Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ತಿಂಡಿ ಯಾವುದೇ ಇರಲಿ ಈ ರೀತಿ ಪನ್ನೀರ್ ಕುರ್ಮ ಮಾಡಿ..! ಡಬಲ್ ರುಚಿಯಲ್ಲಿ ಸವಿಯಿರಿ!
ನೀವು ಬೆಳಗ್ಗೆ ತಿಂಡಿಯ ಸಮಯದಲ್ಲಿ ಪಲಾವ್, ರೈಸ್ ಬಾತ್, ವಾಂಗಿಬಾತ್‌ನಂತಹ ರೈಸ್ ಐಟಂ ಮಾಡಿದ್ದರೆ ಅದಕ್ಕೊಂದು ಮೊಸರು ಬಜ್ಜಿ ರೀತಿಯ ಸೈಡ್ಸ್ ಮಾಡಿರುತ್ತೀರಿ. ಹಾಗೆ ಚಪಾತಿ, ಪರೋಟ, ದೋಸೆ ಇದ್ದರೆ ಚಟ್ನಿ ಮಾಡುತ್ತೀರಿ. ಆದ್ರೆ ಈ ಎರಡು ಬಗೆಯ ತಿಂಡಿಗೀ ಒಂದೇ ಬಗೆಯ ಖಾದ್ಯ ಮಾಡಿದ್ರೆ ಅದರ ರುಚಿ ದುಪ್ಪಟ್ಟಾಗುತ್ತೆ. ಹೌದು ಅದರಲ್ಲೂ ಪನೀರ್ ಕುರ್ಮ ಮಾಡಿದ್ರೆ ಯಾವುದೇ ತಿಂಡಿಯ ಜೊತೆಗೆ ಸವಿಯಲು ಸಖತ್ ರುಚಿ ನೀಡುತ್ತೆ.
ಪಲಾವ್, ಪೂರಿ, ಬನ್ಸ್ ಜೊತೆಗೆ ತರಕಾರಿಯ ಒಂದು ಕುರ್ಮ ಮತ್ತಷ್ಟು ರುಚಿ ತರಲಿದೆ. ಆದ್ರೆ ನಾವಿಂದು ಪನೀರ್ ಕುರ್ಮ ಮಾಡುವ ಕುರಿತು ಇಲ್ಲಿ ತಿಳಿಯೋಣ. ಪನೀರ್‌ನಿಂದ ನೀವು ಹಲವು ರೀತಿಯ ಖಾದ್ಯ ಮಾಡಿ ಸವಿದಿರುತ್ತೀರಿ. ಪನೀರ್ ಎಲ್ಲರಿಗೂ ಇಷ್ಟವಾಗುವ ಪದಾರ್ಥ. ವೆಜ್ ಪ್ರಿಯರಿಗೆ ಪನೀರ್ ಬಹಳ ಇಷ್ಟವಾಗಲಿದೆ. ಈ ಪನೀರ್‌ನಿಂದ ನೀವು ಹಲವು ರೀತಿಯ ಖಾದ್ಯಗಳ ಮಾಡಿ ಸವಿದಿರುತ್ತೀರಿ.

ಹಾಗೆ ನಾವಿಂದು ಅದ್ಭುತ ರುಚಿಯ ಪನೀರ್ ಕುರ್ಮ ಮಾಡುವ ಕುರಿತು ತಿಳಿದುಕೊಳ್ಳೋಣ. ಪನೀರ್ ಕುರ್ಮ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಪನೀರ್ ಕುರ್ಮ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪನೀರ್ ಕುರ್ಮ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಪನೀರ್-
- ಗೋಡಂಬಿ
- ತೆಂಗಿನಕಾಯಿ
- ಗಸೆಗಸೆ
- ಈರುಳ್ಳಿ
- ಮೊಸರು
- ಟೊಮೆಟೋ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಎಣ್ಣೆ
- ಖಾರದ ಪುಡಿ
- ಧನಿಯಾ ಪುಡಿ
- ಏಲಕ್ಕಿ
- ಲವಂಗ
- ಮೆಣಸು
- ಚಕ್ಕೆ
- ಜೀರಿಗೆ
- ಗರಂ ಮಸಾಲೆ
- ಕಸೂರಿ ಮೇಥಿ
- ಪಲಾವ್ ಎಲೆ
- ಅರಶಿಣ
- ಉಪ್ಪು
ಪನೀರ್ ಕುರ್ಮ ಮಾಡುವ ವಿಧಾನವೇನು?
