Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬಾಯಲ್ಲಿ ನೀರು ತರಿಸುವ ಪನೀರ್ ಮಸಾಲ ದೋಸೆ..! ಮಾಡೋದು ಹೇಗೆ
ದೋಸೆ ಅಂದ್ರೆ ಯಾರಗೆ ತಾನೆ ಇಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿಡಿದು ವಯಸ್ಸಾದವರು ಸಹ ದೋಸೆಯನ್ನು ಬಾಯಿ ಚಪ್ಪರಿಸಿ ಸವಿಯುತ್ತಾರೆ. ಮನೆಯಲ್ಲಿ ಯಾವತ್ತೂ ಉಳಿಯದೆ ಖಾಲಿಯಾಗುವ ತಿಂಡಿ ಅಂದರೆ ಅದು ದೋಸೆ ಮಾತ್ರ. ಇನ್ನು ದಕ್ಷಿಣ ಭಾರತದ ಕೆಲವೇ ಕೆಲವು ಫೇಮಸ್ ಖಾದ್ಯದಲ್ಲಿ ದೋಸೆ ಸಹ ಒಂದಾಗಿದೆ.
ದೋಸೆ ತಿಂದ ಬಳಿಕ ಹೊಟ್ಟೆ ತುಂಬಿದಂತಾದರೂ ಇದರಲ್ಲಿ ಕಡಿಮೆ ಕ್ಯಾಲೋರಿಗಳಿರುವ ಕಾರಣ ಇದರಿಂದ ತೂಕ ಏರುವ ಸಂಭವ ಅತಿ ಕಡಿಮೆ. ಆದರೆ ಮಸಾಲೆಯಲ್ಲಿ ಆಲುಗಡ್ಡೆ ಇರುವ ಕಾರಣ ಇದು ಕೊಂಚ ತೂಕ ಹೆಚ್ಚಿಸಲು ನೆರವಾಗಬಹುದು. ಈ ಕಾರಣದಿಂದಲೂ ಹಲವು ದೋಸೆ ರುಚಿಗೆ ದಾಸರಾಗಿರುತ್ತಾರೆ.

ಸೆಟ್ ದೋಸೆ, ನೀರು ದೋಸೆ, ಮಸಾಲೆ ದೋಸೆ, ರವೆ ದೋಸೆ, ಈರುಳ್ಳಿ ದೋಸೆ, ಉದ್ದಿನ ದೋಸೆ, ದಪ್ಪ ದೋಸೆ, ತೆಳು ದೋಸೆ ಹೀಗೆ ಅನೇಕ ಬಗೆಯ ದೋಸೆಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಇತ್ತೀಚಿಗೆ ಅದೆಷ್ಟು ದೋಸೆ ರೆಸಿಪಿ ಬಂದಿವೆ ಅಂದರೆ ನೀವು ಊಹಿಸಲು ಸಹ ಸಾಧ್ಯವಿಲ್ಲ. ಇದರಲ್ಲಿ ಕೆಲವು ದೋಸೆಗಳ ಹೋಟೆಲ್ನಲ್ಲಿ ಸವಿದರೆ ಮತ್ತೆ ಕೆಲವನ್ನು ಮನೆಯಲ್ಲಿ ಮಾಡಿ ಸವಿದಿರುತ್ತೇವೆ.
ಆದ್ರೆ ನೀವು ಎಂದಾದರು ಪನೀರ್ ಮಸಾಲ ದೋಸೆ ಸವಿದಿದ್ದೀರಾ? ಕೆಲವು ಹೋಟೆಲ್ಗಳಲ್ಲಿ ವಿಶೇಷ ದೋಸೆ ರೆಸಿಪಿಯಾಗಿ ಈ ಪನೀರ್ ಮಸಾಲೆ ದೋಸೆ ಸಹ ಇರುತ್ತದೆ. ಆದರೆ ಈ ದೋಸೆಯನ್ನು ನಾವಿಂದು ಮನೆಯಲ್ಲೇ ಮಾಡೋದು ಹೇಗೆ ಎಂಬುದನ್ನು ನೋಡೋಣ. ಜೊತೆಗೆ ಈ ಪನೀರ್ ಮಸಾಲ ದೋಸೆ ಮಾಡಲು ಬೇಕಾಗುವ ವಸ್ತುಗಳೇನು? ಮಾಡಲು ಸರಿಯಾದ ವಿಧಾನವೇನು ಎಂಬುದನ್ನು ಸಹ ತಿಳಿದುಕೊಳ್ಳೋಣ.
