Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ದೋಸೆ, ಇಡ್ಲಿಗೆ ಸೂಪರ್ ಈ ಶೇಂಗಾ ಚಟ್ನಿ, ಈ ಚಟ್ನಿ ಪುಡಿಯಂತೂ ತಿಂಗಳವರೆಗೆ ಇಡಬಹುದು
ನೀವು ಈ ಶೇಂಗಾ ಚಟ್ನಿ ಮಾಡಿದರೆ ದೋಸೆಗೆ ಸೂಪರ್ ಕಾಂಬಿನೇಷನ್, ದೋಸೆಗಾದರೆ ಸ್ವಲ್ಪ ಗಟ್ಟಿ ಚಟ್ನಿ ಮಾಡಿ ಅದೇ ಇಡ್ಲಿಗೆ ರೆಡಿ ಮಾಡುವುದಾದರೆ ಸ್ವಲ್ಪ ನೀರು ಚಟ್ನಿ ಮಾಡಿದರೆ ಸೂಪರ್ ಆಗಿರುತ್ತೆ.
ಇನ್ನು ಇದೇ ಸಾಮಗ್ರಿ ಬಳಸಿ ನೀವು ಶೇಂಗಾ ಚಟ್ನಿ ಪುಡಿ ರೆಡಿ ಮಾಡಬಹುದು, ಆ ಚಟ್ನಿ ಪುಡಿಯನ್ನು ತಿಂಗಳವರೆಗೆ ಇಡಬಹುದು, ಅನ್ನ, ದೋಸೆ, ಚಪಾತಿ ಸವಿಯಬಹುದು. ಮಕ್ಕಳು ಹಾಸ್ಟೆಲ್ ಅಥವಾ ದೂರದ ಊರಲ್ಲಿ ಕೆಲಸ ಮಾಡುತ್ತಿದ್ದರೆ ಅವರಿಗೆ ಕಳುಹಿಸಬಹುದು.
ಈ ಚಟ್ನಿ ಪುಡಿಯನ್ನು ಮೊಸರು ಜೊತೆ ಮಿಕ್ಸ್ ಮಾಡಿದರೆ ಬೇರೆ ಯಾವುದೇ ಸಾರು ಇಲ್ಲದಿದ್ದರೂ ಅನ್ನ, ಬ್ರೇಕ್ ಫಾಸ್ಟ್ ರುಚಿ ಅನಿಸುತ್ತೆ, ಬನ್ನಿ ಇದನ್ನು ಈ ಎರಡೂ ರೆಸಿಪಿ ನೋಡೋಣ:

ಬೇಕಾಗುವ ಸಾಮಗ್ರಿ
ತೆಂಗಿನ ತುರಿ 1 ಕಪ್
ಶೆಂಗಾ 1/2 ಕಪ್
ಬೆಳ್ಳುಳ್ಳಿ 6-7 ಎಸಳು
ಒಣ ಮೆಣಸು 5-6
ಸ್ವಲ್ಪ ಹುಣಸೆ ಹಣ್ಣು
ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ
1 ಚಮಚ ಎಣ್ಣೆ(ಶೇಂಗಾ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ)
ಸ್ವಲ್ಪ ಸಾಸಿವೆ
ಸ್ವಲ್ಪ ಕರಿಬೇವು
ಮಾಡುವ ವಿಧಾನ
- ನೀವು ಶೇಂಗಾ ಬೀಜ ಹುರಿದುಕೊಳ್ಳಿ
- ನಂತರ ಶೇಂಗಾ ಬೀಜ ಸ್ವಲ್ಪ ತಣ್ಣಗಾಗಲು ಬಿಡಿ, ನಂತರ ಕೈಯಿಂದ ರಬ್ ಮಾಡಿದರೆ ಅದರ ಸಿಪ್ಪೆ ಹೋಗುತ್ತೆ
- ಒಣ ಮೆಣಸು ಕೂಡ ಹುರಿದಿರಬೇಕು
- ಈಗ ತೆಂಗಿನ ತುರಿಗೆ ಶೇಂಗಾ ಬೀಜ, ಸ್ವಲ್ಪ ಹುಣಸೆ ರಸ, ಒಣ ಮೆಣಸು ರುಚಿಗೆ ತಕ್ಕ ಉಪ್ಪು ಹಾಕಿ ರುಬ್ಬಿದರೆ ಶೇಂಗಾ ಬೀಜದ ಚಟ್ನಿ ರೆಡಿ.
