Latest Updates
-
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ?
ರುಚಿ ರುಚಿಯ ಪಾಲಕ್ ಸೊಪ್ಪಿನ ಸಾರು ಮಾಡಿ ನೋಡಿ..!
ನಮ್ಮ ದೇಹಕ್ಕೆ ಮಾಂಸ, ಮೀನು, ಹಾಲು, ಮೊಟ್ಟೆ ಎಷ್ಟು ಮುಖ್ಯವೋ ಸೊಪ್ಪುಗಳು ಸಹ ಅಷ್ಟೇ ಮುಖ್ಯ, ಸೊಪ್ಪುಗಳಿಂದ ಕ್ಯಾಲ್ಸಿಯಂ, ಕಬ್ಬಿಣಾಂಶ ಹೇರಳವಾಗಿ ನಮಗೆ ಸಿಗುತ್ತದೆ. ಇದಲ್ಲದೆ ಸೊಪ್ಪಿನಿಂದ ಮುಖ್ಯವಾಗಿ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು, ವಿಟಮಿನ್ಗಳು ಸಹ ಸಿಗುತ್ತವೆ.
ದೇಹಕ್ಕೆ ಅಗತ್ಯವಾದ ರೋಗ ನಿರೋಧಕ ಶಕ್ತಿ ಸೇರಿದಂತೆ ದೇಹದ ಅಗತ್ಯಗಳ ಪೂರೈಸುತ್ತದೆ. ಹೀಗಾಗಿ ಸೊಪ್ಪಿನ ಪಲ್ಯ, ಸೊಪ್ಪಿನ ಸಾರು ಮಾಡಿ ಸೇವಿಸುವುದು ಉತ್ತಮ. ಹೀಗೆ ಸೊಪ್ಪಿನ ಸಾರು ಎಂದಾಗ ನೆನಪಾಗೋದು ಪಾಲಕ್ ಸೊಪ್ಪಿನ ಸಾರು. ಪಾಲಕ್ ಸೊಪ್ಪು ಅತ್ಯಧಿಕ ಕಬ್ಬಿಣಾಂಶದಿಂದ ಕೂಡಿರಲಿದೆ.

ಹೀಗಾಗಿ ಪಾಲಕ್ ಚಟ್ನಿ, ಪಾಲಕ್ ಸಾರು ಮಾಡಿ ಸವಿಯುಸುವುದು ದೇಹಕ್ಕೂ ನಿಮ್ಮ ಆರೋಗ್ಯಕ್ಕೂ ಬಹಳ ಉತ್ತಮ, ಪಾಲಕ್ನಲ್ಲಿ ವಿಟಮಿನ್ ಕೆ ಹೇರಳವಾಗಿದ್ದು, ನಿಮ್ಮ ಚರ್ಮ, ಕಣ್ಣಿನ ದೃಷ್ಟಿಗೆ ಉತ್ತಮ. ಜೊತೆಗೆ ಇದರಲ್ಲಿ ವಿಟಮಿನ್ ಬಿ ಸಹ ಇದ್ದು, ಸೂರ್ಯ ಕಿರಣದಿಂದ ನಿಮ್ಮ ಚರ್ಮಕ್ಕೆ ಹಾನಿಯಾಗಿದ್ದರೆ ಈ ಸೊಪ್ಪಿನ ಚಟ್ನಿ, ಸಾರು ಸೇವಿಸಿದರೆ ಉತ್ತಮ.
ಹಾಗಾದ್ರೆ ನಾವಿಂದು ಈ ಪಾಲಕ್ ಸೊಪ್ಪಿನಿಂದ ರುಚಿಕರ ಸಾರು ಮಾಡುವುದು ಹೇಗೆ? ಪಾಲಕ್ ಸೊಪ್ಪಿನ ಸಾರು ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ಪಾಕವಿಧಾನ ಯಾವುದು? ಎಂಬ ಕುರಿತು ತಿಳಿದುಕೊಳ್ಳೋಣ.
