Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸಂಜೆ ವೇಳೆ ಸವಿಯಲು ಪಾವ್ ಭಾಜಿ ಮಾಡಿ ನೋಡಿ..! ಎಷ್ಟೊಂದು ಸುಲಭ ಗೊತ್ತಾ?
ನಾವು ಸಂಜೆಯ ಸ್ನ್ಯಾಕ್ಸ್ ಸಮಯದಲ್ಲಿ ರಸ್ತೆ ಬದಿಯ ಚಾಟ್ ಮಸಾಲೆ ಪದಾರ್ಥಗಳ ಸವಿಯಲು ಇಷ್ಟಪಡುತ್ತೇವೆ. ಪಾನಿಪೂರಿ, ಗೋಬಿ, ಬೋಂಡಾ, ವಡೆ, ಬಜ್ಜಿ, ದೋಸೆ, ಹೀಗೆ ಹತ್ತಾರು ರೀತಿಯ ಸ್ನ್ಯಾಕ್ಸ್ ಸವಿಯುವುದು ಅಭ್ಯಾಸ ಆಗಿರುತ್ತೆ. ಇದರ ಜೊತೆಗೆ ಈಗ ಹೆಚ್ಚಿನವರು ಸಂಜೆ ಪಾವ್ ಭಾಜಿ ಸವಿಯುವುದನ್ನು ಇಷ್ಟಪಡುತ್ತಾರೆ. ಚಳಿಯಲ್ಲಿ ಬಾಯಿ ರುಚಿಯ ಪಾವ್ ಭಾಜಿ ಸವಿಯುತ್ತಿದ್ದರೆ ಬಾಯಲ್ಲಿ ನೀರು ಬರುತ್ತಿರುತ್ತದೆ.
ಪಾವ್ ಭಾಜಿಗೆ ಹಾಕಿರುವ ಮಸಾಲೆ, ಕಡಲೆ ಎಲ್ಲವೂ ಅದ್ಭುತ ರುಚಿಯ ಪಾವ್ ಭಾಜಿ ಮಾಡುತ್ತಾರೆ. ಬಿಸಿ ಬಿಸಿಯ ಈ ಪಾವ್ ಸವಿಯುತ್ತಿದ್ದರೆ ಸಂಜೆ ಸಮಯ ಅದ್ಭುತವಾಗಿರುತ್ತೆ. ಆದ್ರೆ ನಾವು ಈ ಪಾವ್ ಭಾಜಿಯನ್ನು ಮನೆಯಲ್ಲೇ ಮಾಡಿಕೊಳ್ಳಲು ಮುಂದಾಗುವುದು ಬಹಳ ಅಪರೂಪ. ಏಕೆಂದರೆ ಇದಕ್ಕೆ ಬಹಳ ಕೆಲಸ ಹಿಡಿಯಲಿದೆ ಎಂಬ ಕಾರಣಕ್ಕೆ ನಾವು ಮಾಡುವುದಿಲ್ಲ.

ಆದ್ರೆ ಈ ಪಾವ್ ಭಾಜಿಯನ್ನು ಆರಾಮವಾಗಿ ಮನೆಯಲ್ಲಿ ಕೆಲವೇ ನಿಮಿಷದಲ್ಲಿ ಮಾಡಬಹುದು. ಹಾಗಾದ್ರೆ ಮನೆಯಲ್ಲೇ ನಾವು ರುಚಿ ರುಚಿಯ ಪಾವ್ ಭಾಜಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಮನೆಯಲ್ಲಿ ಪಾವ್ ಭಾಜಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಪಾವ್ ಭಾಜಿ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪಾವ್ ಭಾಜಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಕ್ಯಾರೆಟ್
- ಪಾವ್ ಬನ್
- ಪಾವ್ ಭಾಜಿ ಮಸಾಲೆ
- ಹಸಿ ಬಟಾಣಿ
- ಆಲೂಗಡ್ಡೆ
- ಟೊಮೆಟೋ
- ಕ್ಯಾಪ್ಸಿಕಂ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಈರುಳ್ಳಿ
- ಖಾರದ ಪುಡಿ
- ಅರಶಿಣ ಪುಡಿ
- ನಿಂಬೆ
- ಕೊತ್ತಂಬರಿ
- ಬೆಣ್ಣೆ
- ಕಸೂರಿ ಮೇಥಿ
- ಫುಡ್ ಕಲರ್
- ಎಣ್ಣೆ
- ಉಪ್ಪು
ಪಾವ್ ಭಾಜಿ ಮಾಡುವ ವಿಧಾನವೇನು?
ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎರಡು ಸ್ಪೂನ್ ಎಣ್ಣೆ ಹಾಕಿಕೊಂಡು ಬಳಿಕ ಸಣ್ಣದಾಗಿ ಹೆಚ್ಚಿಕೊಂಡಿರುವ ಒಂದು ಈರುಳ್ಳಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ ನಂತರ ಸಣ್ಣದಾಗಿ ಹೆಚ್ಚಿಕೊಂಡಿರುವ ಟೊಮೆಟೋ ಹಾಕಿಕೊಂಡು ಫ್ರೈ ಮಾಡಿ. ನಂತರ ಬೇಗ ಬೇಯಲು ಉಪ್ಪು ಹಾಕಿಕೊಳ್ಳಿ.
ಈಗ ಖಾರದ ಪುಡಿ, ಅರಶಿಣ, ಹಾಗೆ ಪಾವ್ ಭಾಜಿ ಮಸಾಲೆಯನ್ನು ಹಾಕಿಕೊಂಡು ನಂತರ ಕಸೂರಿ ಮೇಥಿ ಹಾಕಿಕೊಂಡು ಕಲಸಿಕೊಳ್ಳಿ. 1 ನಿಮಿಷದ ಬಳಿಕ ಸಣ್ಣದಾಗಿ ಹೆಚ್ಚಿಕೊಂಡಿರುವ ಕ್ಯಾಪ್ಸಿಕಂ ಸಹ ಹಾಕಿಕೊಂಡು ಸ್ವಲ್ಪ ನೀರು ಹಾಕಿಕೊಂಡು ಕುದಿಯಲು ಬಿಡಿ. ಈಗ ಇದಕ್ಕೆ ಹೆಚ್ಚಿಕೊಂಡು ಕ್ಯಾರೆಟ್, ಆಲೂಗಡ್ಡೆ ಹಾಗೂ ಬಟಾಣಿ ಹಾಕಿಕೊಳ್ಳಿ.
ಈ ಬಟಾಣಿ ಆಲೂಗಡ್ಡೆ ಬಟಾಣಿ ಮೂರನ್ನು ಕೂಡ ಕುಕ್ಕರ್‌ನಲ್ಲಿ ಹಾಕಿಕೊಂಡು ಮೊದಲೇ ಒಂದು ಸೀಟಿ ಹೊಡೆಸಿಟ್ಟುಕೊಳ್ಳಿ. ಇದನ್ನು ಈಗ ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ಕುದಿಯಲು ಬಿಡಿ. ನಂತರ ಬಣ್ಣಕ್ಕಾಗಿ ಫುಡ್ ಕಲರ್ ಬಳಸಿಕೊಳ್ಳಿ. ಕೊನೆಯದಾಗಿ ಸ್ಪೂನ್ ಬೆಣ್ಣೆ, ಕೊತ್ತಂಬರಿ ಸೊಪ್ಪು ಹಾಕಿ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ನಂತರ ಒಲೆ ಆಫ್ ಮಾಡಿ ಮುಚ್ಚಳ ಮುಚ್ಚಿಡಿ.
ಈಗ ಒಲೆ ಮೇಲೆ ಒಂದು ಕಾವಲಿ ಅಥವಾ ಬಾಣಲೆ ಇಟ್ಟು ಅದಕ್ಕೆ ಬೆಣ್ಣೆ ಹಾಕಿಕೊಂಡು ನಂತರ ಪಾವ್ ಅನ್ನು ಹಾಕಿ ಸುತ್ತಬರಿಸಿ, ಭಾಜಿಯನ್ನು ಹಾಕಿಕೊಂಡು ಈ ಪಾವ್ ಅನ್ನು ಫ್ರೈ ಮಾಡಿ. 2 ನಿಮಿಷ ಫ್ರೈ ಮಾಡಿ, ನಂತರ ಈ ಪಾವ್ ಅನ್ನು ಮಾಡಿರುವ ಭಾಜಿ ಜೊತೆಗೆ ಸವಿಯಿರಿ. ಈ ರುಚಿಯಲ್ಲಿ ಪಾವ್ ಭಾಜಿ ಸವಿಯುತ್ತಿದ್ದರೆ ಬೇರೆ ಯಾವ ಸ್ನ್ಯಾಕ್ಸ್ ಕೂಡ ಸವಿಯಲು ನೀವು ಇಷ್ಟಪಡುವುದಿಲ್ಲ.



Click it and Unblock the Notifications
