Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಅಕ್ಕಿತರಿಯಿಂದ ಮಾಡುವ ಸುಲಭದ ಬ್ರೇಕ್ಫಾಸ್ಟ್: ಇದರ ರುಚಿ ತುಂಬಾ ಚೆನ್ನಾಗಿರುತ್ತೆ
Recipes
oi-Reena TK
Posted By: Reena TK
ಈ ಬ್ರೇಕ್ಫಾಸ್ಟ್ ಕೆಲವರಿಗೆ ಪರಿಚಯವಿರಬಹುದು, ಇನ್ನು ಕೆಲವರಿಗೆ ಪರಿಚಯ ಇಲ್ಲದೆಯೂ ಇರಬಹುದು, ಇದನ್ನು ದೋಕ್ಲಾ ಎಂದು ಕೂಡ ಕರೆಯಬಹುದು. ದೋಕ್ಲಾ ಅನೇಕ ರೀತಿಯಲ್ಲಿ ಮಾಡಬಹುದು, ಆದರೆ ಇದು ದೋಕ್ಲಾ ರೀತಿಯೇ ಅಕ್ಕಿ ತರಿ ಬಳಸಿ ಮಾಡುವ ಬ್ರೇಕ್ಫಾಸ್ಟ್ ರೆಸಿಪಿ, ಅಲ್ಲದೆ ಇದು ತುಂಬಾ ಸುಲಭದ ರೆಸಿಪಿ ಕೂಡ ಹೌದು.
ಈ ಪಾಪಟ್ಟು ಮಾಡಿ ಇದಕ್ಕೆ ಒಳ್ಳೆಯ ವೆಜ್ ಗ್ರೇವಿ ಅಥವಾ ವೆಜ್ ಕುರ್ಮಾ ಇದ್ದರೆ ಕಾಂಬಿನೇಷನ್ ಇನ್ನೂ ಸೂಪರ್ , ಇದನ್ನು ನಾನ್ ವೆಜ್ ಜೊತೆ ಟೇಸ್ಟ್ ಮಾಡ ಬಯಸುವವರು ನಾಟಿಕೋಳಿ ಸಾರು ಅಥವಾ ಮಟನ್ ಗ್ರೇವಿ ಜೊತೆ ಸವಿಯಬಹುದು, ಇನ್ನು ಬ್ರೇಕ್ಫಾಸ್ಟ್ ಮಕ್ಕಳ ಸ್ನ್ಯಾಕ್ಸ್ ಬಾಕ್ಸ್ಗೂ ರೆಡಿ, ಇದನ್ನು ಯಾವುದೇ ಸಾರು ಇಲ್ಲದೆಯೂ ಹಾಗೆಯೇ ಸವಿಯಬಹುದು.
ಬನ್ನಿ ಇದರ ರೆಸಿಪಿ ನೋಡೋಣ:

ಬೇಕಾಗುವ ಸಾಮಗ್ರಿ
ಅಕ್ಕಿ ತರಿ ಅಥವಾ ಅಕ್ಕಿ ಹಿಟ್ಟು ಒಂದು ಕಪ್
ತುಪ್ಪ 2-3 ಚಮಚ
ರುಚಿಗೆ ತಕ್ಕ ತುಪ್ಪ
ತೆಂಗಿನ ತುರಿ
ನೀರು 2 ಕಪ್
ಮಾಡುವ ವಿಧಾನ
- ಇದಕ್ಕೆ ನೀವು ತರಿ ತರಿ ಅಕ್ಕಿ ಹಿಟ್ಟು ಬಳಸಬೇಕು ಅಥವಾ ಅಕ್ಕಿ ತರಿ ಬಳಸಬಹುದು
- ಇದಕ್ಕೆ ಅಕ್ಕಿ ಹಿಟ್ಟು ರೆಡಿ ಮಾಡುವುದಾದರೆ ಅಕ್ಕಿಯನ್ನು ತೊಳೆದು ಒಣಗಿಸಿ ನಂತರ ಹುರಿದು ಬಳಿಕ ಮಿಕ್ಸಿಯಲ್ಲಿ ಹಾಕಿ ಎರಡು ರೌಂಡ್ ತರಿ ತರಿಯಯಾಗಿ ರುಬ್ಬಿದರೆ ಸಾಕು, ಇಲ್ಲಾಂದ್ರೆ ಕಡಬು ತರಿ ಕೂಡ ಬಳಸಬಹುದು
- ಈಗ ನೀವು ಇದನ್ನು ರೆಡಿ ಮಾಡಲು ಗುಂಡಿ ಸ್ವಲ್ಪ ಅಧಿಕವಿರುವ ತಟ್ಟೆ ಎಗೆದುಕೊಳ್ಳಿ, ಮೊದಲು ಚಿಕ್ಕ ತಟ್ಟೆ, ಅದರ ಮೇಲೆ ಸ್ವಲ್ಪ ದೊಡ್ಡದು ಈ ರೀತಿಯ ತಟ್ಟೆಗಳನ್ನೂ ಬಳಸಬಹುದು
- ಈಗ ನೀವು ಅಕ್ಕಿ ತರಿಗೆ ನೀರು ಹಾಕಿ ಅರ್ಧ ಗಂಟೆ ನೆನೆ ಹಾಕಿ
- ಬಳಿಕ ಅಕ್ಕಿ ತರಿಯನ್ನು ಪ್ಲೇಟ್ನ ಅರ್ಧಭಾಗ ತುಂಬುವಷ್ಟು ಹಾಕಿ
- ಬಳಿಕ ಪ್ಲೇಟ್ ತುಂಬುವ ರೀತಿಯಲ್ಲಿ ನೀರು ಹಾಕಿ, ಒಂದು ಕಲ್ಲು ಕಲ್ಲುಪ್ಪು ಹಾಕಿ, ತೆಂಗಿನ ತುರಿ ಹಾಕಿ , ಎಲ್ಲಾ ಪ್ಲೇಟ್ಗೂ ತುಪ್ಪ ಅವರಿ ಹೀಗೆಯೇ ಮಾಡಿ ಹಬೆಯಲ್ಲಿ (ಇಡ್ಲಿ ಪಾತ್ರೆಯಲ್ಲಿ 20-25 ನಿಮಿಷ ಬೇಯಿಸಿ)
- ನಂತರ ಬೆಂದ ಹಿಟ್ಟಿನ ಮೇಲೆ ತುಪ್ಪ ಹಾಕಿ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿದರೆ ಪಾಪಟ್ಟು ರೆಡಿ.
Comments
[ of 5 - Users]



Click it and Unblock the Notifications