Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬಾಯಲ್ಲಿ ನೀರು ತರಿಸುವ ಪಾಲಕ್ ಪಕೋಡಾ ಸವಿದು ನೋಡಿ.!
ನೀವು ಸಂಜೆ ಸಮಯದಲ್ಲಿ ಸವಿಯಲು ಬಹಳ ರುಚಿ ರುಚಿಯಾದ ಸ್ನ್ಯಾಕ್ಸ್ ಸವಿಯುವ ಅಭ್ಯಾಸ ಇಟ್ಟುಕೊಂಡಿರಬಹುದು. ಹಾಗೆ ಊಟದ ಜೊತೆಗೂ ಈ ರೀತಿಯ ಯಾವುದಾದರು ಸ್ನ್ಯಾಕ್ಸ್ ಇದ್ದರೆ ಬಹಳ ರುಚಿಯಾಗಿರಲಿದೆ. ಅದ್ರಲ್ಲೂ ಬೋಂಡಾ, ಬಜ್ಜಿ, ಪಕೋಡಾ ಊಟದ ಜೊತೆಗೆ ಹಾಗೆ ಸಂಜೆಯ ಸಮಯದಲ್ಲಿ ಸ್ನ್ಯಾಕ್ಸ್ ಆಗಿ ಸವಿಯುವುವು ನೋಡಿದ್ದೇವೆ.
ಊಟದ ರುಚಿ ಹೆಚ್ಚಿಸಬೇಕಾದರೆ ಹಾಗೆ ಸಂಜೆ ಸಮಯದಲ್ಲಿ ಟೀ ಕಾಫಿ ಸವಿಯುವಾಗಲು ಯಾವುದಾದರು ಸ್ನ್ಯಾಕ್ಸ್ ಇದ್ದರೆ ಆ ರುಚಿಗೆ ಮತ್ತಷ್ಟು ಊಟ ಮಾಡುತ್ತೀರಿ. ಹಾಗೆ ಸಂಜೆ ಚಳಿಯಲ್ಲಿ ಯಾವುದಾದರು ಕರಿದ ತಿಂಡಿ ಇದ್ದರೆ ಬಹಳ ಇಷ್ಟವಾಗುತ್ತೆ. ಅದ್ರಲ್ಲೂ ಪಕೋಡಾ ಮಾಡಿ ಸವಿಯುವುದು ಎಲ್ಲರಿಗೂ ಇಷ್ಟವಾಗುವ ಸ್ನ್ಯಾಕ್ಸ್ ಆಗಿದೆ.

ಪಕೋಡಾದಲ್ಲಿ ಹಲವು ರೀತಿಯ ಖಾದ್ಯಗಳ ನೋಡಬಹುದು. ಅದ್ರಲ್ಲಿ ನಾವಿಂದು ಸುಲಭವಾಗಿ ಮಾಡಬಹುದಾದ ರುಚಿ ರುಚಿಯ ಹಾಗೆ ಆರೋಗ್ಯಕರವಾದ ಪಾಲಕ್ ಪಕೋಡಾ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಪಾಲಕ್‌ನಿಂದ ಹಲವು ರೀತಿಯ ಖಾದ್ಯಗಳ ಮಾಡಿ ಸವಿಯುವುದು ನೋಡಿರುತ್ತೀರಿ.
