Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆರೋಗ್ಯಕ್ಕೆ ಬೆಸ್ಟ್ ಈ ತರಕಾರಿ ಪಲ್ಯ.! ನೀವೆಂದು ಮಾಡಿರಲ್ಲ!
ನಮ್ಮ ನಡುವೆ ಇರುವಂತಹ ಹಲವು ತರಕಾರಿಗಳು ಆರೋಗ್ಯದ ದೃಷ್ಟಿಯಲ್ಲಿ ಬಹಳ ಉತ್ತಮ ಎಂಬುದನ್ನು ನಾವು ತಿಳಿದಿದ್ದೇವೆ. ಅದರಲ್ಲೂ ವಿಶೇಷವಾಗಿ ಹಸಿರು ತರಕಾರಿಗಳಲ್ಲಿನ ಆರೋಗ್ಯಕರ ಅಂಶಗಳು ಬೇರೆ ಯಾವುದೇ ವಸ್ತುಗಳಲ್ಲು ನಿಮಗೆ ಸಿಗೋದಿಲ್ಲ. ಇಂತಹ ತರಕಾರಿಗಳಲ್ಲಿ ಈ ಪಡವಲಕಾಯಿ ಕೂಡ ಒಂದಾಗಿದೆ. ಪಡವಲಕಾಯಿ ಬಳ್ಳಿ ಜಾತಿಯ ಗಿಡಕ್ಕೆ ಸೇರಿರುವ ಹಾಗೆ ಹಾವಿನಂತೆ ಉದ್ದವಾಗಿ ಕಾಣಿಸುವ ತರಕಾರಿ. ಮಾರುಕಟ್ಟಯಲ್ಲಿ ಅಪರೂಪಕ್ಕೆ ಹಾಗೆ ದುಬಾರಿ ಬೆಲೆಗೆ ಸಿಗುವಂತಹ ಒಂದು ತರಕಾರಿ ಇದಾಗಿದೆ.
ಪಡವಲಕಾಯಿಯಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಕಾರ್ಬೋಹೈಡ್ರೇಟ್‌ಗಳು, ಕಬ್ಬಿಣ, ಕ್ಯಾಲ್ಸಿಯಂ, ಅಯೋಡಿನ್, ಪೊಟ್ಯಾಸಿಯಮ್ ಸೇರಿ ಇನ್ನೂ ಹಲವು ಅಂಶಗಳಿಂದ ಇದು ಸಮೃದ್ಧವಾಗಿದೆ. ಈ ಪಡವಲಕಾಯಿಯ ಜ್ಯೂಸ್ ಸೇವನೆಯು ನಿಮ್ಮಲ್ಲಿ ಮಲಬದ್ಧತೆಯಿಂದ ಹಿಡಿದು ಉದರ ಸಂಬಂಧಿ ಸಮಸ್ಯೆಗಳು ನಿವಾರಣರಯಾಗುವುದು ನೋಡಬಹುದು.

