Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಒಂದು ಲೀಟರ್ ಹಾಲಿನಿಂದ ಪನ್ನೀರ್ ಮಾಡುವುದು ಹೇಗೆ?
ಒಂದು 100 ಗ್ರಾಂ ಪನ್ನೀರ್ ಅಂಗಡಿಯಿಂದ ಖರೀದಿಸಿದಾಗ ಅದರ ಬೆಲೆ ನೋಡಿದಾಗ ಪನ್ನೀರ್ ದುಬಾರಿ ಅನಿಸುವುದು, ಅದೇ ನಿವು ಹಾಲು ತಂದು ಮನೆಯಲ್ಲಿಯೇ ಪನ್ನೀರ್ ಮಾಡಿದರೆ ನೀವು ಹೊರಗಡೆಯಿಂದ ಖರೀದಿಸುವ ದುಡ್ಡಿನಲ್ಲಿ ಇನ್ನೂ ಹೆಚ್ಚಿನ ತೂಕದ ಪನ್ನೀರ್ ರೆಡಿ ಮಾಡಬಹುದು.

ಹಾಲಿನಿಂದ ಪನ್ನೀರ್ ಮಾಡುವಾಗ ಹಾಲನ್ನು ಒಡೆಯಲು ಹುಳಿಯಂಶ ಬಳಸುತ್ತೇವೆ.
ನೀವು ಹಾಲು ಕುದಿಯುವಾಗ ಇದರಲ್ಲಿ ಯಾವುದಾದರೂ ಒಂದು ಹುಳಿಯಂಶ ಬಳಸಿದರೆ ಸಾಕು
ಹಾಲು ಒಡೆಯುತ್ತದೆ.
ನಿಂಬೆರಸ: ನೀವು ಒಂದು ಲೀಟರ್ ಹಾಲಿನಿಂದ ಮಾಡುವುದಾದರೆ
ಒಂದು ಎರಡು ಚಮಚ ನಿಂಬೆರಸ ಹಾಕಬಹುದು
ವಿನೆಗರ್: ಒಂದು ಲೀಟರ್ ಹಾಲಿಗೆ 2-3 ಚಮಚ ವಿನೆಗರ್
ಹಾಕಬಹುದು.
ಮೊಸರು ಕೂಡ ಹಾಕಬಹುದು: ನೀವು ಹಾಲಿಗೆ 3-4 ಮೊಸರು ಹಾಕಿ ಕೂಡ
ಪನ್ನೀರ್ ತಯಾರಿಸಬಹುದು, ಮೊಸರು ಇಲ್ಲದಿದ್ದರೆ ಮಜ್ಜಿಗೆ ಸೇರಿಸಿಬಹುದು.
ಹಾಲನ್ನು ಕಾಯಿಸುವಾಗ ಈ ಅಂಶಗಳನ್ನು ಗಮನಿಸಿ, ದಪ್ಪ ತಳವಿರುವ ಪಾತ್ರೆಗೆ
ಹಾಲನ್ನು ಹಾಕಿ ಬಿಸಿ ಮಾಡಿ.
ಹಾಲು ಕಾಯಿಸುವಾಗ ಕಡಿಮೆ ಉರಿಯಲ್ಲಿ ಕಾಯಿಸಿ, ಮೇಲ್ಭಾಗದಲ್ಲಿ ಕೆನೆಯ ಪದರ
ಉಂಟಾಗದಿರುಲು ಆಗಾಗ ಸೌಟ್‌ನಿಂದ ಆಡಿಸಿ.
ಹಾಲು ಕುದಿ ಬಂದಾಗ ಸೋಸಣಿಕೆಯಿಂದ ಹಾಲನ್ನು ಸೋಸಿ ಮತ್ತೊಂದು ಪಾತ್ರೆಗೆ ಹಾಕಿ, ಈಗ
ನಿಂಬೆರಸ ಅಥವಾ ವಿನೆಗರ್ ಅಥವಾ ಮೊಸರು, ಮಜ್ಜಿಗೆ ಅಂತ ಸೇರಿಸಿ, ನೀವು ಇವುಗಳನ್ನು
3-4 ಚಮಚ ಹಾಕಿದಷ್ಟು ಹಾಲು ಒಡೆದು ಸರಿಯಾದ ರೀತಿಯಲ್ಲಿ ಪನ್ನೀರ್ ಆಗಲು ಸಹಕಾರಿ.
