Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಚಿಕನ್ ರುಚಿ ಮೀರಿಸುವ ಪನೀರ್ 65; ಮಾಡುವ ಸುಲಭದ ವಿಧಾನ ಇಲ್ಲಿದೆ!
ನಾನ್ ವೆಜ್ ಪ್ರಿಯರಿಗೆ ಚಿಕನ್ನಿಂದ ಮಾಡುವಂತಹ ಎಲ್ಲಾ ರೆಸಿಪಿಗಳು ರುಚಿಸಲಿವೆ. ಅದ್ರಲ್ಲೂ ಚಿಕನ್ ಕಬಾಬ್ ಅಂದ್ರೆ ಬಾಯಲ್ಲಿ ನೀರು ಬರೋದು ಪಕ್ಕಾ. ಆದ್ರೆ ವೆಜ್ ಪ್ರಿಯರಿಗೆ ಇದೇ ರೀತಿ ಚಿಕನ್ ರುಚಿಯ ಹಲವು ಖಾದ್ಯಗಳು ಇಷ್ಟವಾಗುತ್ತೆ. ಸೋಯಾದಿಂದ ಮಾಡುವಂತಹ ಗ್ರೇವಿಯಿಂದ ಹಿಡಿದು ಪನೀರ್ ಮಸಾಲೆಗಳು ಚಿಕನ್ ಖಾದ್ಯದ ರುಚಿ ನೀಡಲಿವೆ.
ಹಾಗೆ ನಾವಿಂದು ಪನೀರ್ನಿಂದ ಮಾಡುವಂತಹ ಪನೀರ್ 65 ರೆಸಿಪಿ ಕುರಿತಾಗಿ ತಿಳಿದುಕೊಳ್ಳೋಣ. ಚಿಕನ್ 65 ರೆಸಿಪಿಯಂತೆಯೇ ಕಾಣುವ ಈ ಪನೀರ್ 65 ಕೂಡ ಅದ್ಭುತ ರುಚಿ ನೀಡಲಿದೆ. ಮಾಡೋದು ಕೂಡ ಬಹಳ ಸುಲಭ. ಊಟದ ಜೊತೆಗೆ ಈ ಪನೀರ್ 65 ಬಹಳ ರುಚಿ ನೀಡಲಿದೆ. ಹಾಗಾದ್ರೆ ಪನೀರ್ ಬಳಸಿ ಮಾಡುವ ಈ ರುಚಿಯ ಖಾದ್ಯವನ್ನು ಮನೆಯಲ್ಲಿ ನಾವು ಮಾಡುವುದು ಹೇಗೆ?

ಪನೀರ್ನಲ್ಲಿ ಮಾಡುವ ಹಲವು ಖಾದ್ಯಗಳು ರುಚಿಯಲ್ಲಿ ಅದ್ಭುತವಾಗಿರಲಿದೆ. ಆದ್ರೆ ನಾವಿಂದು ಪನೀರ್ 65 ಮಾಡುವ ಕುರಿತು ತಿಳಿದುಕೊಳ್ಳೋಣ. ಪನೀರ್ 65 ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಮಾಹಿತಿ ತಿಳಿಯಿರಿ.
ಪನೀರ್ 65 ಮಾಡಲು ಬೇಕಾಗುವ ವಸ್ತುಗಳು
- ಪನೀರ್
- ಧನಿಯಾ ಪುಡಿ- 1ಸ್ಪೂನ್
- ಗರಂ ಮಸಾಲ- 1ಸ್ಪೂನ್
- ಉಪ್ಪು-ರುಚಿಗೆ ತಕ್ಕಷ್ಟು
- ಖಾರದ ಪುಡಿ
- ಕಸೂರಿ ಮೇಥಿ
- ಅರಶಿಣ
- ಶುಂಠಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕಾರ್ನ್ ಫ್ಲೋರ್- 2 ಸ್ಪೂನ್
- ಅಕ್ಕಿ ಹಿಟ್ಟು- 2 ಸ್ಪೂನ್
- ಮೊಸರು- ಸ್ವಲ್ಪ
- ಕೊತ್ತಂಬರಿ ಸೊಪ್ಪು
- ಎಣ್ಣೆ
ಪನೀರ್ 65 ಮಾಡುವ ಸುಲಭದ ವಿಧಾನವೇನು?
