Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪಾಲಕ್ ಸೊಪ್ಪಿನಿಂದ ಮಾಡಿ ರುಚಿ ರುಚಿ ಮಸಾಲ ವಡೆ..!
ಸಂಜೆ ಸ್ನ್ಯಾಕ್ಸ್ಗೆ ರುಚಿ ರುಚಿಯ ವಡೆ ರೆಸಿಪಿಯನ್ನು ನಾವು ಈ ಮೊದಲೇ ಹೇಳಿದ್ದೇವೆ. ವಡೆಯಗಳಲ್ಲಿ ಹತ್ತಾರು ರೀತಿಯ ವಡೆಗಳ ಮಾಡಿ ಸವಿದಿದ್ದೇವೆ. ಕಡಲೆ ವೇಳೆ ವಡೆ, ಮದ್ದೂರು ವಡೆ, ನೆಲಗಡೆಲೆ, ಹುರಿಗಡಲೆ ವಡೆಗಳ ಮಾಡಿ ಸವಿದಿರುತ್ತೇವೆ. ಸಂಜೆ ಸ್ನ್ಯಾಕ್ಸ್ಗೆ ಹಾಗೂ ಮಧ್ಯಾಹ್ನ, ರಾತ್ರಿ ಊಟಕ್ಕೂ ಈ ವಡೆ ಹೇಳಿ ಮಾಡಿಸಿದ ಸೈಡ್ ಡಿಶ್.
ಮಕ್ಕಳಿಂದ ಹಿಡಿದು ಹಿರಿಯರು ಸಹ ಇದನ್ನು ಇಷ್ಟ ಪಡುತ್ತಾರೆ. ಹಬ್ಬದಲ್ಲೂ ಈ ವಡೆ ಮಾಡೋದು ಇದೆ. ಆದ್ರೆ ನೀವು ಎಂದಾದ್ರು ಪಾಲಕ್ ಬಳಸಿ ಈ ವಡೆ ಮಾಡಿದ್ದೀರಾ?, ಪಾಲಕ್ ಸೊಪ್ಪಿನ್ನು ಬಳಸಿ ಈ ಮಸಾಲೆ ವಡೆ ಮಾಡಲಾಗುತ್ತೆ. ಉತ್ತರ ಭಾರತದಲ್ಲಿ ಈ ರೀತಿಯ ವಡೆ ರೆಸಿಪಿ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದೆ.

ನಿಮಗೆ ಗೊತ್ತಿರುವಂತೆ ಪಾಲಕ್ ಸೊಪ್ಪಿಯಲ್ಲಿ ಐರನ್ ಅಂಶ ಹಾಗೂ ಆರೋಗ್ಯಕರ ಅಂಶಗಳ ಹೊಂದಿದೆ. ಈ ವಡೆ ಆರೋಗ್ಯದ ದೃಷ್ಟಿಯಿಂದಲೂ ಬೆಸ್ಟ್ ಎನಿಸಿದೆ. ಹಾಗಾದ್ರೆ ನಾವಿಂದು ಈ ಪಾಲಕ್ ಸೊಪ್ಪಿನಿಂದ ಮಾಡಲಾಗುವ ವಡೆಯ ಕುರಿತು ತಿಳಿದುಕೊಳ್ಳೋಣ. ಈ ಪಾಲಕ್ ವಡೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಪಾಲಕ್ ವಡೆಗೆ ಬೇಕಾಗುವ ಪದಾರ್ಥಗಳು, ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿಯೋಣ.
