Latest Updates
-
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಪಾಲಕ್-ಪನ್ನೀರ್ ಬಳಸಿ ಈ ಚಪಾತಿ ಮಾಡಿ..! ಎಷ್ಟೊಂದು ರುಚಿ ಗೊತ್ತಾ?
ನೀವು ಬೆಳಗ್ಗೆಯ ತಿಂಡಿಗಾಗಿ ಹತ್ತು ಹಲವು ರೀತಿಯಲ್ಲಿ ಖಾದ್ಯಗಳ ಮಾಡಿ ಸವಿದಿರುತ್ತೀರಿ, ಅದರಲ್ಲೂ ಹೆಚ್ಚಾಗಿ ಚಪಾತಿ ಮಾಡಿ ಸವಿಯುವುದು ಕೂಡ ಕಾಮನ್. ಹಾಗೆ ರಾತ್ರಿ ಊಟದ ಸಮಯಕ್ಕೂ ಈ ಚಪಾತಿ ಅತ್ಯಂತ ಸಾಮಾನ್ಯ ಡಿಶ್, ತೂಕ ಇಳಿಸಲು ಮುಂದಾಗುವವರು ಹೆಚ್ಚು ಚಪಾತಿ ಸವಿಯುತ್ತಾರೆ, ಇದರಲ್ಲಿನ ಫೈಬರ್ ಅಂಶ ಜೀರ್ಣಕ್ರಿಯೆಗೆ ಬಹಳ ಸಹಕಾರಿಯಾಗುತ್ತದೆ.
ಇನ್ನು ಚಪಾತಿಯಲ್ಲಿ ಎಷ್ಟು ಬಗೆ ಇದೆ ಅಂದರೆ ಗೋಧಿ ಹಿಟ್ಟಿನಲ್ಲಿ ಹಾಗೆ ಕೆಲವೊಮ್ಮೆ ವಿಶೇಷವಾಗಿಯು ನೀವು ಚಪಾತಿ ಮಾಡಿ ಸವಿದಿರುತ್ತೀರಿ. ಅದರಲ್ಲೂ ನಾವಿಂದು ವಿಶೇಷವಾಗಿ ಪಾಲಕ್ ಹಾಗೂ ಪನೀರ್ ಚಪಾತಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಪಾಲಕ್ ಸೊಪ್ಪು ಬಳಸಿ ಅತ್ಯಂತ ರುಚಿ ರುಚಿಯಾಗಿ ನೋಡಲು ಆಕರ್ಷಕವಾಗಿ ಕಾಣಿಸುವಂತಹ ಚಪಾತಿ ಮಾಡಿ ಸವಿಯಬಹುದು.

ಪನೀರ್ ಚಪಾತಿ ನೋಡಲು ಎಷ್ಟು ಆಕರ್ಷಕವಾಗಿ ಕಾಣಿಸಲಿದ್ಯೋ ಹಾಗೆ ರುಚಿ ಕೂಡ ಅದ್ಭುತವಾಗಿರುತ್ತೆ. ಆದ್ರೆ ಈ ರೀತಿಯ ಚಪಾತಿ ಮಾಡುವುದು ಹೇಗೆ? ಪನೀರ್ ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದನ್ನು ನೀವು ತಿಳಿದಿದ್ದೀರಿ. ಪನೀರ್ನಿಂದ ಹಲವು ರೀತಿಯ ಖಾದ್ಯಗಳ ಮಾಡಿ ಸವಿಯಬಹುದು. ಹಾಗೆ ನೀವೆಂದು ಮಾಡಿರದ ಈ ರೀತಿಯ ಚಪಾತಿಯನ್ನು ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನೋಡೋಣ.
ಈ ಪನೀರ್ ಚಪಾತಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಪನೀರ್ ಚಪಾತಿ ಮಾಡಲು ಎಷ್ಟು ಸಮಯ ಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪಾಲಕ್ ಪನೀರ್ ಚಪಾತಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಪಾಲಕ್ ಸೊಪ್ಪು
- ಪನ್ನೀರ್- 100 ಗ್ರಾಂ
- ಗೋಧಿ ಹಿಟ್ಟು
- ಹಸಿ ಮೆಣಸಿನ ಕಾಯಿ
- ಹಸಿ ಶುಂಠಿ
- ಎಣ್ಣೆ
- ತುಪ್ಪು ರುಚಿಗೆ ತಕ್ಕಷ್ಟು
ಪಾಲಕ್ ಪನೀರ್ ಚಪಾತಿ ಮಾಡುವುದು ಹೇಗೆ?
