Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಈ ರೀತಿ ಶೇಂಗಾ ಖಾರ ಚಟ್ನಿ ಮಾಡಿದ್ರೆ 2 ಇಡ್ಲಿ ಜಾಸ್ತಿ ತಿಂತೀರಿ..!
ಮನೆಯಲ್ಲಿ ಬೆಳಗ್ಗೆ ತಿಂಡಿ ಮಾಡಿದಾಗ ಅದಕ್ಕೊಂದು ಚಟ್ನಿ ಮಾಡಿಯೇ ಮಾಡುತ್ತೀರಿ, ಅದರಲ್ಲೂ ಹೆಚ್ಚಾಗಿ ತೆಂಗಿನಕಾಯಿ ಬಳಸಿ ಇಲ್ಲವೆ ಹುರಿಗಡಲೆಯ ಸುಲಭದ ಚಟ್ನಿಯನ್ನು ಎಲ್ಲರ ಮನೆಯಲ್ಲೂ ಮಾಡಿರುತ್ತಾರೆ. ಆದ್ರೆ ಕೆಲವೊಮ್ಮೆ ಮಾತ್ರವೇ ವಿಶೇಷವಾಗಿ ರುಚಿ ನೀಡುವಂತಹ ಕೆಲವು ತರಕಾರಿ, ಇಲ್ಲವೆ ಕಾಳುಗಳಿಂದ ಮಾಡುವ ಚಟ್ನಿಯನ್ನು ಸವಿಯಲು ಮುಂದಾಗುತ್ತಾರೆ.
ನಿಮ್ಮ ಮನೆಯಲ್ಲಿ ಬೆಳಗಿನ ತಿಂಡಿ ಇಡ್ಲಿ ಅಥವಾ ದೋಸೆ ಇದ್ದರೆ ಅದಕ್ಕೆ ಯಾವ ಚಟ್ನಿ ಮಾಡುತ್ತೀರಿ. ನಿಮಗೂ ಮನೆಯಲ್ಲಿ ಕಡಲೆ ಅಥವಾ ಶೇಂಗಾ ಚಟ್ನಿ ಮಾಡುವ ಅಭ್ಯಾಸವಿದೆಯೇ? ಶೇಂಗಾ ಚಟ್ನಿ ಅದ್ಭುತ ರುಚಿ ನೀಡುವುದು ಸತ್ಯ. ಆದ್ರೆ ಇದೇ ಶೇಂಗಾ ಚಟ್ನಿಯನ್ನು ವಿಭಿನ್ನ ರುಚಿಯಲ್ಲಿ ಖಾರ ಖಾರವಾಗಿ ಮಾಡಿದರೆ ಹೇಗಿರುತ್ತೆ?

ಹೌದು ನಾವಿಂದು ಈ ಶೇಂಗಾ ಖಾರ ಚಟ್ನಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಈ ಚಟ್ನಿ ಇಡ್ಲಿ, ದೋಸೆಗೆ ಹೇಳಿ ಮಾಡಿಸಿದ ಚಟ್ನಿ, ಮನೆ ಮಂದಿಗೆಲ್ಲಾ ಇದು ಇಷ್ಟವಾಗುತ್ತೆ. ಹಾಗೆ ಮಾಡುವುದು ಕೂಡ ತುಂಬಾನೆ ಸುಲಭ. ಬೆಳಗ್ಗೆ ನೀವು ಯಾವ ಚಟ್ನಿ ಮಾಡಬೇಕು ಎಂದು ಯೋಚಿಸುವ ಸಮಯದಲ್ಲೇ ಇದನ್ನು ಮಾಡಬಹುದು.
ಹಾಗಾದ್ರೆ ಈ ಶೇಂಗಾ ಖಾರ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಶೇಂಗಾ ಚಟ್ನಿ ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತು ನಾವಿಂದು ತಿಳಿದುಕೊಳ್ಳೋಣ.
ಶೇಂಗಾ ಖಾರ ಚಟ್ನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಶೇಂಗಾ
- ಉದ್ದಿನ ಬೇಳೆ
- ಕಡಲೆಕಾಯಿ - 50 ಗ್ರಾಂ
- ಈರುಳ್ಳಿ - 3
- ಒಣ ಮೆಣಸು
- ಕರಿಬೇವಿನ ಎಲೆಗಳು
- ಬೆಳ್ಳುಳ್ಳಿ - 4 ಎಸಳು
- ಹುಣಸೆಹಣ್ಣು
- ಉಪ್ಪು
- ತೆಂಗಿನ ತುರಿ
- ಎಣ್ಣೆ
- ಸಾಸಿವೆ
ಶೇಂಗಾ ಖಾರ ಚಟ್ನಿ ಮಾಡುವ ವಿಧಾನ ಇಲ್ಲಿದೆ
ಮೊದಲು ಬಾಣಲೆಯನ್ನು ಒಲೆ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಇದಕ್ಕೆ ಉದ್ದಿನ ಬೇಳೆ ಹಾಗೂ ಕಡಲೆ ಬೇಳೆ ಹಾಕಿ 1 ನಿಮಿಷ ಫ್ರೈ ಮಾಡಿ. ನಂತರ ಸಣ್ಣದಾಗಿ ಕತ್ತರಿಸಿಕೊಂಡಿರುವ ಈರುಳ್ಳಿಯನ್ನು ಕೂಡ ಇದಕ್ಕೆ ಹಾಕಿ ಫ್ರೈ ಮಾಡಿಕೊಳ್ಳಿ. ಹಾಗೆ ಇದರ ಜೊತೆಗೆ ಕರಿಬೇವು ಸಹ ಹಾಕಿಕೊಳ್ಳಿ.
ನಂತರ ಬೆಳ್ಳುಳ್ಳಿ, ಮೆಣಸಿನಕಾಯಿ, ಹುಣಸೆಹಣ್ಣು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ 3 ನಿಮಿಷ ಚೆನ್ನಾಗಿ ಹುರಿಯಿರಿ. ಕೊನೆಗೆ ತೆಂಗಿನ ತುರಿ ಹಾಕಿ ಹುರಿದು ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈ ಮಸಾಲೆಗಳು ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಿ.
ನುಣ್ಣಗೆ ರುಬ್ಬಿಕೊಳ್ಳಬೇಡಿ, ತರಿತರಿಯಾಗಿ ರುಬ್ಬಿಕೊಂಡು ಒಂದು ಬೌಲ್‌ಗೆ ಹಾಕಿಕೊಳ್ಳಿ. ಈಗ ಇದಕ್ಕೆ ಒಂದು ಒಗ್ಗರಣೆ ರೆಡಿ ಮಾಡಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಬೇವು, ಉದ್ದಿನ ಬೇಳೆ ಹಾಕಿ ಫ್ರೈ ಮಾಡಿ ಈ ಚಟ್ನಿಗೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಶೇಂಗಾ ಖಾರ ಚಟ್ನಿ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ. ಇಡ್ಲಿ ದೋಸೆ ಸಖತ್ ಟೇಸ್ಟ್ ನೀಡಲಿದೆ.



Click it and Unblock the Notifications