ಪಾಲಕ್ ವಡೆ ಮಾಡಲು ಬೇಕಾಗುವ ಪದಾರ್ಥಗಳು
- ಪಾಲಕ್ ಸೊಪ್ಪು- 1 ಕಟ್
- ಬೆಳ್ಳುಳ್ಳಿ - 6 ಎಸಳು
- ಶುಂಠ-
- ಎಣ್ಣೆ
- ಉಪ್ಪು
- ಕಡಲೆ ಹಿಟ್ಟು
- ಅಕ್ಕಿ ಹಿಟ್ಟು
- ಕಾಳು ಮೆಣಸು
- ಹಸಿ ಮೆಣಸು
- ಒಣ ಮೆಣಸು
- ಹೆಸರು ಬೇಳೆ
- ಜೀರಿಗೆ
- ಗರಂ ಮಸಾಲ
- ಅರಶಿನ
ಪಾಲಕ್ ವಡೆ ಮಾಡುವ ವಿಧಾನ
ಮೊದಲು ಒಂದು ಕಟ್ ಪಾಲಕ್ ಸೊಪ್ಪು ತೆಗೆದು ಕೊಂಡು ಚೆನ್ನಾಗಿ ತೊಳೆದುಕೊಳ್ಳಿ. ಬಳಿಕ ಅದನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಮತ್ತೊಂದು ಬೌಲ್ನಲ್ಲಿ ಅರ್ಧ ಕಪ್ ಹೆಸರು ಬೇಳೆ ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಬಿಸಿ ನೀರಿನಲ್ಲಿ ಇದನ್ನು ನೆನೆಸಿಡಿ. 10 ನಿಮಿಷ ನೆನೆಸಿಟ್ಟರೆ ಸಾಕಾಗುತ್ತದೆ.
ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ, ಶುಂಠಿ, ಜೀರಿಗೆ, ಕಾಳು ಮೆಣಸು, ಒಣ ಮೆಣಸು, ನೀರು ಹಾಕಿಕೊಂಡಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಈ ಮಿಶ್ರಣಕ್ಕೆ ನೆನೆಸಿಟ್ಟಿರುವ ಹೆಸರು ಬೇಳೆ ಹಾಕಿಕೊಂಡು ಮತ್ತೆ ರುಬ್ಬಿಕೊಳ್ಳಿ. (ಈ ವೇಳೆ 2 ಸ್ಪೂನ್ ಹೆಸರು ಬೇಳೆ ಹಾಗೆಯೇ ಎತ್ತಿಟ್ಟುಕೊಂಡಿರಿ)
ತರಿ ತರಿಯಾಗಿ ರುಬ್ಬಿಕೊಂಡ ಈ ಮಸಾಲೆಯನ್ನು ಉಳಿದಿರುವ 2 ಸ್ಪೂನ್ ಹೆಸರು ಬೇಳೆಯೊಂದಿಗೆ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಈಗ ಕತ್ತರಿಸಿಕೊಂಡಿರುವ ಪಾಲಕ್ ಸೊಪ್ಪನ್ನು ಸಹ ಇದಕ್ಕೆ ಹಾಕಿ, ಬಳಿಕ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿ, ಹಸಿ ಮೆಣಸಿನ ಕಾಯಿ (ಸಣ್ಣದಾಗಿ ಹೆಚ್ಚಿರುವುದು) ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ಅರ್ಧ ಕಪ್ ಕಡಲೆ ಹಿಟ್ಟು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ 4 ಸ್ಪೂನ್ ಅಕ್ಕಿ ಹಿಟ್ಟು, ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕೊನೆಯದಾಗಿ ಗರಂ ಮಸಾಲ ಪುಡಿ, ಅರಶಿನ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿದರೆ ಹಿಟ್ಟು ರೆಡಿಯಾಗುತ್ತದೆ.
ಈಗ ಕೈಗೆ ಎಣ್ಣೆ ಹಚ್ಚಿಕೊಳ್ಳುತ್ತಾ ವಡೆ ಮಾಡಿಕೊಳ್ಳಿ. ಬಳಿಕ ಒಲೆ ಮೇಲೆ ಪಾತ್ರೆ ಇಟ್ಟು ಎಣ್ಣೆ ಹಾಕಿ ಎಣ್ಣೆಗೆ ವಡೆ ಹಾಕಿ ಚೆನ್ನಾಗಿ ಎರಡೂ ಕಡೆ ಕರಿಯಬೇಕು. ಒಂದೊಂದು ವಡೆ ಸುಮಾರು 4ರಿಂದ 5 ನಿಮಿಷ ಕಾಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಪಾಲಕ್ ವಡೆ ರೆಡಿಯಾಗುತ್ತದೆ.



Click it and Unblock the Notifications
