Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಶೇಂಗಾ ಮಿಠಾಯಿ ಚಿಕ್ಕಿ ಮನೆಯಲ್ಲೇ ಮಾಡಿ ನೋಡಿ! ಎಷ್ಟು ಸುಲಭ ಗೊತ್ತಾ?
ಅಂಗಡಿಗಳಲ್ಲಿ ಸಿಗುವಂತಹ ಹಲವು ರೀತಿಯ ತಿಂಡಿಗಳ ಸವಿಯುವುದು ಅಂದ್ರೆ ನಿಮಗೂ ಇಷ್ಟವಾಗಿರಬಹುದು. ಹಾಗೆ ಹಲವು ಖಾದ್ಯಗಳನ್ನು ಮನೆಯಲ್ಲೂ ಮಾಡಿ ಸವಿಯಲು ಮುಂದಾಗುವುದು ನೋಡಬಹುದು. ಅದರಲ್ಲೂ ಸಿಹಿ ತಿಂಡಿಗಳನ್ನು ಮನೆಯಲ್ಲೂ ಮಾಡಿ ಸವಿಯುವುದು ನೋಡಬಹುದು. ಅದರಲ್ಲು ಕೆಲವೊಂದು ತಿಂಡಿಯ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರು ಬರುತ್ತದೆ.
ಹಾಗೆ ಇಂತಹ ನೀರೂರಿಸುವ ತಿಂಡಿಗಳಲ್ಲಿ ಶೇಂಗಾ ಮಿಠಾಯಿ ಚಿಕ್ಕಿ ಕೂಡ ಒಂದು. ನೀವು ಸಹ ಚಿಕ್ಕವರಿರುವಾಗ ಈ ಚಿಕ್ಕಿಗಳ ಸವಿದಿರುತ್ತೀರಿ. ಅಂಗಡಿಗಳಲ್ಲಿ ಸಿಗುತ್ತಿದ್ದ ಈ ಚಿಕ್ಕಿಗಳು ಬಹಳ ರುಚಿಕರವಾಗಿ ಹಾಗೆ ಆರೋಗ್ಯಕ್ಕೆ ಉತ್ತಮವಾದ ತಿಂಡಿಯಾಗಿದ್ದವು. ಹಾಗೆ ಇದನ್ನು ಮಕ್ಕಳೂ ಬಹಳ ಇಷ್ಟಪಟ್ಟು ಸವಿಯುತ್ತಾರೆ. ಏಕೆಂದರೆ ಇದರ ಸಿಹಿ ಮಕ್ಕಳಿಗೆ ಬಹಳ ಇಷ್ಟವಾಗುತ್ತೆ.

ಇನ್ನು ಈ ಶೇಂಗಾ ಚಿಕ್ಕಿ ಮಾಡುವುದು ಬಹಳ ಸುಲಭ. ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಬಹುದು. ಹೀಗಾಗಿ ಈ ಬೇಸಿಗೆ ರಜೆಯ ಸಮಯದಲ್ಲಿ ನಾವು ರುಚಿ ರುಚಿಯ ಈ ಶೇಂಗಾ ಚಿಕ್ಕಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಶೇಂಗಾ ಮಿಠಾಯಿ ಚಿಕ್ಕಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಶೇಂಗಾ ಮಿಠಾಯಿ ಚಿಕ್ಕಿ ಮಾಡಲು ಬೇಕಾಗುವ ಪದಾರ್ಥಗಳು
- ನೆಲಗಡಲೆ - 250 ಗ್ರಾಂ
- ಸಕ್ಕರೆ - 250 ಗ್ರಾಂ
- ತುಪ್ಪ - 2 ಚಮಚ
ಶೇಂಗಾ ಮಿಠಾಯಿ ಚಿಕ್ಕಿ ಮಾಡುವುದು ಹೇಗೆ?