ಮೊದಲು ಪಾಲಕ್ ಸೊಪ್ಪು, ಪನ್ನೀರ್ ಅನ್ನು ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ. ಹಾಗೆ ಹಸಿ ಮೆಣಸು, ಹಸಿ ಶುಂಠಿ ಕೂಡ ಹಾಕಿಕೊಂಡು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಎಲ್ಲಾ ಪದಾರ್ಥಗಳನ್ನು ಒಂದು ಬೌಲ್ಗೆ ಹಾಕಿಡಿ. ಹಾಗೆ ಇನ್ನೊಂದು ಬೌಲ್ಗೆ ಗೋಧಿ ಹಿಟ್ಟು ಹಾಕಿಕೊಂಡು ನಂತರ ಪುಡಿ ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಇದಕ್ಕೆ ಮಿಕ್ಸಿಯಲ್ಲಿ ರುಬ್ಬಿದ ಮಸಾಲೆಗಳನ್ನು ಸ್ವಲ್ಪ ಸ್ವಲ್ಪವೇ ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಚಪಾತಿ ಹಿಟ್ಟು ಹದ ಮಾಡುವಂತೆ ಹದಕ್ಕೆ ಮಾಡಿಕೊಳ್ಳಬೇಕು. ಪಾಲ್ ಸೊಪ್ಪಿನ ಈ ಪೇಸ್ಟ್ ಅನ್ನು ಸ್ವಲ್ಪ ಸ್ವಲ್ಪ ಹಾಕಿಕೊಂಡು ಹದ ಮಾಡಿಕೊಳ್ಳಿ. ನಂತರ ನೀರು ಕೂಡ ಸ್ವಲ್ಪ ಸ್ವಲ್ಪವೇ ಹಾಕಿಕೊಂಡು ಹಿಟ್ಟು ಹದ ಮಾಡಿಕೊಳ್ಳಿ.
ಹಾಗೆ ಎಣ್ಣೆ ಹಾಕಿಯೂ ಕಲಸಿಕೊಳ್ಳಿ., ನಂತರ 15 ನಿಮಿಷ ಮುಚ್ಚಳ ಮುಚ್ಚಿ ಹಾಗೆ ಇಡಿ. ಇದು ಹಸಿರು ಬಣ್ಣದಲ್ಲಿ ಮೃದುವಾಗಿ ಬಂದಿರುತ್ತದೆ. 15 ನಿಮಿಷದ ಬಳಿಕ ಹಿಟ್ಟನ್ನು ತೆಗೆದು ಸಾಮಾನ್ಯವಾಗಿ ನೀವು ಚಪಾತಿ ಮಾಡುವಂತೆಯೆ ಒಣ ಹಿಟ್ಟು ಬಳಸಿಕೊಂಡು ಲಟ್ಟಿಸಿಕೊಳ್ಳಿ. ಉಂಡೆಗಳ ಮಾಡಿಕೊಳ್ಳುತ್ತಾ ಲಟ್ಟಿಸಿಕೊಳ್ಳಿ.
ಅನಂತರ ಕಾವಲಿ ಮೇಲೆ ಒಂದೊಂದೆ ಚಪಾತಿ ಕಾಯಿಸಿಕೊಳ್ಳಿ. ಇಷ್ಟಾದರೆ ಪಾಲಕ್ ಪನೀರ್ನ ಅತ್ಯಂತ ರುಚಿ ರುಚಿಯ ಚಪಾತಿ ರೆಡಿಯಾಗುತ್ತೆ. ಆರೋಗ್ಯದ ಜೊತೆಗೆ ನೋಡಲು ಕೂಡ ಆಕರ್ಷಕವಾಗಿರುತ್ತೆ. ಮಕ್ಕಳಿಗೂ ಕೂಡ ಇದು ಬಹಳ ಇಷ್ಟವಾಗುತ್ತೆ. ಹಾಗೆ ಬಹಳ ರುಚಿಕರವಾಗಿಯೂ ಇರುತ್ತೆ. ಬೆಳಗ್ಗೆ ತಿಂಡಿಗೆ ಹಾಗೆ ರಾತ್ರಿಯ ಊಟಕ್ಕೂ ಕೂಡ ಈ ಚಪಾತಿ ಬಹಳ ರುಚಿ ನೀಡಲಿದೆ.



Click it and Unblock the Notifications