ಮೊಲಿಗೆ ಪನೀರ್ ಅನ್ನು ಚೌಕಾಕಾರವಾಗಿ ಕತ್ತರಿಸಿಕೊಳ್ಳಬೇಕು. ಯಾವ ಗಾತ್ರಕ್ಕೆ
ಬೇಕೋ ಆ ಗಾತ್ರಕ್ಕೆ ನೀವು ಕತ್ತರಿಸಿಕೊಳ್ಳಿ.
ನಂತರ ಒಂದು ಬೌಲ್ಗೆ ಖಾರದ ಪುಡಿ, ಧನಿಯಾ ಪುಡಿ, ಕಾಳು ಮೆಣಸಿನ ಪುಡಿ, ಉಪ್ಪು,
ಕಸೂರಿ ಮೇಥಿ, ಗರಂ ಮಸಾಲ, ಅರಶಿಣ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾರ್ನ್
ಫ್ಲೋರ್, ಮೊಸರು, ಅಕ್ಕಿ ಹಿಟ್ಟು ಹಾಕಿ 2 ಸ್ಪೂನ್ ನೀರು ಹಾಕಿ
ಕಲಸಿಕೊಳ್ಳಬೇಕು.
ಬೋಂಡಾ ಮಾಡಿಕೊಳ್ಳಲು ಮಾಡುವ ಹಿಟ್ಟಿನ ಹದಕ್ಕೆ ಬರಬೇಕು. ನಂತರ ಈ ಹಿಟ್ಟಿಗೆ
ಕತ್ತರಿಸಿಕೊಂಡ ಪನೀರ್ ಅನ್ನು ಗಹಾಕಿ ಮಿಶ್ರಣ ಮಾಡಿ.
ಎಲ್ಲಾ ಮಸಾಲೆಯು ಚೆನ್ನಾಗಿ ಹಿಡಿಯುವಂತೆ ಕಲಸಿಕೊಳ್ಳಬೇಕು. ಹಾಗೆ 10 ನಿಮಿಷ
ಮುಚ್ಚಳ ಮುಚ್ಚಿ ಮಸಾಲೆ ಚೆನ್ನಾಗಿ ಹಿಡಿಯಲು ಬಿಡಿ.
ಈ ಸಮಯದಲ್ಲಿ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು
ಬಿಸಿಯಾಗಲು ಬಿಡಿ. ಎಣ್ಣೆ ಬಿಸಿಯಾದಾಗ ಈ ಪನೀರ್ ಅನ್ನು ಎಣ್ಣೆಯಳಗೆ
ಬಿಡಬೇಕು.
ಎಣ್ಣೆ ತುಂಬ ಬಿಸಿಯಾಗಿಸಬೇಡಿ, ಮಧ್ಯಮ ಉರಿಯಲ್ಲಿ ಫ್ರೈ ಮಾಡಿಕೊಳ್ಳಬೇಕು.
ಎಣ್ಣೆಯಲ್ಲಿ ಕರಿದ ಬಳಿಕ ಇದನ್ನು ತೆಗೆದು ಒಂದು ಪ್ಲೇಟ್ಗೆ
ಹಾಕಿಟ್ಟುಕೊಳ್ಳಿ.
ಈಗ ಬಾಣಲೆ ಒಲೆ ಮೇಲೆ ಇಟ್ಟು 2 ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಕರಿಬೇವು,
ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು, ಒಣ ಮೆಣಸು ಹಾಕಿ 1 ನಿಮಿಷ ಫ್ರೈ ಮಾಡಿ.
ಹಾಗೆ ಉಪ್ಪು ಹಾಕಿದ ಬಳಿಕ ಫ್ರೈ ಮಾಡಿದ ಎಲ್ಲಾ ಪನೀರ್ ಅನ್ನು ಇದಕ್ಕೆ ಹಾಕಿ ಉರಿ
ದೊಡ್ಡದಾಗಿ ಇಟ್ಟುಕೊಂಡು ಫ್ರೈ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ
ಇಳಿಸಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಈ ಪನೀರ್ 65 ರೆಡಿಯಾಗುತ್ತೆ.



Click it and Unblock the Notifications