Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮಕ್ಕಳ ನೆಚ್ಚಿನ ಶೇಂಗಾ ಚಿಕ್ಕಿ ಮಾಡಿ ನೋಡಿ..! 2 ವಸ್ತು ಸಾಕು.!
ಚಿಕ್ಕಿಗಳೆಂದೆರೆ ಮಕ್ಕಳಿಗೆ ಪಂಚಪ್ರಾಣ. ಅದ್ರಲ್ಲೂ ಸಿಹಿ ಇಷ್ಟಪಡುವ ದೊಡ್ಡವರು ಸಹ ಚಿಕ್ಕಿಗಳನ್ನು ಸವಿಯಲು ಇಷ್ಟಪಡುತ್ತಾರೆ. ಅದ್ರಲ್ಲೂ ಶೇಂಗಾ ಚಿಕ್ಕಿ ಸಿಕ್ಕಾಪಟ್ಟೆ ರುಚಿ ನೀಡುತ್ತೆ. ಹೀಗಾಗಿ ಶೇಂಗಾ ಚಿಕ್ಕಿಗೆ ಈಗಲೂ ಬೇಡಿಕೆ ಇದೆ. ಇದರಲ್ಲಿ ಪೋಷಕಾಂಶ ಭರಿತ ಅಂಶಗಳು ಸೇರಿರುವುದರಿಂದ ಆರೋಗ್ಯಕ್ಕೂ ಇದು ಬಹಳ ಒಳ್ಳೆಯದು.
ಹೀಗಾಗಿ ಶೇಂಗಾ ಚಿಕ್ಕಿಯನ್ನ ಗರ್ಭಿಣಿಯರಿಗೆ ತಿನ್ನಲು ನೀಡಲಾಗುತ್ತದೆ. ಈಗ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ನೀಡಿ ಈ ಶೇಂಗಾ ಚಿಕ್ಕಿ ಖರೀದಿಬೇಕಾಗಿದೆ. ಇದರ ರುಚಿ ನೋಡಿದವರು ಮತ್ತೆ ಮತ್ತೆ ಸವಿಯಲು ಮುಂದಾಗುತ್ತಾರೆ. ಹಾಗಾದ್ರೆ ಶೇಂಗಾ ಚಿಕ್ಕಿಯನ್ನ ಮನೆಯಲ್ಲೇ ಮಾಡೋದು ಹೇಗೆ?

ಶೇಂಗಾ ಚಿಕ್ಕಿ ಮಾಡಲು ಬೇಕಾಗುವ ಪದಾರ್ಥಗಳೇನು? ಶೇಂಗಾ ಚಿಕ್ಕಿ ಮಾಡುವ ವಿಧಾನವೇನು? ಹೇಗೆ ಮಾಡಿದರು ಅದು ಅಂಟಾಗುವುದಿಲ್ಲ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಶೇಂಗಾ ಚಿಕ್ಕಿ ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಬೀಜ - 2 ಕಪ್
- ಬೆಲ್ಲ- 2 ಕಪ್
- ಎಣ್ಣೆ
ಶೇಂಗಾ ಚಿಕ್ಕಿ ಮಾಡುವುದು ಹೇಗೆ?
ಮೊದಲು ಈ ಶೇಂಗಾ ಬೀಜವನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಒಂದು ತವದಲ್ಲಿ ಶೇಂಗಾ ಬೀಜ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಬೇಕು. ಈ ಶೇಂಗಾ ಸ್ವಲ್ಪ ಬಣ್ಣ ಬದಲಾಯಿಸಿ ಅದರ ಸಿಪ್ಪೆ ಸುಲಭವಾಗಿ ಹೊರಬರುವಂತೆ ಆಗುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದನ್ನು ಒಂದು ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ.
