್ಲಿ ಇಟ್ಟು ಶೇಂಗಾ ಹಾಕಿಕೊಂಡು ಹುರಿದುಕೊಳ್ಳಬೇಕು. ಅದು ಸಿಪ್ಪೆ ಬಿಡುವಂತಹ ಹದಕ್ಕೆ ಹುರಿದುಕೊಳ್ಳಬೇಕು. ಕನಿಷ್ಟ 10 ನಿಮಿಷ ಹುರಿದು ಬಳಿಕ ಸಿಪ್ಪೆಯನ್ನು ಬಿಡಿಸಿಕೊಳ್ಳಿ. ಅನಂತರ ಇಡಿಯಾದ ಶೇಂಗಾವನ್ನು ಎರಡು ಭಾಗವಾಗಿ ಮಾಡಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 1 ಕಪ್ ಬೆಲ್ಲ ಹಾಕಿಕೊಂಡು ಸ್ವಲ್ಪ ನೀರು ಹಾಕಿ ಕರಗಲು ಬಿಡಿ. ಹಾಗೆ ಇದಕ್ಕೆ 1 ಸ್ಪೂನ್ ತುಪ್ಪ ಹಾಕಿ ತಿರುಗಿಸಿಕೊಳ್ಳುತ್ತಾ ಇರಿ. ಇದು ಗಟ್ಟಿಯಾಗಲು ಆರಂಭಿಸಲಿದೆ. ಪಾಕ ಗಟ್ಟಿಯಾಗಬೇಕು. ಎರಡು ಎಳೆ ಪಾಕ ಆಗಬೇಕು. ಇಲ್ಲವೆ ಒಂದು ಗ್ಲಾಸ್ಗೆ ನೀರು ಹಾಕಿ ಅದಕ್ಕೆ ಒಂದು ಹನಿ ಪಾಕ ಹಾಕಿ. ಆಗ ಪಾಕ ಕರಗಿದರೆ ಇನ್ನು ಒಲೆಯಲ್ಲಿ ಕುದಿಯಲು ಬಿಡಿ. ನೀರಿನಲ್ಲಿ ಗಟ್ಟಿಯಾಗಿ ಉಳಿದರೆ ಪಾಕ ಸರಿಯಾಗಿದೆ ಎಂದರ್ಥವಾಗುತ್ತದೆ.
ಈಗ ಬೆಲ್ಲದ ಈ ಪಾಕಕ್ಕೆ ಬಿಡಿಸಿಕೊಂಡಿದ್ದ ಶೇಂಗಾ ಕಾಲು ಕಪ್ ಹುರಿಗಡಲೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಬೆಲ್ಲದ ಪಾಕ ಚೆನ್ನಾಗಿ ಹಿಡಿಯಬೇಕು. 3 ನಿಮಿಷಗಳ ಕಾಲ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ನಂತರ ಕೈಗೆ ತುಪ್ಪ ಹಚ್ಚಿಕೊಂಡು ಉಂಡೆ ಕಟ್ಟಿಕೊಳ್ಳಿ. ಬಿಸಿ ಬಿಸಿ ಇದ್ದಾಗಲೇ ಉಂಡೆ ಕಟ್ಟಿ ಇಟ್ಟುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸಿಹಿ ಶೇಂಗಾ ಉಂಡೆ ಸಿದ್ದವಾಗುತ್ತೆ.



Click it and Unblock the Notifications