ಹಿಗೆ ಮಾಡುವಾಗ ಹಾಲನ್ನು ಕಡಿಮೆ ಉರಿಯಲ್ಲಿ ಕಾಯಿಸಿ.
ನಂತರ ಉರಿ ಆರ್ಫ್ ಮಾಡಿ, ಒಂದು ಮಸ್ಲಿನ್ ಬಟ್ಟೆಗೆ ಒಡೆದ ಹಾಲನ್ನು ಹಾಕಿ, ನಂತರ
ಆ ಬಟ್ಟೆಯನ್ನು ಹಿಂಡಿ, ಹಾಲು ಒಡೆದು ಗಟ್ಟಿಯಾಗಿರುವ ಹಾಲಿನಂಶ ಬಟ್ಟೆಯಲ್ಲಿಯೇ
ಇರುತ್ತದೆ, ನಂತರ ಆ ಬಟ್ಟೆಯನ್ನು ಗಂಟು ಕಟ್ಟಿ ಒಮ್ಮೆ ತಣ್ಣೀರಿನಲ್ಲಿ ಅದ್ದಿ
ತೆಗೆಯಿರಿ, ಅದರೊಳಗಿದ್ದ ಒಡೆದು ಗಟ್ಟಿಯಾದ ಹಾಲಿನಂಶ ಹಾಗೇ ಇರಬೇಕು, ನಂತರ
ಗಟ್ಟಿಯಾಗಿ ಕಟ್ಟಿ. ನಂತರ ಸಿಂಕ್ ಪಕ್ಕದಲ್ಲಿ ಮೊಳೆಗೆ ನೇತು ಹಾಕಿ ಅಥವಾ ಇದನ್ನು
ನೇತು ಹಾಕಿ ಅದರ ನೀರು ಸೋಸಿ ಸಂಗ್ರಹವಾಗಲು ಪಾತ್ರೆ ಇಡಿ.
ಬಳಿಕ ಅದನ್ನು ತೆಗೆದು ಅದನ್ನು ಒಂದು ತಟ್ಟೆಯಲ್ಲಿ ಹಾಗೆಯೇ ಇಡಿ, ನಂತರ ಕುಟ್ಟುವ ಕಲ್ಲು ಅಥವಾ ಇನ್ನಿತರ ಭಾರವಿರುವ ವಸ್ತು ಇಟ್ಟು 30 ನಿಮಿಷ ಬಿಡಿ, ನಂತರ ತೆಗೆದು ನೋಡಿದರೆ ಗಟ್ಟಿಯಾದ ಚೀಸ್ ರೆಡಿ.
ಈಗ ರೆಡಿಯಾಗ ಪನ್ನಿರ್ ಅನ್ನು ಆಗಲೇ ಬಳಸಬಹುದು ಅಥವಾ ಫ್ರಿಡ್ಜ್‌ನಲ್ಲಿ 3-4 ದಿನಗಳವರೆಗೆ ಇಟ್ಟು ಬಳಸಬಹುದು.
ಪನ್ನೀರ್ ಮಾಡಲು ಯಾವ ಬಗೆಯ ಹಾಲು ಒಳ್ಳೆಯದು?
ಪನ್ನೀರ್ ಮಾಡಲು ಫುಲ್ ಫ್ಯಾಟ್ ಮಿಲ್ಕ್ (ಕೊಬ್ಬಿನಂಶ ತೆಗೆದಿರದ ಹಾಲು)
ಒಳ್ಳೆಯದು, ಇಂಥ ಹಾಲಿನಲ್ಲಿ ಮಾಡಿದರೆ ಪನ್ನೀರ್ ಹೆಚ್ಚು ಸಿಗುತ್ತದೆ ಹಾಗೂ
ಗುಣಮಟ್ಟವು ಚೆನ್ನಾಗಿರುತ್ತದೆ.



Click it and Unblock the Notifications