ಶೇಂಗಾ ತಣ್ಣಗಾದ ಬಳಿಕ ಅದರ ಸಿಪ್ಪೆ ತೆಗೆದು ಬೀಜ ಬೇರೆ ಬೇರೆ ಮಾಡಿಕೊಳ್ಳಿ. ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆಗೆ ಬೆಲ್ಲ ಹಾಕಿಕೊಂಡು ಪಾಕ ಮಾಡಿಕೊಳ್ಳಿ. ನಿಧಾನವಾಗಿ ಬೆಲ್ಲ ಕರಗಿಸಿಕೊಳ್ಳಿ. ಹೆಚ್ಚು ಉರಿ ಇಟ್ಟರೆ ಬೆಲ್ಲ ಸೀದುವ ಅಪಾಯವಿರಲಿದೆ. ಹೀಗಾಗಿ ಸಣ್ಣ ಉರಿಯಲ್ಲಿ ಕೈ ಆಡಿಸುತ್ತಾ ಪಾಕ ಮಾಡಿಕೊಳ್ಳಿ.
ಪಾಕ ರೆಡಿ ಆಗಿದೆಯೇ ಎಂದು ನೋಡೋದು ಹೇಗೆ?
ಒಂದು ಸಣ್ಣ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದಕ್ಕೆ ಸ್ವಲ್ಪ ಪಾಕ ಹಾಕಿ ಈ ಪಾಕ ನೀರಿನಲ್ಲಿ ಬೇಗ ಹರಡಿದರೆ ಪಾಕ ಇನ್ನೂ ಕುದಿಯಬೇಕು ಎಂದು ಅರ್ಥ. ಅದರೆ ಪಾಕ ಹಾಗೆ ನೀರಿನಲ್ಲಿ ಗಂಟಾಗಿ ಉಳಿದರೆ ಆ ಪಾಕ ಚೆನ್ನಾಗಿ ಕಾದಿದೆ ಎಂದರ್ಥ.
ಈಗ ಒಲೆ ಮೇಲಿರುವ ಪಾಕಕ್ಕೆ ಕಡಲೆ ಬೀಜವನ್ನು ಹಾಕಿಕೊಂಡು ಚೆನ್ನಾಗಿ ತಿರುಗಿಸಿಕೊಳ್ಳಿ. ಪಾಕ ಚೆನ್ನಾಗಿ ಹಿಡಿಯುವಂತೆ ಮಾಡಿಕೊಳ್ಳಿ. ಈಗ ಒಂದು ತಟ್ಟೆಗೆ ಎಣ್ಣೆ ಸವರಿಕೊಂಡು ಅದರ ಮೇಲೆ ಹಾಕಿಕೊಳ್ಳಿ. ಬಳಿಕ ಚೆನ್ನಾಗಿ ತಟ್ಟಿಕೊಳ್ಳಿ, ನಂತರ ತಣ್ಣಗಾಗಲು ಬಿಡಿ. 10 ನಿಮಿದ ಬಳಿಕ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಶೇಂಗಾ ಚಿಕ್ಕಿ ರೆಡಿಯಾಗುತ್ತದೆ.
ಇದು ಮಕ್ಕಳಿಗೆ ಸವಿಯಲು ನೀಡಿದರೆ ಅವರ ಆರೋಗ್ಯಕ್ಕೂ ಒಳ್ಳೆಯದು. ಜೊತೆಗೆ ರುಚಿಯು ಹೆಚ್ಚು, ನಿತ್ಯ ಊಟದ ಬಳಿಕ ಒಂದೊಂದು ಚಿಕ್ಕಿ ಸವಿಯಲು ನೀಡಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗಾದ್ರೆ ನೀವು ಸಹ ಒಮ್ಮೆ ಈ ರೆಸಿಪಿಯನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ. ಶೇಂಗಾ ಬೆಲ್ಲ ಎಣ್ಣೆ ಇದ್ದರೆ ಈ ಸಿಹಿ ತಿಂಡಿ ತಯಾರಿಸಬಬಹುದು.



Click it and Unblock the Notifications
