Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪಾಲಕ್ ರೈಸ್ ಮಾಡಿ ಸವಿಯಿರಿ..! 10 ನಿಮಿಷದ ರೆಸಿಪಿ
ನೀವು ರೈಸ್‌ನಲ್ಲಿ ಎಷ್ಟು ವೆರೈಟಿ ಫುಡ್ ಸವಿದಿದ್ದೀರಿ. ಲೆಕ್ಕವಿಲ್ಲದಷ್ಟು ಸವಿದಿರಬಹುದು. ಪಲಾವ್, ಬಿಸಿ ಬೇಳೆ ಬಾತ್, ಚಿತ್ರಾನ್ನ, ಪುಳಿಯೋಗರೆ, ವಾಂಗೀಬಾತ್ ಮಾಡಿ ಸವಿದಿರಬಹುದು. ಇದಿಷ್ಟೆ ಅಲ್ಲ ರೈಸ್‌ನಲ್ಲಿ ಹತ್ತು ಹಲವು ರೀತಿಯ ರುಚಿಕರ ಖಾದ್ಯ ಮಾಡಿ ಸವಿಯಬಹುದು.
ಬೆಳಗ್ಗೆ ತಿಂಡಿಗೆ ವಿಶೇಷವಾಗಿ ಏನಾದರು ಮಾಡಬೇಕು ಅಂದುಕೊಂಡಿದ್ದರೆ ನಿಮಗಾಗಿ ಇಂದು ಪಾಲಕ್ ರೈಸ್ ಮಾಡುವುದು ಹೇಗೆ ಎಂಬುದನ್ನು ನೋಡಿ. ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಇರುವುದರಿಂದ ಇದು ಆರೋಗ್ಯಕ್ಕೂ ಉತ್ತಮ. ಪಾಲಕ್ ಸೊಪ್ಪಿನಿಂದ ಪಲ್ಯ, ಗ್ರೇವಿಯನ್ನೂ ಮಾಡಬಹುದು. ಆದ್ರೆ ಪಾಲಕ್‌ನಿಂದ ಮಾಡುವ ರೈಸ್ ಸಿಕ್ಕಾಪಟ್ಟೆ ರುಚಿ ಇರುತ್ತದೆ.

ಹಾಗಾದರೆ ಪಾಲಕ್ ಸೊಪ್ಪಿನಿಂದ ರುಚಿಕರ ರೈಸ್ ಮಾಡುವುದು ಹೇಗೆ? ಈ ರೈಸ್ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ಪಾಕವಿಧಾನ ಏನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪಾಲಕ್ ರೈಸ್ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ - 1 ಬೌಲ್
- ಪಾಲಕ್ ಸೊಪ್ಪು - ಅರ್ಧ ಕಟ್ಟು
- ಚಕ್ಕೆ
- ಲವಂಗ
- ಏಲಕ್ಕಿ
- ಜೀರಿಗೆ
- ಹಸಿ ಮೆಣಸಿನಕಾಯಿ
- ಈರುಳ್ಳಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಪಲಾವ್ ಎಲೆ
- ಕರಿಬೇವು
- ಅರಶಿನ
- ಉಪ್ಪು ಎಣ್ಣೆ
ಪಾಲಕ್ ರೈಸ್ ಮಾಡುವ ವಿಧಾನ
ಮೊದಲಿ ಪಾಲಕ್ ಸೊಪ್ಪನ್ನು ಕ್ಲೀನ್ ಮಾಡಿಕೊಳ್ಳಬೇಕು. ಅದನ್ನು ಚೆನ್ನಾಗಿ ದೊಡ್ಡದಾಗಿ ಕತ್ತರಿಸಿಕೊಂಡು 5 ನಿಮಿಷ ಕುದಿಯುವ ನೀರಿನಲ್ಲಿ ಬೇಯಿಸಿಕೊಳ್ಳಬೇಕು. ಬೇಯಿಸಿಕೊಂಡ ಬಳಿಕ ಅದನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಂಡು ಪಾಲಕ್ ಪೇಸ್ಟ್ ಮಾಡಿಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಈ ಎಣ್ಣೆಗೆ ಜೀರಿಗೆ, ಸಾವಿವೆ, ಚಕ್ಕೆ, ಪವಾಲ್ ಎಲೆ, ಲವಂಗ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಬಳಿಕ ಈರುಳ್ಳಿ, ಹಸಿ ಮೆಣಸು ಹಾಕಿ ಹುರಿದುಕೊಳ್ಳಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಫ್ರೈ ಮಾಡಿ.