ಪಾಲಕ್ ಸೊಪ್ಪಿನ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ಪಾಲಕ್ ಸೊಪ್ಪು - 2 ಕಟ್ಟು
- ತೊಗರಿ ಬೇಳೆ - 50 ಗ್ರಾಮ್
- ಬೆಳ್ಳುಳ್ಳಿ - 1
- ಈರುಳ್ಳಿ- 1
- ಟೊಮೆಟೋ- 2
- ಒಣ ಮೆಣಸು - 3
- ಹಸಿ ಮೆಣಸು- 2
- ಸಾಸಿವೆ
- ಕರಿಬೇವು
- ಅರಶಿಣ
- ಜೀರಿಗೆ
- ಇಂಗು
- ಉಪ್ಪು
- ಎಣ್ಣೆ
ಪಾಲಕ್ ಸೊಪ್ಪಿನ ಸಾರು ಮಾಡುವ ವಿಧಾನ
ಮೊದಲು ಪಾಲಕ್ ಸೊಪ್ಪನ್ನು ತೊಳೆದು ಚೆನ್ನಾಗಿ ರೆಡಿ ಮಾಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಕುಕ್ಕರ್ ಒಟ್ಟು ಅದಕ್ಕೆ ತೊಗರಿ ಬೇಳೆ ಹಾಕಿ. ಸ್ವಲ್ಪ ನೀರು ಹಾಕಿಕೊಂಡು ಅದಕ್ಕೆ ಹಸಿ ಮೆಣಸು, ಬೆಳ್ಳುಳ್ಳಿ, ಟೊಮೆಟೋ, ಪಾಲಕ್ ಸೊಪ್ಪು, ಹಾಕಿಕೊಂಡು 3 ಸೀಟಿ ಹೊಡೆಯುವವರೆಗು ಬಿಡಿ.
3 ಸೀಟಿ ಹೊಡೆದ ಬಳಿಕ ಮುಚ್ಚಳ ತೆಗೆದು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅಂದರೆ ಇದು ಚೆನ್ನಾಗಿ ಪುಡಿಯಾಗುವಂತೆ ನುಣ್ಣಗೆ ಮಾಡಿಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಒಲೆಯಲ್ಲಿ ಇಟ್ಟು ಜೀರಿಗೆ, ಸಾಸಿವೆ, ಈರುಳ್ಳಿ, ಒಣ ಮೆಣಸು, ಕರಿಬೇವು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಬಳಿಕ ಇದಕ್ಕೆ ಇಂಗು ಹಾಗೂ ಅರಶಿಣ ಹಾಕಿಕೊಂಡು 1 ನಿಮಿಷ ಫ್ರೈ ಮಾಡಿಕೊಂಡರೆ ಸಾಕು. ಈ ಒಗ್ಗರಣೆ ತಯಾರಾದ ಬಳಿಕ ಅದನ್ನು ಕುಕ್ಕರ್ನಲ್ಲಿರುವ ಸಾರಿಗೆ ಹಾಕಿಕೊಂಡಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಾದರೆ ಒಲೆ ಮೇಲೆ ಇಟ್ಟು ಒಂದು ನಿಮಿಷ ಬಿಸಿ ಮಾಡಿದರೂ ಉತ್ತಮ.
ಇಷ್ಟಾದರೆ ನಿಮ್ಮ ಮುಂದೆ ಪಾಲಕ್ ಸೊಪ್ಪಿನ ಸಾರು ರೆಡಿಯಾಗಿರುತ್ತದೆ. ಈ ಸಾರು ಅನ್ನ, ಮುದ್ದೆ ಸೇರಿ ಎಲ್ಲಾ ರೀತಿ ಖಾದ್ಯದ ಜೊತೆ ಸವಿಯಬಹುದು. ಆರೋಗ್ಯಕ್ಕೂ ತುಂಬಾನೆ ಒಳ್ಳೆಯ ಸೊಪ್ಪಿನ ಸಾರು ಇದು.



Click it and Unblock the Notifications