ಆದ್ರೆ ಬಹುತೇಕರಿಂದ ಈ ಪಡವಲಕಾಯಿಯ ಆರೋಗ್ಯಕರ ಲಾಭಗಳ ಕುರಿತಾಗಿ ತಿಳಿದಿರುವುದಿಲ್ಲ. ಹಾಗೆ ಈ ಪಡವಲಕಾಯಿಯಿಂದ ಎಷ್ಟೆಲ್ಲಾ ಖಾದ್ಯಗಳು ಮಾಡಬಹುದು ಎಂಬುದು ಕೂಡ ಬಹುತೇಕರಿಗೆ ತಿಳಿದಿರುವುದಿಲ್ಲ. ಪಡವಲಕಾಯಿ ತೊಕ್ಕು, ಪಲ್ಯ, ಸಾಂಬಾರ್ ನೀವು ಮಾಡಿ ಸವಿದಿರುತ್ತೀರಿ. ಹಾಗೆ ಪಡವಲಕಾಯಿಯ ಹಲವು ಖಾದ್ಯವನ್ನು ನೀವು ಮದುವೆ ಮನೆಯಲ್ಲಿ ಅಥವಾ ಶುಭ ಕಾರ್ಯದ ಸಮಯದಲ್ಲಿ ಸವಿದಿರುವ ನೆನಪಿರಬಹುದು. ಆದ್ರೆ ನಾವಿಂದು ಆರೋಗ್ಯಕ್ಕೆ ಇಷ್ಟೊಂದು ಪೂರಕವಾದ ಪಡವಲಕಾಯಿಯ ಅದ್ಭುತ ಪಲ್ಯ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಪಡವಲಕಾಯಿ ಪಲ್ಯ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಪಡವಲಕಾಯಿ ಪಲ್ಯ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಪಡವಲಕಾಯಿ ಪಲ್ಯ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಪಡವಲಕಾಯಿ
- ಸಾಸಿವೆ - 1 ಚಮಚ
- ಕರಿಬೇವು - 8-10
- ಉದ್ದಿನ ಬೇಳೆ
- ತೆಂಗಿನಕಾಯಿ ತುರಿ
- ಹಸಿ ಮೆಣಸಿನ ಕಾಯಿ
- ಅರಿಶಿನ ಪುಡಿ - 1 ಚಮಚ
- ಉಪ್ಪು
- ಎಣ್ಣೆ
- ಬೆಲ್ಲ
ಪಡವಲಕಾಯಿ ಪಲ್ಯ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಉದ್ದಿನ ವೇಳೆ, ಕರಿಬೇವು, ಹಸಿ ಮೆಣಸು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಚಿಕ್ಕದಾಗಿ ಹೆಚ್ಚಿಕೊಂಡಿರುವ ಪಡವಲಕಾಯಿಯನ್ನು ಹಾಕಿಕೊಂಡು ಅದರ ಮೇಲೆ ಅರಶಿಣ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಮಿಕ್ಸ್ ಮಾಡಿಕೊಂಡ ಬಳಿಕ ಇದನ್ನು ಚೆನ್ನಾಗಿ 1 ನಿಮಿಷ ಫ್ರೈ ಮಾಡಿಕೊಂಡು ಪಡವಲಕಾಯಿ ಹೋಳುಗಳು ಮುಳುಗುವಷ್ಟು ನೀರು ಹಾಕಿಕೊಂಡು ಬೇಯಲು ಬಿಡಿ. ಮುಚ್ಚಳ ಮುಚ್ಚಿ ಬೇಯಲು ಬಿಟ್ಟು ಆಗಾಗ ಮಿಕ್ಸ್ ಮಾಡುತ್ತಾ ಇರಿ. 5ರಿಂದ 6 ನಿಮಿಮಿಷದಲ್ಲಿ ನೀರು ಆವಿಯಾಗುತ್ತದೆ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಒಮ್ಮೆ ಮಿಕ್ಸ್ ಮಾಡಿ.
ಈಗ ಸ್ವಲ್ಪ ಬೆಲ್ಲ ಸಹ ಹಾಕಿಕೊಂಡು ಮಿಕ್ಸ್ ಮಾಡುತ್ತಾ ಇರಿ. ಈಗ 2 ನಿಮಿಷ ಬಿಟ್ಟು ತೆಂಗಿನಕಾಯಿ ತುರಿ, ಹಾಗೆ ನಿಮಗೆ ಖಾರ ಬೇಕಿದ್ದರೆ ಖಾರದ ಪುಡಿ ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. 1 ನಿಮಿಷದ ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಪಡವಲಕಾಯಿ ಪಲ್ಯ ರೆಡಿಯಾಗುತ್ತದೆ. ಇದು ಚಪಾತಿ ಹಾಗೂ ಊಟದ ಜೊತೆಗೆ ಸವಿಯಲು ಬಹಳ ರುಚಿ ನೀಡಲಿದೆ. ನೀವು ಕೂಡ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications