Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಪಾಲಕ್ ಸೊಪ್ಪಿನ ಈ ಗ್ರೇವಿಯಲ್ಲಿದೆ ಆರೋಗ್ಯದ ಗುಟ್ಟು..! ಮಾಡುವ ವಿಧಾನವಿದು!
ಪಾಲಕ್ ಸೊಪ್ಪಿನಿಂದ ಮಾಡುವ ಎಲ್ಲಾ ಖಾದ್ಯಗಳು ಕೂಡ ಅದ್ಭುತ ರುಚಿ ನೀಡಲಿವೆ. ಹೀಗಾಗಿ ಪಾಲಕ್ ಸೊಪ್ಪು ಹಾಗೆ ಪಾಲಕ್ ಪನ್ನೀರ್‌ನಿಂದ ಹಲವು ಬಗೆಯ ರುಚಿ ರುಚಿಯ ಖಾದ್ಯ ಮಾಡಿ ಸವಿಯುವುದು ನೋಡಬಹುದು. ಅದರಲ್ಲೂ ಪಾಲಕ್ ಸೊಪ್ಪಿನ ಸಾರು ಹಾಗೂ ಪಾಲಕ್ ಗ್ರೇವಿ ಮಾಡುವುದು ಎಲ್ಲರ ಅಚ್ಚುಮೆಚ್ಚಿನ ಖಾದ್ಯ ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗೆ ಪಾಲಕ್‌ನಿಂದ ಹಲವು ರೀತಿಯ ಆರೋಗ್ಯಕರ ಲಾಭವೂ ಇದೆ.
ನೀವು ರಕ್ತ ಹೀನತೆ ಅಥಾವಾ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾಗಿದ್ದರೆ ಅಥವಾ ನಿಮ್ಮ ದೇಹದಲ್ಲಿ ಕಬ್ಬಿಣಾಂಶದ ಕೊರತೆಯಿದ್ದರೆ, ನಿಮ್ಮ ಆಹಾರದಲ್ಲಿ ಪಾಲಕ್ ಸೊಪ್ಪನ್ನು ಸೇರಿಸುವುದು ಬಹಳ ಉತ್ತಮ. ಪಾಲಕ್ ಸೊಪ್ಪಿನಲ್ಲಿ ನೈಟ್ರೇಟ್ ಇದು ನಿಮ್ಮ ರಕ್ತದೊತ್ತಡ ನಿವಾರಣೆಗೆ ಸಹಕಾರಿಯಾಗಲಿದೆ. ಹಾಗೆ ಈ ಪಾಲಕ್ ಸೊಪ್ಪಿನಲ್ಲಿ ಝೀಕ್ಸಾಂಥಿನ್, ಲುಟೀನ್ ಮತ್ತು ಬೀಟಾ-ಕ್ಯಾರೋಟಿನ್ ಹೇರಳವಾಗಿ ಕಂಡುಬರುತ್ತದೆ, ಇದು ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮ.

ಇಷ್ಟೆಲ್ಲಾ ಆರೋಗ್ಯಕರ ಲಾಭ ಒಳಗೊಂಡಿರುವ ಈ ಪಾಲಕ್ ಸೊಪ್ಪಿನ ಗ್ರೇವಿಯನ್ನು ನಾವು ಹೇಗೆ ಮಾಡಬೇಕು ಅನ್ನೋದನ್ನು ತಿಳಿದುಕೊಳ್ಳೋಣ.
ಪಾಲಕ್ ಸೊಪ್ಪಿನ ಗ್ರೇವಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಪಾಲಕ್ ಸೊಪ್ಪು
- ಹೆಸರು ಬೇಳೆ
- ಖಾರದ ಪುಡಿ
- ಸಾಸಿವೆ
- ಜೀರಿಗೆ
- ಈರುಳ್ಳಿ
- ಟೊಮೆಟೋ
- ಅರಶಿಣ
- ಎಣ್ಣೆ
- ನೀರು
- ಬೆಳ್ಳುಳ್ಳಿ
- ಹಸಿ ಮೆಣಸು
- ಕರಿಬೇವು
ಪಾಲಕ್ ಸೊಪ್ಪಿನ ಗ್ರೇವಿ ಮಾಡುವ ವಿಧಾನವೇನು?
ಮೊದಲು ಅರ್ಧ ಕಪ್ ಹೆಸರು ಬೇಳೆ ತೊಳೆದು ಕುಕ್ಕರ್‌ಗೆ ಹಾಕಿ ನೀರು ಹಾಕಿ, ಅರಶಿಣ ಪುಡಿ, ಸ್ಪೂನ್ ಎಣ್ಣೆ ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 3 ಸೀಟಿ ಹೊಡೆಯಲು ಬಿಡಿ. ಕುಕ್ಕರ್ 3 ಸೀಟಿ ಹೊಡೆದ ಬಳಿಕ ತಣ್ಣಗಾಗಲು ಬಿಡಿ. ಈಗ 2 ಕಟ್ ಪಾಲ್ ಸೊಪ್ಪನ್ನು ಬಿಡಿಸಿ ತೊಳೆದು ಸಣ್ಣದಾಗಿ ಕತ್ತರಿಸಿಕೊಳ್ಳಿ. ಈಗ ಕುಕ್ಕರ್ ಮುಚ್ಚಳ ತೆಗೆದು ನೀರನ್ನು ಬಸಿದುಕೊಂಡು ಬೇಳೆಯನ್ನು ಮ್ಯಾಶ್ ಮಾಡಿಕೊಳ್ಳಿ. ನಂತರ ಇದಕ್ಕೆ ಬೇಳೆ ನೀರು ಹಾಕಿಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಎಣ್ಣೆ ಬಿಸಿಯಾದ ಬಳಿಕ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಹಸಿ ಮೆಣಸು, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. ಈಗ ಫ್ರೈ ಮಾಡಿದ ಪದಾರ್ಥಕ್ಕೆ ಈರುಳ್ಳಿ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಎರಡು ಟೊಮೆಟೋ ಚೆನ್ನಾಗಿ ಕತ್ತರಿಸಿಕೊಂಡು ಹಾಕಿ ಬಳಿಕ ಉಪ್ಪು ಕೂಡ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಒಟ್ಟು 5 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ ಹಾಕಿ ಬಿಸಿ ಮಾಡಿಕೊಳ್ಳಿ.
ನಂತರ ಇದಕ್ಕೆ 2 ಕಟ್ ಅಳತೆಯ ಪಾಲಕ್ ಸೊಪ್ಪನ್ನು ಸಹ ಹಾಕಿಕೊಳ್ಳಿ. ಹಾಗೆ 5 ನಿಮಿಷ ಫ್ರೈ ಮಾಡಬೇಕು. ಸೊಪ್ಪು ಸ್ವಲ್ಪ ನೀರು ಬಿಟ್ಟುಕೊಳ್ಳುತ್ತದೆ. ನಂತರ ಇದಕ್ಕೆ ಬೇಯಿಸಿಕೊಂಡಿದ್ದ ಬೇಳೆಯನ್ನು ಸಹ ಹಾಕಿಕೊಳ್ಳಿ. ಹಾಗೆ ಮಿಕ್ಸ್ ಮಾಡಿಕೊಂಡು ನೀರು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ 5ರಿಂದ 6 ನಿಮಿಷ ಕುದಿಬರಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಪಾಲಕ್ ಗ್ರೇವಿ ಸಿದ್ದವಾಗುತ್ತೆ. ನೀವು ಕೂಡ ಊಟದ ಜೊತೆಗೆ ಇಲ್ಲವೆ ತಿಂಡಿಗೆ ಮಾಡಿ ಸವಿಯಬಹುದು. ಆರೋಗ್ಯದ ದೃಷ್ಟಿಯಿಂದಲೂ ಕೂಡ ಇದು ಅತ್ಯುತ್ತಮ ಖಾದ್ಯ ಆಗಿದೆ. ಅದರಲ್ಲೂ ಮಕ್ಕಳಿಗೆ ಹೆಚ್ಚಾಗಿ ಪಾಲಕ್ ಸೊಪ್ಪಿನ ಯಾವುದಾದರು ಖಾದ್ಯ ಮಾಡಿ ಆಹಾರದ ಜೊತೆಗೆ ನೀಡುವುದು ಬಹಳ ಉತ್ತಮ.



Click it and Unblock the Notifications