- ನೀವು ಈ ಚಟ್ನಿ ಮಾಡುವಾಗ ಚಟ್ನಿ ಗಟ್ಟಿಯಾಗಿ ಬೇಕೆಂದರೆ ಸ್ವಲ್ಪ ನೀರು ಸೇರಿಸಿ, ಇಲ್ಲಾಂದ್ರೆ ಇನ್ನು ಸ್ವಲ್ಪ ನೀರು ಸೇರಿಸಬಹುದು
ನಂತರ ನೀವು ಇದಕ್ಕೆ ಒಗ್ಗರಣೆ ಸೇರಿಸಬಹುದು
ಕೆಲವರು ಒಗ್ಗರಣೆಗೆ ಚಟ್ನಿ ಹಾಕು ಕುದಿಸುತ್ತಾರೆ, ಆ ರೀತಿ ಮಾಡಬೇಡಿ, ಬದಲಿಗೆ
ಹಸಿ ಚಟ್ನಿಗೆ ಒಗ್ಗರಣೆ ಹಾಕಿ.
ಶೇಂಗಾ ಚಟ್ನಿ ಪುಡಿ ಮಾಡಿಡುವುದಾದರೆ
ನೀವು ಇದೇ ಸಾಮಗ್ರಿ ಬಳಸಿ ಶೇಂಗಾ ಚಟ್ನಿ ಮಾಡಿಟ್ಟರೆ ತಿಂಗಳವರೆಗೆ ಬಳಸಬಹುದು
ಮಾಡುವುದು ಹೇಗೆ?
ನೀವು ಶೇಂಗಾವನ್ನು ಹುರಿಯಬೇಕು
ಅದೇ ರೀತಿ ತೆಂಗಿನ ತುರಿ ಕೂಡ ಚೆನ್ನಾಗಿ ಹುರಿಯಬೇಕು. ಹೀಗೆ ಹುರಿಯುವಾಗಲೇ
ಸ್ವಲ್ಪ ಹುಣಸೆ ಹಣ್ಣು ಸೇರಿಸಿ ಹುರಿಯಿರಿ
ಒಣ ಮೆಣಸು ಕೂಡ ರೋಸ್ಟ್ ಮಾಡಿ
ನಂತರ ಉಪ್ಪು ಸೇರಿಸಿ ನೀರು ಸೇರಿಸದೆ ಪುಡಿ ಮಾಡಿದರೆ ಶೇಂಗಾ ಚಟ್ನಿ ಪುಡಿ
ರೆಡಿ.
ಸಲಹೆ: ಇದಕ್ಕೆ ನೀವು ಜೀರಿಗೆ ರೋಸ್ಟ್ ಮಾಡಿ
ಬಳಸಬಹುದು
ಬೆಳ್ಳುಳ್ಳಿ ರೋಸ್ಟ್ ಮಾಡಿ ಬಳಸಬಹುದು
ಕರಿಬೇವು ಕೂಡ ಸೇರಿಸಬಹುದು.
ಈ ಚಟ್ನಿ ಪುಡಿ ಸವಿಯುವಾಗ ನೀವು ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ ಮಿಕ್ಸ್ ಮಾಡಿ ಸವಿಯಬಹುದು.
ಈ ಚಟ್ನಿ ಪುಡಿ ಗಂಜಿ ಅಥವಾ ಅನ್ನದ ಜೊತೆ ಸೈಡ್ ಡಿಶ್ ಆಗಿ ಬಳಸಬಹುದು.
ಈ ಚಟ್ನಿ ಪುಡಿ ತಿಂಗಳವರೆಗೆ ಇಟ್ಟು ಬಳಸಬಹುದು.



Click it and Unblock the Notifications
