Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನಿಮಿಷದಲ್ಲಿ ಪಾಲಾಕ್ ಸೊಪ್ಪಿನ ರೈಸ್ ಮಾಡಿ..! ಸ್ಪೆಷಲ್ ರೆಸಿಪಿ ಮಾಡೋದು ಹೇಗೆ?
ಬೆಳಗ್ಗೆ ಬ್ರೇಕ್ ಫಾಸ್ಟ್‌ಗೆ ಅದ್ಭುತ ರುಚಿಯಲ್ಲಿ ಯಾವುದಾದರು ರೈಸ್‌ನಿಂದ ಮಾಡುವಂತಹ ಖಾದ್ಯವನ್ನು ಮಾಡುವ ಆಲೋಚನೆಯಲ್ಲಿ ನೀವಿದ್ದರೆ ಇಲ್ಲೊಂದು ಖಾದ್ಯ ರೆಡಿ ಇದೆ. ಹೌದು ರೈಸ್‌ನಿಂದ ಹತ್ತು ಹಲವು ಖಾದ್ಯ ಮಾಡಬಹುದು ಅನ್ನೋದನ್ನು ನಾವು ತಿಳಿದಿರುತ್ತೇವೆ. ಅದ್ರಲ್ಲೂ ಬೆಳಗ್ಗೆ ಮಾಡುವ ತಿಂಡಿ ರುಚಿಕರವಾಗಿದ್ದರೆ ಆ ದಿನ ಕೂಡ ಅದ್ಭುತವಾಗಿರುತ್ತೆ.
ಇಂತಹ ರೈಸ್ ಖಾದ್ಯಗಳ ಪೈಕಿ ನಾವು ಪಲಾವ್, ವಾಂಗೀಬಾತ್, ಚಿತ್ರಾನ್ನ, ಬಿಸಿ ಬೇಳೆಬಾತ್, ಟೊಮೆಟೋ ಬಾತ್ ಹೀಗೆ ಹತ್ತು ಹಲವು ರೀತಿಯ ರೈಸ್ ಐಟಂ ರೆಡಿ ಮಾಡಬಹುದು. ಆದ್ರೆ ಇವೆಲ್ಲವೂ ಒಂದೇ ರೀತಿಯ ರುಚಿ ಇಲ್ಲದಿದ್ದರೂ ಆಗಾಗ ಸವಿಯುವುದು ಉತ್ತಮ ಎನಿಸುತ್ತೆ. ಆದ್ರೆ ಇದೆಲ್ಲಕ್ಕಿಂತ ಉತ್ತಮವಾಗಿ ಅದ್ಭುತ ರುಚಿಯಲ್ಲಿ ಮಾಡಬಹುದಾದ ಖಾದ್ಯ ಅಂದ್ರೆ ಪಾಲಾಕ್ ಸೊಪ್ಪಿನ ರೈಸ್ ಮಾಡಿ ನೋಡಿ.

ಆರೋಗ್ಯಕ್ಕೂ ಉತ್ತಮವಾಗಿರುವ ಪಾಲಾಕ್ ಸೊಪ್ಪಿನಿಂದ ರೈಸ್ ಮಾಡಿದರೆ ಅದರ ರುಚಿಯೇ ಬೇರೆ. ಪಾಲಾಕ್ ಸೊಪ್ಪಿನಲ್ಲಿರುವ ಆರೋಗ್ಯಕಾರಿ ಅಂಶವು ನಮ್ಮ ದೇಹಕ್ಕೆ ಉತ್ತಮವಾಗಿದೆ. ಇನ್ನು ಈ ಪಾಲಾಕ್ ಸೊಪ್ಪಿನ ರೈಸ್ ಮಾಡಿದರೆ ಮನೆ ಮಂದಿ ಎಲ್ಲಾ ಕುಳಿತು ಸವಿಯುತ್ತಾರೆ. ಏಕೆಂದರೆ ಈ ಪಾಲಾಕ್ ಸೊಪ್ಪಿನ ರುಚಿಯಿಂದ ಈ ಬ್ರೇಕ್ ಫಾಸ್ಟ್ ಎಲ್ಲರಿಗೂ ಇಷ್ಟವಾಗುತ್ತೆ.
ಹಾಗಾದ್ರೆ ಈ ಪಾಲಾಕ್ ಸೊಪ್ಪಿನ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡುವ ಸೂಕ್ತ ಕ್ರಮವನ್ನು ನಾವಿಂದು ತಿಳಿದುಕೊಳ್ಳೋಣ.