ಇದಾದ ಬಳಿಕ ಇದಕ್ಕೆ ರುಬ್ಬಿಕೊಂಡಿರುವ ಪಾಲಕ್ ಪೇಸ್ಟ್ ಹಾಕಿಕೊಂಡು ಮಿಕ್ಸ್ ಮಾಡಿ. 30 ಸೆಕೆಂಡ್ ಬಳಿಕ ಅದಕ್ಕೆ ಅರಶಿನ, ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಪಾಲಕ್ ಸೊಪ್ಪಿನ ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿಕೊಳ್ಳಬೇಕು.
5 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಅನ್ನವನ್ನು ಹಾಕಿ ಮಿಕ್ಸ್ ಮಾಡಿ. ನಿಮಗೆ ಎಷ್ಟು ಅಗತ್ಯವೋ ಅಷ್ಟು ಅನ್ನ ಹಾಕಿ ಮಿಕ್ಸ್ ಮಾಡಿ. ಈ ಗೊಜ್ಜನ್ನು ನೀವು ಎತ್ತಿಟ್ಟುಕೊಂಡು ವಾರಗಟ್ಟಲೆ ಇಟ್ಟುಕೊಂಡು ತಿನ್ನಬಹುದು. ಇಷ್ಟಾದರೆ ನಿಮ್ಮ ಮುಂದೆ ಪಾಲಕ್ ರೈಸ್ ಸವಿಯಲು ಸಿದ್ಧವಾಗುತ್ತದೆ. ಈ ಪಾಲಕ್ ಗೊಜ್ಜನ್ನು ಚಟ್ನಿ ರೀತಿಯಲ್ಲೂ ಸವಿಯಬಹುದು.
ಪಾಲಕ್ ಸೊಪ್ಪಿನ ಆರೋಗ್ಯಕರ ಅಂಶಗಳೇನು ಗೊತ್ತಾ?
ಪಾಲಕ್ ಸೊಪ್ಪು ನಿಮ್ಮ ಕರುಳುಗಳನ್ನು ಸ್ವಚ್ಛಗೊಳಿಸುತ್ತದೆ. ಪಾಲಕ್ ನಲ್ಲಿ ನಾರಿನ೦ಶವು ಅತ್ಯುನ್ನತವಾದ ಮಟ್ಟದಲ್ಲಿದೆ. ಪಾಲಕ್ ಸೊಪ್ಪನ್ನು ಹಾಗೆಯೇ ಹಸಿಯಾಗಿ ಸೇವಿಸಿದಾಗ, ನಿಮ್ಮ ಜೀರ್ಣಾ೦ಗವ್ಯೂಹವು ಶುದ್ಧೀಕರಿಸಲ್ಪಡುತ್ತದೆ. ಒ೦ದು ವೇಳೆ ನೀವೇನಾದರೂ ಮಲಬದ್ದತೆಯಿ೦ದ ಬಳಲುತ್ತಿದ್ದಲ್ಲಿ, ಪಾಲಕ್ ಸೊಪ್ಪಿನ ಜ್ಯೂಸ್ ನ ಆನಂದವನ್ನು ಅನುಭವಿಸಿರಿ.



Click it and Unblock the Notifications
