Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
recipe: ಪನ್ನೀರ್ 65 ಮಾಡುವುದು ನೀವು ಅಂದುಕೊಂಡಷ್ಟು ಕಷ್ಟ ಅಲ್ಲವೇ ಅಲ್ಲ....
Recipes
oi-Reena TK
Posted By: Reena TK
ನಿಮಗೆ ಪನ್ನೀರ್ ತುಂಬಾ ಇಷ್ಟವಾದರೆ ಅದರಿಂದ ಸ್ನ್ಯಾಕ್ಸ್ ಮಾಡಿ ಇನ್ನೂ ರುಚಿಯಾಗಿರುತ್ತದೆ, ಇದನ್ನು ನೀವು ತುಂಬಾನೇ ಸರಳವಾಗಿ ಮಾಡಬಹುದು, ರುಚಿ ರೆಸ್ಟೋರೆಂಟ್ ರುಚಿಯಂತೆಯೇ ಇರುತ್ತದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಚಮಚ
ಜೀರಿಗೆ ಪುಡಿ 1/2 ಚಮಚ
ಸ್ವಲ್ಪ ಗರಂ ಮಸಾಲ (ಅರ್ಧ ಚಮಚಕ್ಕಿಂತಲೂ ಕಡಿಮೆ)
ಅರ್ಧ ಚಮಚ ಕೊತ್ತಂಬರಿ ಪುಡಿ
1/2 ಚಮಚ ಖಾರದ ಪುಡಿ
1/2 ಚಮಚಕ್ಕಿಂತ ಕಡಿಮೆ ಉಪ್ಪು (ಮಿಕ್ಸ್ ಮಾಡಿದಾಗ ಉಪ್ಪು ಬೇಕೆನಿಸಿದರೆ
ಹಾಕಬಹುದು, ಮೊದಲೇ ಸೇರಿಸಬೇಡಿ)
ನಿಂಬೆ ಹಣ್ಣು 1
ಇತರ ಸಾಮಗ್ರಿ
4 ಚಮಚ ಜೋಳದ ಹಿಟ್ಟು ಅಥವಾ ಮೈದಾ
ಉಪ್ಪು
2 ಚಮಚ ಅಕ್ಕಿ ಹಿಟ್ಟು
- ಮೊದಲಿಗೆ ಪನ್ನೀರ್ ಅನ್ನು ಮಸಾಲೆ ಹಾಕಿಡಬೇಕು
- ಪನ್ನೀರ್ ಅನ್ನು ಚಿಕ್ಕದಾದ ಸಮ ತುಂಡುಗಳನ್ನಾಗಿ ಕತ್ತರಿಸಿ
- ಈಗ ಪನ್ನೀರ್‌ಗೆ ಪೇಸ್ಟ್ ಮಾಡಲು ಹೊರತು ಪಡಿಸಿ ಎಲ್ಲಾ ಸಾಮಗ್ರಿ ಪನ್ನೀರ್‌ಗೆ ಹಾಕಿ ಮಿಕ್ಸ್ ಮಾಡಿ ಇಡಿ
- ನಂತರ ಸ್ವಲ್ಪ ನೀರು ಅಥವಾ ಮೊಸರು ಹಾಕ ಮಿಕ್ಸ್ ಮಾಡಿ, ನೀವು ಇದನ್ನು ಕನಿಷ್ಠ 2 ಗಂಟೆ ಇಡಿ, ಬೇಕಿದ್ದರೆ ನಾಳೆ ಮಾಡಲು ಇವತ್ತೇ ಮಸಾಲೆ ಮಾಡಿಟ್ಟರೆ ಇನ್ನೂ ಒಳ್ಳೆಯದು.
ಇನ್ನು ಮತ್ತೊಂದು ಬೌಲ್‌ನಲ್ಲಿ ಮತ್ತೆ 1 ಚಮಚ ಮೆಣಸಿನ ಪುಡಿ, ನಿಂಬೆರಸ, ಸ್ವಲ್ಪ ಮೊಸರು ಹಾಕಿ ಸ್ವಲ್ಪ ಗಟ್ಟಿ ಪೇಸ್ಟ್ ಮಾಡಿಡಿ.
- ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಮಿಶ್ರ ಮಾಡಿ, ಎಣ್ಣೆ ಬಿಸಿಯಾದಾಗ ಕತ್ತರಿಸಿಟ್ಟ ಬೆಳ್ಳುಳ್ಳಿ, ಹಸಿ ಮೆಣಸು, ಕರಿಬೇವು, ಕಾಳು ಮೆಣಸಿ ಪುಡಿ ಹಾಕಿ 2 ನಿಮಿಷ ಫ್ರೈ ಮಾಡಿ.
- ನಂತರ ಆ ಖಾರದ ಪುಡಿ ಮಿಶ್ರಣ ಹಾಕಿ ಸೌಟ್‌ನಿಂದ ಮಿಕ್ಸ್ ಮಾಡಿ.
- ಈಗ ನೀವು ಸ್ವಲ್ಪ -ಸ್ವಲ್ಪ ಪನ್ನೀರ್ ಅನ್ನು ಜೋಳ ಅಥವಾ ಮೈದಾ ಹಿಟ್ಟು ಮಿಶ್ರಣಗೆ ಹಾಕಿ ನಂತರ ಎಣ್ಣೆಯಲ್ಲಿ ಕರಿಯಬೇಕು. ಹೀಗೆ ಎಲ್ಲಾ ಪನ್ನೀರ್ ಫ್ರೈ ಮಾಡಿದ ಮೇಲೆ ನೀವು ಬೇರೆ ಪಾತ್ರೆಯಲ್ಲಿ ಫ್ರೈ ಮಾಡಿಟ್ಟ ಮಸಾಲೆಗೆ ಹಾಕಿ ಮಿಕ್ಸ್ ಮಾಡಿ, ನಂತರ ಅದು ಡ್ರೈಯಾಗುವವರೆಗೆ ಫ್ರೈ ಮಾಡಿ, ಬಳಿಕ ಸ್ವಲ್ಪ ರೋಸ್ಟ್ ಮಾಡಿದ ಎಳ್ಳು ಉದುರಿಸಿ ಸರ್ವ್ ಮಾಡಿ.
Comments
[ of 5 - Users]
Story first published: Saturday, May 18, 2024, 14:34 [IST]
Other articles published on May 18, 2024



Click it and Unblock the Notifications