ಪಾಲಾಕ್ ಸೊಪ್ಪಿನ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅನ್ನ
- ಪಾಲಾಕ್ ಸೊಪ್ಪು
- ಕರಿಬೇವು
- ಚಕ್ಕೆ
- ಲವಂಗ
- ಏಲಕ್ಕಿ
- ಜೀರಿಗೆ
- ಅರಶಿಣ
- ಪಲಾವ್ ಎಲೆ
- ಹಸಿ ಮೆಣಸು
- ಈರುಳ್ಳಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕೊತ್ತಂಬರಿ ಸೊಪ್ಪು
- ಎಣ್ಣೆ
- ಉಪ್ಪು
ಪಾಲಾಕ್ ಸೊಪ್ಪಿನ ರೈಸ್ ಮಾಡುವ ವಿಧಾನವೇನು?
ಮೊದಲು ಪಾಲಕ್ ಸೊಪ್ಪನ್ನು ತೊಳೆದುಕೊಂಡು ಇಟ್ಟುಕೊಳ್ಳಿ. ಮೊದಲು ಸೋನ ಮಸೂರಿ ಅಥವಾ ಸಾಮಾನ್ಯ ಅಕ್ಕಿಯಿಂದ ಚಿತ್ರಾನ್ನಕ್ಕೆ ಮಡುವಂತಹ ಹುಡಿ ಹುಡಿಯಾದ ಅನ್ನವನ್ನು ಮಾಡಿಟ್ಟುಕೊಳ್ಳಿ. ನಿಮಗೆ ಎಷ್ಟು ಬೇಕೋ ಅಷ್ಟು ಅನ್ನ ಮಾಡಿ ಮೊದಲೇ ಇಟ್ಟುಕೊಂಡಿರಿ. ಹಾಗೆ ಒಲೆ ಮೇಲೆ ಒಂದು ಪಾತ್ರೆಯಲ್ಲಿ ನೀರು ಇಟ್ಟು ನೀರು ಕುದಿಯಲು ಬಿಡಿ. ನೀರು ಕುದಿಯಲು ಆರಂಭಿಸಿದಾಗ ಈ ಪಾಲಾಕ್ ಸೊಪ್ಪನ್ನು ಅದಕ್ಕೆ ಹಾಕಿ 3 ನಿಮಿಷ ಬೇಯಿಸಿಕೊಂಡು ಇಳಿಸಿಕೊಳ್ಳಿ.
ನಂತರ ಅದನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಪಲಾವ್ ಎಲೆ, ಲವಂಗ, ಚೆಕ್ಕೆ, ಏಲಕ್ಕಿ ಹಾಕಿ ಬಿಸಿ ಮಾಡಿ. ಅನಂತರ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿ, ಹಸಿ ಮೆಣಸು, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ.
1 ನಿಮಿಷದ ಬಳಿಕ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. ಅನಂತರ ಇದಕ್ಕೆ ಮಿಕ್ಸಿಯಲ್ಲಿ ರುಬ್ಬಿ ಇಟ್ಟಿದ ಪಾಲಾಕ್ ಸೊಪ್ಪಿನ ಪೇಸ್ಟ್ ಅನ್ನು ಹಾಕಿಕೊಂಡು, ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಫ್ರೈ ಮಾಡುವಾಗ ಅರಶಿಣ ಹಾಕಿಕೊಳ್ಳಿ. ಇದು ಚೆನ್ನಾಗಿ ಕುದಿಯಲು ಬಿಡಿ.
ಈ ಈ ಮಿಶ್ರಣ ಗೊಜ್ಜಿನ ರೀತಿ ಬದಲಾಗುತ್ತದೆ. 3 ನಿಮಿಷ ಫ್ರೈ ಮಾಡಿಕೊಂಡರೆ ಸಾಕಾಗುತ್ತದೆ. ನಂತರ ಇದಕ್ಕೆ ಮೊದಲೇ ಮಾಡಿಟ್ಟುಕೊಂಡಿರುವ ಅನ್ನವನ್ನು ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿಕೊಂಡು ಸವಿಯಲು ನೀಡಿ. ಇಷ್ಟಾದರೆ ಪಾಲಾಕ್ ಸೊಪ್ಪಿನ ರೈಸ್ ರೆಡಿಯಾಗುತ್ತದೆ.



Click it and Unblock the Notifications