ಆದ್ರೆ ಈ ರೀತಿ ಪಾಲಕ್ ಪಕೋಡಾ ಮಾಡಿ ಸವಿದು ನೋಡಿ. ಇದರ ರುಚಿ ಒಮ್ಮೆ ಸವಿದರೆ ನೀವು ಪದೇ ಪದೇ ಸವಿಯಲು ಮುಂದಾಗುತ್ತೀರಿ. ಹಾಗಾದ್ರೆ ಪಾಲಕ್ ಪಕೋಡಾ ಮಾಡುವುದು ಹೇಗೆ? ಪಾಲಕ್ ಪಕೋಡಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪಾಲಕ್ ಪಕೋಡಾ ಮಾಡಲು ಬೇಕಾಗುವ ವಸ್ತುಗಳು
- ಪಾಲಕ್ ಸೊಪ್ಪು
- ಅಕ್ಕಿ ಹಿಟ್ಟು
- ಕೊತ್ತಂಬರಿ ಕಾಳು
- ಕಡಲೆ ಹಿಟ್ಟು
- ಕೊತ್ತಂಬರಿ ಸೊಪ್ಪು
- ಕರಿಬೇವು
- ಓಂಕಾಳು
- ಜೀರಿಗೆ
- ಇಂಗು
- ಖಾರದ ಪುಡಿ
- ಉಪ್ಪು
- ಎಣ್ಣೆ
- ಇಂಗು
ಪಾಲಕ್ ಪಕೋಡಾ ಮಾಡುವುದು ಹೇಗೆ?
ಮೊದಲು ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಹೆಚ್ಚಿದ ಸೊಪ್ಪುಗಳ ಹಾಕಿ ಬಳಿಕ ಕತ್ತರಿಸಿಕೊಂಡ ಒಂದು ಈರುಳ್ಳಿ ಸೇರಿಸಿ. ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಪುಡಿ ಮಾಡಿದ ಶುಂಠಿ ಹಾಗೂ ಕೊತ್ತಂಬರಿ ಕಾಳು, ಓಂಕಾಳು, ಜೀರಿಗೆ ಕೂಡ ಹಾಕಿಕೊಳ್ಳಿ. ಹಾಗೆ ಚಿಟಿಕೆ ಇಂಗು, ಖಾರದ ಪುಡಿ, ಉಪ್ಪು, ಕರಿಬೇವು ಸೊಪ್ಪು ಹಾಕಿ.
ಬಳಿಕ ಸ್ವಲ್ಪ ಅಕ್ಕಿ ಹಿಟ್ಟು ಹಾಕಿಕೊಳ್ಳಿ. ಚಮಚ ಅಳತೆಯಲ್ಲಿ ಅಕ್ಕಿ ಹಿಟ್ಟು ಹಾಕಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಅರ್ಧ ಕಪ್ ಕಡಲೆ ಹಿಟ್ಟು ಹಾಕಿ ನೀರು ಹಾಕದೆ ಮಿಕ್ಸ್ ಮಾಡಿಕೊಳ್ಳಿ. ನಂತರ ಮತ್ತೆ ಅರ್ಧ ಕಪ್ ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಹಾಗೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹದ ಮಾಡಿ ಕೊಳ್ಳಿ.
ಹಿಟ್ಟು ಬಹಳ ತೆಳುವಾಗಿ ಮಾಡಿಕೊಳ್ಳಬೇಡಿ. ಉಂಡೆ ಕಟ್ಟುವ ಹದಕ್ಕೆ ಅಂಟು ಅಂಟಾಗಿ ಈ ಹಿಟ್ಟು ಹದಕ್ಕ ಬರುವಂತೆ ಮಾಡಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ನಂತರ ಸಣ್ಣ ಸಣ್ಣದಾಗಿ ಉಂಡೆ ಕಟ್ಟದೆಯೇ ಹಾಗೆಯೆ ಬಿಡಿ. ಸಣ್ಣ ಉರಿಯಲ್ಲಿ ಚೆನ್ನಾಗಿ ಕರಿದುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಪಾಲಕ್ ಪಕೋಡಾ ರೆಡಿಯಾಗುತ್ತದೆ. ಸಂಜೆ ಸ್ನ್ಯಾಕ್ಸ್ ಹಾಗೆ ಊಟದ ಜೊತೆಗೂ ಇದು ಅದ್ಭುತ ರುಚಿ ನೀಡಲಿದೆ. ನೀವು ಕೂಡ ಇದನ್ನು ಮಾಡಿ ಸವಿದು ನೋಡಿ. ಮಕ್ಕಳಿಗೂ ಕೂಡ ಇದು ಬಹಳ ಇಷ್ಟವಾಗಲಿದೆ.



Click it and Unblock the Notifications
