Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಮನೆಯಲ್ಲಿಯೇ ಕಿತ್ತಳೆ ಜ್ಯೂಸ್ ಹೀಗೆ ಮಾಡಿ ಸವಿಯಿರಿ
ನಾವು ಸಾಕಷ್ಟು ಬಾರಿ ಆರೇಂಜ್ ಜ್ಯೂಸ್ ಮನೆಯಲ್ಲಿ ಮಾಡಿದಾಗ ಜ್ಯೂಸ್ ಸೆಂಟರ್ನಲ್ಲಿ ಸಿಗುವ ಜ್ಯೂಸ್ ರೀತಿ ಏಕೆ ಬರಲ್ಲ ಅಂದುಕೊಳ್ಳುತ್ತೇವೆ ಅಲ್ವಾ? ಸಾಕಷ್ಟು ಜನರು ಆರೇಂಜ್ ಜ್ಯೂಸ್ ಮಾಡುವಾಗ ಅದರ ಬೀಜ ಕೂಡ ಹಾಕುತ್ತಾರೆ, ಆದರೆ 5-6 ಕಿತ್ತಳೆ ಬೀಜ ತೆಗೆಯಬೇಕೆಂದರೆ ತುಂಬಾ ಸಮಯ ಬೇಕಾಗುವುದು ಆದ್ದರಿಂದ ಬೀಜ ಸಮೇತ ಹಾಕಿ ಗ್ರೈಂಡ್ ಮಾಡುತ್ತೇವೆ ಅಲ್ವಾ?

ಕಿತ್ತಳೆ ಜ್ಯೂಸ್ ಮಾಡುವಾಗ ಇನ್ಮುಂದೆ ಈ ಟ್ರಿಕ್ಸ್ ಬಳಸಿ ಬೀಜ ಸುಲಭವಾಗಿ ತೆಗೆಯಬಹುದು, ಆದ್ದರಿಂದ ಜ್ಯೂಸ್ ತುಂಬಾ ರುಚಿಯಾಗಿರುತ್ತದೆ.
Recipe By: Reena TK
Recipe Type: Juice
Serves: 4
-
ಬೇಕಾಗುವ ಸಾಮಗ್ರಿ
4-5 ಕಿತ್ತಳೆ
ಚಿಟಿಕೆಷ್ಟು ಬ್ಲ್ಯಾಕ್ ಸಾಲ್ಟ್
-
ಮಾಡುವ ವಿಧಾನ
* ಕತ್ತಳೆಯನ್ನು ತಣ್ಣೀರಿನಲ್ಲಿ ತೊಳೆಯಿರಿ, ನಂತರ ಸಮ ಅರ್ಧ ಭಾಗವನ್ನಾಗಿ ಕತ್ತರಿಸಿ.
* ನಂತರ ಅದರ ಬೀಜ ತೆಗೆದು, ಸಿಪ್ಪೆ ಸುಲಿಯಿರಿ
* ನಂತರ ಬ್ಲೆಂಡರ್ನಲ್ಲಿ ಹಾಕಿ, ನೀರು ಸೇರಿಸಿ ಬ್ಲೆಂಡ್ ಮಾಡಿ ರಸ ತೆಗೆಯಿರಿ
* ಆ ರಸವನ್ನು ಸೋಸಿ ಗ್ಲಾಸ್ಗೆ ಹಾಕಿ ಬ್ಲ್ಯಾಕ್ ಸಾಲ್ಟ್ ಮಿಕ್ಸ್ ಮಾಡಿದರೆ ರುಚಿರುಚಿಯಾದ ಆರೇಂಜ್ ಜ್ಯೂಸ್ ರೆಡಿ.
- ನೀವು ಆರೇಂಜ್ ಜ್ಯೂಸ್ ಮಾಡಲು ಸಿಟ್ರಸ್ ಜ್ಯೂಸರ್, ಬ್ಲೆಂಡರ್ ಅಥವಾ ಸ್ಲೋ ಜ್ಯೂಸರ್ ಬಳಸಿ ಜ್ಯೂಸ್ ತಯಾರಿಸಿ
ಆರೇಂಜ್ ಜ್ಯೂಸ್ ಕುಡಿಯುವುದರಿಂದ ದೊರೆಯುವ
ಪ್ರಯೋಜನಗಳು
* ಆರೇಂಜ್ ಜ್ಯೂಸ್ನಲ್ಲಿ ವಿಟಮಿನ್ ಸಿ
ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.
* ಇದರಲ್ಲಿ ಯಾವುದೇ ಪ್ರಿಸರ್ವೇಟಿವ್ ಬಳಸಿರಲ್ಲ, ಆದ್ದರಿಂದ ಒಳ್ಳೆಯದು.
* ವಿಟಮಿನ್ ಎ ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
* ಸರ್ಜರಿಯಾದವರಿಗೆ, ಅನಾರೋಗ್ಯವಿದ್ದಾಗ ಈ ಜ್ಯೂಸ್ ಕುಡಿಯುವುದರಿಂದ ಬೇಗನೆ
ಚೇತರಿಸಿಕೊಳ್ಳಬಹುದು.
* ಇನ್ನು ಮಕ್ಕಳಿಗೆ ಹಾಗೂ ವಯಸ್ಸಾದವರಿಗೆ ಈ ಜ್ಯೂಸ್ ಮಾಡಿ ಕೊಡುವುದು
ಒಳ್ಳೆಯದು.
* ಮಕ್ಕಳಿಗೆ ಆರೇಂಜ್ ಜ್ಯೂಸ್ ನೀಡುವುದರಿಂದ ದೇಹದಲ್ಲಿ ನೀರಿನಂಶ
ಕಡಿಮೆಯಾಗದಂತೆ ನೋಡಿಕೊಳ್ಳಲು ಸಹಕಾರಿ.



Click it and Unblock the Notifications