ಪನೀರ್ ಮಸಾಲ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
ದೋಸೆ ಹಿಟ್ಟು - 1 ಬೌಲ್
ಪನೀರ್ - 150 ಗ್ರಾಂ
ಶುಂಠಿ - 1/2 ಟೀಸ್ಪೂನ್
ಬೆಳ್ಳುಳ್ಳಿ - 1/2 ಟೀಸ್ಪೂನ್
ಹಸಿರು ಮೆಣಸಿನಕಾಯಿ - 1
ಈರುಳ್ಳಿ - 1
ಟೊಮೆಟೊ - 1
ಬೀನ್ಸ್ - 3
ಕ್ಯಾಪ್ಸಿಕಂ - 3 tbs
ಕ್ಯಾರೆಟ್ - 1
ಖಾರದ ಪುಡಿ - 1/2 ಟೀಸ್ಪೂನ್
ಕೊತ್ತಂಬರಿ ಪುಡಿ-1/2 ಟೀಸ್ಪೂನ್
ಗರಂ ಮಸಾಲಾ ಪುಡಿ - 1/4 ಟೀಸ್ಪೂನ್
ಅರಿಶಿನ ಪುಡಿ - 1/4 ಟೀಸ್ಪೂನ್
ಕೊತ್ತಂಬರಿ ಸೊಪ್ಪು - 1 tbs
ಟೊಮೆಟೊ ಕೆಚಪ್ - 1 ಟೀಸ್ಪೂನ್
ಬೆಣ್ಣೆ - 3 ಟೀಸ್ಪೂನ್
ಅಡುಗೆ ಎಣ್ಣೆ
ರುಚಿಗೆ ಉಪ್ಪು
ಪನೀರ್ ಮಸಾಲ ದೋಸೆ ಮಾಡುವುದು ಹೇಗೆ?
ಮೊದಲು ದೋಸೆ ಹಿಟ್ಟನ್ನು ಸಾಮಾನ್ಯ ದೋಸೆಗೆ ಮಾಡುವಂತೆ ಮಾಡಿಟ್ಟುಕೊಳ್ಳಿ. ಇದರ ಜೊತೆ ಪನೀರ್ ಅನ್ನು ಸಣ್ಣದಾಗಿ ಕ್ಯಾರೆಟ್ ತುರಿದಂತೆ ತುರಿದುಕೊಳ್ಳಿ. ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬೆಣ್ಣೆ ಹಾಕಿಕೊಳ್ಳಿ. ಬಳಿಕ ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ (ಸಣ್ಣದಾಗಿ ಕತ್ತರಿಸಿದ್ದು,) ಈರುಳ್ಳಿ, ಬೀನ್ಸ್, ಕ್ಯಾಪ್ಸಿಕಂ, ಕ್ಯಾರೆಟ್ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಒಂದು 2 ನಿಮಿಷಗಳ ಕಾಲ ಫ್ರೈ ಮಾಡಿಕೊಂಡರೆ ಸಾಕಾಗುತ್ತದೆ. ಇದಾದ ಬಳಿಕ ಟೊಮೆಟೊ ಹಾಕಿಕೊಂಡು ಫ್ರೈ ಮಾಡಿ. ಇದಕ್ಕೆ ಅರಶಿಣ, ಗರಂ ಮಸಾಲ, ಧನಿಯ, ಖಾರದ ಪುಡಿ ಹಾಕಿಕೊಂಡು ಫ್ರೈ ಮಾಡಿ. ಇದಕ್ಕೆ ತುರಿದ ಪನೀರ್ ಹಾಕಿ, 2 ನಿಮಿಷ ಫ್ರೈ ಮಾಡಿದರೆ ಸಾಕು. ಕೊನೆಯದಾಗಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಇಳಿಸಿಕೊಳ್ಳಿ.
ಇನ್ನೊಂದು ಕಡೆ ಒಲೆ ಮೇಲೆ ದೋಸೆ ಕಾವಲಿ ಇಟ್ಟು ಅದಕ್ಕೆ ದೋಸೆ ಹಿಟ್ಟು ಹಾಕಿಕೊಳ್ಳಿ. ದೋಸೆ ಹಾಕಿದ ಮೇಲೆ ಅದರ ಮೇಲೆ ಬೆಣ್ಣೆ ಅಥವಾ ತುಪ್ಪ ಹಾಕಿ, ಅಲ್ಲದೆ ಟೊಮೆಟೊ ಕೆಚಪ್ ಸಹ ಹಾಕಬಹುದು. ಬಳಿಕ ಇದರ ಮೇಲೆ ನೀವು ಫ್ರೈ ಮಾಡಿಕೊಂಡಿರುವ ಮಸಾಲೆಯನ್ನು ಮಧ್ಯಕ್ಕೆ ಹಾಕಿ ದೋಸೆ ತುಂಬಲು ಹಚ್ಚಿಕೊಳ್ಳಿ. 3 ನಿಮಿಷ ಕಾಯಿಸಿಕೊಳ್ಳಿ. ಈ ದೋಸೆಯನ್ನು ಒಂದು ಬದಿ ಮಾತ್ರ ಬೇಯಿಸಿಕೊಂಡರೆ ಪನೀರ್ ಮಸಾಲ ದೋಸೆ ರೆಡಿಯಾಗುತ್ತದೆ.



Click it and Unblock the Notifications
