Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆರೋಗ್ಯಕ್ಕೆ ಬೆಸ್ಟ್, ಊಟದ ರುಚಿ ಹೆಚ್ಚಿಸುವ ಟೇಸ್ಟ್! ಇಲ್ಲಿದೆ ಪಾಲಕ್ ತಂಬುಳಿ
ಪಾಲಕ್ ಸೊಪ್ಪಿನ ಹಲವು ರೀತಿಯ ಪ್ರಯೋಜನಗಳನ್ನು ನೀವು ತಿಳಿದಿರಬಹುದು. ಅದ್ರಲ್ಲೂ ಪಾಲಕ್‌ನಿಂದ ರುಚಿ ರುಚಿಯ ಖಾದ್ಯಗಳ ಮಾಡಿ ಸವಿದಿರುತ್ತೀರಿ. ಹಾಗೆ ಪಾಲಕ್ ನಿಮ್ಮ ದೇಹಕ್ಕೆ ಕೂಡ ಬಹಳ ಉತ್ತಮ ಹಸಿರು ತರಕಾರಿಯಾಗಿದೆ. ಪಾಲಕ್ ಸೊಪ್ಪು ಕಬ್ಬಿಣ, ವಿಟಮಿನ್ ಎ, ಸಿ, ಮತ್ತು ಕೆ, ಫೋಲೇಟ್, ಮತ್ತು ನಾರಿನಾಂಶಗಳಂತಹ ಪೋಷಕಾಂಶಗಳ ಹೊಂದಿದೆ.
ಈ ಪಾಲಕ್ ಸೊಪ್ಪು ರಕ್ತಹೀನತೆ ತಡೆಗಟ್ಟಲು, ಮೂಳೆಗಳನ್ನು ಬಲಪಡಿಸಲು, ದೃಷ್ಟಿ ಮತ್ತು ಚರ್ಮದ ಆರೋಗ್ಯವನ್ನು ಸುಧಾರಿಸಲು, ಹಾಗೂ ಮಲಬದ್ಧತೆ ನಿವಾರಿಸಲು ಸಹಕಾರಿಯಾಗಿದೆ. ಕೆಲವು ಅಧ್ಯಯನಗಳ ಪ್ರಕಾರ ಪಾಲಕ್ ಸೊಪ್ಪು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಹ ವಿವರಿಸಲಾಗಿದೆ.

ಪಾಲಕ್ ಸೊಪ್ಪು ಬಳಸಿ ಹಲವು ರೀತಿಯ ಖಾದ್ಯಗಳ ಮಾಡಿ ಸವಿಯುತ್ತೀರಿ. ಅದ್ರಲ್ಲೂ ಪಾಲಕ್ ಸೊಪ್ಪಿನ ವಡೆ, ದೋಸೆ, ಹಾಗೆ ಗ್ರೇವಿ ಸೇರಿದಂತೆ ವಿವಿಧ ಖಾದ್ಯಗಳ ಮಾಡಿ ಸವಿಯೋದು ಸಾಮಾನ್ಯ. ಆದರೆ ನಾವಿಂದು ಪಾಲಕ್‌ನಿಂದ ಮಾಡುವಂತಹ ತಂಬುಳಿ ಕುರಿತು ತಿಳಿದುಕೊಳ್ಳೋಣ. ಇದು ನಿಮ್ಮ ದೇಹಕ್ಕೆ ಬಹಳ ತಂಪು ನೀಡಲಿದೆ.
ಹಾಗಾದ್ರೆ ಈ ಪಾಲಕ್ ಸೊಪ್ಪಿನ ತಂಬುಳಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿಯೋಣ.
ಪಾಲಕ್ ಸೊಪ್ಪಿನ ತಂಬುಳಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಪಾಲಕ್ ಸೊಪ್ಪು
- ತೆಂಗಿನಾಕಾಯಿ
- ಜೀರಿಗೆ
- ಸಾಸಿವೆ
- ತುಪ್ಪ ಅಥವಾ ಬೆಣ್ಣೆ
- ಉಪ್ಪು
- ಒಣ ಮೆಣಸು
- ಹಸಿ ಮೆಣಸು
- ಕರಿಬೇವು
ಪಾಲಕ್ ಸೊಪ್ಪಿನ ತಂಬುಳಿ ಮಾಡುವ ಸುಲಭದ ವಿಧಾನವೇನು?
ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ನಂತರ ದೊಡ್ಡದಾಗಿ ಕತ್ತರಿಸಿಕೊಂಡು ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಅರ್ಧ ಚಮಚ ತುಪ್ಪ ಅಥವಾ ಬೆಣ್ಣೆ ಹಾಕಿ ಬಿಸಿ ಮಾಡಿ.
ಅನಂತರ ಇದಕ್ಕೆ ಜೀರಿಗೆ ಹಾಗೂ 1 ಹಸಿ ಮೆಣಸು ಹಾಕಿ ಹುರಿದುಕೊಳ್ಳಬೇಕು. 1 ನಿಮಿಷ ಬಿಟ್ಟು ಇದಕ್ಕೆ ಕತ್ತರಿಸಿಕೊಂಡ ಪಾಲಕ್ ಸೊಪ್ಪು ಹಾಕಿಕೊಂಡು ಹುರಿದುಕೊಳ್ಳಬೇಕು. ಸಣ್ಣ ಉರಿಯಲ್ಲಿ ಇದನ್ನು ಹುರಿದುಕೊಳ್ಳಬೇಕು. ಈ ಸೊಪ್ಪು ಬಾಡಿದ ಬಳಿಕ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ ಹಾಕಿಕೊಳ್ಳಿ. ಹಾಗೆ ಹುರಿದುಕೊಂಡ ಸೊಪ್ಪು ಸೇರಿ ಎಲ್ಲಾ ಪದಾರ್ಥ ಹಾಕಿ, ನೀರು, ಉಪ್ಪು ಸಹ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
ರುಬ್ಬಿಕೊಂಡ ಈ ತಂಬುಳಿಯನ್ನು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಅನಂತರ ಈ ಪಾಲಕ್ ಗ್ರೇವಿಗೆ ಮಜ್ಜಿಗೆ ಹಾಕಿಕೊಳ್ಳಿ. ಈಗ ಒಂದು ಒಗ್ಗರಣೆ ಮಾಡಿಕೊಳ್ಳಿ.
ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಒಣ ಮೆಣಸು, ಕರಿಬೇವು ಹಾಕಿ ಒಗ್ಗರಣೆ ಮಾಡಿ ಈ ತಂಬುಳಿಗೆ ಹಾಕಿ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಪಾಲಕ್ ಸೊಪ್ಪಿನ ತಂಬುಳಿ ಸಿದ್ದವಾಗುತ್ತೆ. ನೀವು ಕೂಡ ಊಟದೊಂದಿಗೆ ಸವಿಯಲು ಈ ತಂಬುಳಿ ಮಾಡಿ ಸವಿದು ನೋಡಿ. ಅದರ ರುಚಿಗೆ ಊಟದ ಮಜಾ ಮತ್ತಷ್ಟು ಹೆಚ್ಚಾಗೋದು ಖಚಿತ.



Click it and Unblock the Notifications