ಮೊದಲಿಗೆ ಒಲೆ ಮೇಲೆ ಬಾಣಲೆ ಇಟ್ಟು ಶೇಂಗಾ ಬೀಜ ಹಾಕಿಕೊಂಡು ಹುರಿದುಕೊಳ್ಳಿ. ಸಣ್ಣ ಉರಿಯಲ್ಲಿ ಉರಿದುಕೊಂಡು ಪ್ಲೇಟ್ಗೆ ಹಾಕಿ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಸಿಪ್ಪೆ ತೆಗೆದುಕೊಳ್ಳಬೇಕು. ನಂತರ ಮಿಕ್ಸಿ ಜಾರ್ಗೆ ಹಾಕಿಕೊಂಡು ರುಬ್ಬಿಕೊಳ್ಳಿ. ತರಿ ತರಿಯಾಗಿ ಬೀಜಗಳು ಕಾಣಿಸುವಂತೆಯೇ ಪುಡಿ ಮಾಡಿಕೊಳ್ಳಿ.
ಈಗ ಲಟ್ಟಿಣಿಗೆ ಹಾಗೆ ಒತ್ತು ಮಣೆಗೆ ತುಪ್ಪ ಹಚ್ಚಿಕೊಂಡು ಇಟ್ಟುಕೊಳ್ಳಿ. ಈಗ ಮತ್ತೆ ಒಲೆ ಮೇಲೆ ಬಾಣಲೆ ಇಟ್ಟು ಚಮಚದಲ್ಲಿ ತುಪ್ಪ ಹಾಕಿ ನಂತರ ಸಕ್ಕರೆ ಹಾಕಿ ಮಿಕ್ಸ್ ಮಾಡುತ್ತಾ ಕರಗಲು ಬಿಡಿ. ನೀರು ಹಾಕಿಕೊಳ್ಳದೆ ಚೆನ್ನಾಗಿ ಮಿಕ್ಸ್ ಮಾಡುತ್ತಾ ಪಾಕ ಮಾಡಿ. ಸಕ್ಕರೆ ಕರಗಿದ ಬಳಿಕ ಸಕ್ಕರೆ ಕರಗಿ ಜೇನು ತುಪ್ಪದಂತೆ ಆಗಬೇಕು.
ಸಕ್ಕರೆ ಕರಗಿದ ಬಳಿಕ ಈಗ ಪುಡಿ ಮಾಡಿಕೊಂಡ ಶೇಂಗಾ ಪುಡಿಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ತಕ್ಷಣ ಒಲೆ ಆಫ್ ಮಾಡಿಕೊಂಡು ತುಪ್ಪ ಹಚ್ಚಿಕೊಂಡಿರುವ ಒತ್ತು ಮಣೆಯ ಮೇಲೆ ಹಾಕಿಕೊಂಡು ಲಟ್ಟಣಿಗೆಯಿಂದ ಒತ್ತಿಕೊಳ್ಳಬೇಕು. ಅದು ತಣ್ಣಗಾಗಲು ಬಿಡಬೇಡಿ. ಇದು ಗಟ್ಟಿಯಾಗಿಬಿಡುತ್ತದೆ. ಲಟ್ಟಿಸಿಕೊಂಡ ಬಳಿಕ ಚಾಕುವಿನಿಂದ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಿ. ನಂತರ ತಣ್ಣಗಾಗಲು ಬಿಡಿ.
ಇಷ್ಟಾದರೆ ನಿಮ್ಮ ಮುಂದೆ ಅಂಗಡಿಯಲ್ಲಿ ಸಿಗುವಂತಹ ಶೇಂಗಾ ಮಿಠಾಯಿ ಚಿಕ್ಕಿ ರೆಡಿಯಾಗುತ್ತೆ. ನೀವು ಸಹ ಮಾಡಿ ನೋಡಿ ಅದರ ರುಚಿಗೆ ನೀವು ಪದೇ ಪದೇ ಮಾಡುತ್ತೀರಿ.



Click it and Unblock the Notifications