ಮೊದಲು ಮಿಕ್ಸಿ ಜಾರ್‌ಗೆ ಗೋಡಂಬಿ, ತೆಂಗಿನಕಾಯಿ, ಗಸೆ ಗಸೆ ಸ್ವಲ್ಪ ನೀರು ಹಾಕಿಕೊಂಡು ರುಬ್ಬಿ ಹಿಟ್ಟಿನಂತೆ ಮಾಡಿಟ್ಟುಕೊಳ್ಳಿ. ಈಗ 2 ಟೊಮೆಟೋ ಕೂಡ ಮಿಕ್ಸಿಗೆ ಹಾಕಿಕೊಂಡು ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ನಂತರ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಕತ್ತರಿಸಿಕೊಂಡ ಪನ್ನೀರ್ ಅನ್ನು ಹಾಕಿಕೊಂಡು ಫ್ರೈ ಮಾಡಬೇಕು.
2 ನಿಮಿಷ ಪನ್ನೀರ್‌ನ ಎಲ್ಲಾ ಭಾಗ ಕರಿಯುವಂತೆ ಮಾಡಿಕೊಂಡು ತೆಗೆದಿಟ್ಟುಕೊಳ್ಳಿ. ನಂತರ ಮತ್ತೆ ಇದಕ್ಕೆ ಎಣ್ಣೆ ಹಾಕಿ ಪಲಾವ್ ಎಲೆ, ಚಕ್ಕೆ, ಏಲಕ್ಕಿ, ಒಣ ಮೆಣಸು, ಜೀರಿಗೆ, ಲವಂಗ ಹಾಕಿಕೊಂಡು ಬಿಸಿ ಮಾಡಿ. ಎಣ್ಣೆ ಜಾಸ್ತಿ ಬಳಸಿಕೊಳ್ಳಿ. ಈಗ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ 2ರಿಂದ3 ಈರುಳ್ಳಿಯನ್ನು ಕೂಡ ಇದಕ್ಕೆ ಹಾಕಿ, ಹಾಗೆ ಉಪ್ಪು ಕೂಡ ಹಾಕಿ ಮಿಕ್ಸ್ ಮಾಡಿ.
1 ನಿಮಿಷದ ಬಳಿಕ ಅರಶಿಣ, ಕಾಲು ಕಪ್ ಮೊಸರು ಹಾಕಿ ಮಿಶ್ರಣ ಮಾಡಿ. ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ 2 ನಿಮಿಷ ಫ್ರೈ ಮಾಡಿ. ಈಗ ಖಾರದ ಪುಡಿ, ಧನಿಯಾ ಪುಡಿ ಹಾಕಿ ಮಿಕ್ಸ್ ಮಾಡಿ. ಈಗ ರುಬ್ಬಿಕೊಂಡಿರುವ ಟೊಮೆಟೋ ಪೇಸ್ಟ್ ಅನ್ನು ಇದಕ್ಕೆ ಹಾಕಿಕೊಂಡು 2 ಕಪ್ ನೀರು ಸಹ ಹಾಕಿ 2 ನಿಮಿಷ ಫ್ರೈ ಮಾಡಿ.
ಕುದಿಬರಲು ಆರಂಭಿಸಿದಾಗ ಉಪ್ಪು ಹಾಕಿಕೊಳ್ಳಿ. ಹಾಗೆ 2 ನಿಮಿಷ ಮುಚ್ಚಳ ಮುಚ್ಚಿ ಕುದಿಯಲು ಬಿಡಿ. ಈಗ ಫ್ರೈ ಮಾಡಿರುವ ಪನ್ನೀರ್ ಅನ್ನು ಹಾಕಿಕೊಂಡು ಮಿಕ್ಸ್ ಮಾಡಿ. ನಂತರ ಗರಂ ಮಸಾಲೆ, ಕಸೂರಿ ಮೇಥಿ ಕೂಡ ಹಾಕಿಕೊಂಡು ಮಿಶ್ರಣ ಮಾಡಿ. ಕೊನೆಯದಾಗಿ ಇದಕ್ಕೆ ಮೊದಲು ರುಬ್ಬಿರುವ ಗೋಡಂಬಿ, ಕಾಯಿಯ ಪೇಸ್ಟ್ ಅನ್ನು ಹಾಕಿಕೊಂಡಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ನೀರು ಹಾಕಿ ಕುದಿಯಲು ಬಿಡಿ.
ಮುಚ್ಚಳ ಮುಚ್ಚಿ ಸುಮಾರು 5 ರಿಂದ 6 ನಿಮಿಷ ಬಿಟ್ಟು ನಂತರ ಮುಚ್ಚಳ ತೆರೆದರೆ ಅತ್ಯದ್ಭುತ ರುಚಿಯ ಪನ್ನೀರ್ ಕುರ್ಮ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಟ್ರೈ ಮಾಡಿ ಟೇಸ್ಟ್ ನೋಡಿ.



Click it and Unblock the Notifications