Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ
ನೀವು ನಿತ್ಯ ಸಂಜೆಯ ಸಮಯದಲ್ಲಿ ಸ್ನ್ಯಾಕ್ಸ್ ಸವಿಯಲು ಇಷ್ಟಪಡುವ ಮಂದಿ ಆಗಿರಬಹುದು. ಇದಕ್ಕಾಗಿ ಹಲವು ರೀತಿಯ ತಿಂಡಿಗಳನ್ನು ಮನೆಗೆ ತಂದು ಸವಿದಿರಬಹುದು. ಹಾಗೆ ಸಂಜೆ ಸ್ನ್ಯಾಕ್ಸ್ ಅಂದ್ರೆ ಬಹುತೇಕರಿಗೆ ನೆನಪಾಗುವುದು ಪಾನಿಪೂರಿ, ಗೋಬಿ ಮಂಚೂರಿಯನ್ ರೀತಿಯ ರಸ್ತೆ ಬದಿಯ ಕರಿದ ತಿಂಡಿಗಳು. ಅದ್ರಲ್ಲೂ ಹಲವರಿಗೆ ನಿತ್ಯವೂ ನೂಡಲ್ಸ್, ಗೋಬಿ, ಎಗ್ ರೈಸ್ ಸವಿಯುವ ಅಭ್ಯಾಸ ಇರುವುದು ನೋಡಬಹುದು.
ಈ ರೀತಿಯ ಸ್ನ್ಯಾಕ್ಸ್ ಅನ್ನು ಸವಿಯೋದು ಆರೋಗ್ಯಕ್ಕೆ ಉತ್ತಮವಲ್ಲ. ಆದ್ರೆ ಮನೆಯಲ್ಲಿ ನಾವು ಸುಲಭವಾಗಿ ಕಡಿಮೆ ಸಾಸ್ ಬಳಸಿ, ಕಡಿಮೆ ಟೇಸ್ಟಿಂಗ್ ಪುಡಿ, ಸೋಡಾ ಬಳಸಿ ಮಾಡಬಹುದು. ಹಾಗೆ ಈ ಗೋಬಿ ಮಂಚೂರಿಯನ್ ಕೂಡ ಮನೆಯಲ್ಲಿ ನಾವು ಮಾಡಿ ಸವಿಯಬಹುದು. ಆದ್ರೆ ನಾವಿಂದು ಸುಲಭವಾಗಿ ಮಾಡಬಹುದಾದ ಹಾಗೆ ರುಚಿ ರುಚಿಯಾದ ಈರುಳ್ಳಿ ಮಂಚೂರಿಯನ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ನೀವು ಕೋಸಿನಿಂದ ಗೋಬಿ ಮಂಚೂರಿಯನ್ ಮಾಡಿ ಸವಿದಿರಬಹುದು. ಆದ್ರೆ ನಾವಿಂದು ಈ ಸುಲಭದ ಈರುಳ್ಳಿ ಮಂಚೂರಿಯನ್ ಮಾಡಿ ಸವಿಯುವ ಕುರಿತು ಹೇಳಲಿದ್ದೇವೆ. ಹಾಗಾದ್ರೆ ಈ ಈರುಳ್ಳಿ ಮಂಚೂರಿಯನ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಈರುಳ್ಳಿ ಮಂಚೂರಿಯನ್ ಮಾಡಲು ಬೇಕಾಗುವ ಪದಾರ್ಥಗಳ
- ಈರುಳ್ಳಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಶುಂಠಿ
- ಬೆಳ್ಳುಳ್ಳಿ
- ಖಾರದ ಪುಡಿ
- ಕಾರ್ನ್ ಫ್ಲೋರ್
- ಮೈದಾ
- ಉಪ್ಪು
- ಎಣ್ಣೆ
- ಕೊತ್ತಂಬರಿ ಸೊಪ್ಪು
- ಹಸಿ ಮೆಣಸು
- ಕ್ಯಾಪ್ಸಿಕಂ
- ಸೋಯಾ ಸಾಸ್
- ಟೊಮೆಟೋ ಸಾಸ್
ಈರುಳ್ಳಿ ಮಂಚೂರಿಯನ್ ಮಾಡುವ ವಿಧಾನವೇನು?
ಮೊದಲು ಈರುಳ್ಳಿಗಳನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ. ಅದಕ್ಕೆ ಅರ್ಧ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಕಾರ್ನ್ ಫ್ಲೋರ್, ಮೈದಾ ಹಿಟ್ಟು 2 ಸ್ಪೂನ್ ಸೇರಿಸಿ, ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನೀರು ಹಾಕದೆ ಮೊದಲು ಮಿಕ್ಸ್ ಮಾಡಿ. ಈಗ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟು ಮಿಕ್ಸ್ ಮಾಡಿಕೊಳ್ಳಬೇಕು. ಈ ಸಮಯದಲ್ಲಿ ಬೇಕಿದ್ದರೆ ಕಲರ್ ಪುಡಿ ಸೇರಿಸಿ.
ಈ ಹಿಟ್ಟು ಬೋಂಡಾದಂತೆ ಬಿಡುವ ಹದಕ್ಕೆ ಬರಬೇಕು. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾಗಲು ಬಿಟ್ಟು ಡ್ರೈ ಗೋಬಿಯನ್ನು ಮೊದಲು ಮಾಡಿಕೊಳ್ಳಬೇಕು. ಎಲ್ಲಾ ಈರುಳ್ಳಿಗಳನ್ನು ಉಂಡೆಯಾಗಿ ಬಿಟ್ಟುಕೊಂಡು ಕರಿದುಕೊಳ್ಳಬೇಕು. ಹೀಗೆ ಮಾಡಿ ಇಟ್ಟುಕೊಳ್ಳಬೇಕು.
ಈಗ ಒಲೆ ಮೇಲೆ ಪಾತ್ರೆ ಇಟ್ಟು ಎಣ್ಣೆ ಹಾಕಿಕೊಂಡು ಇದಕ್ಕೆ ಶುಂಠಿ, ಬೆಳ್ಳುಳ್ಳಿ ಸಣ್ಣದಾಗಿ ಕತ್ತರಿಸಿಕೊಂಡು ಇದಕ್ಕೆ ಹಾಕಿ, ಹಸಿ ಮೆಣಸು, 1 ಈರುಳ್ಳಿ ಹಾಕಿ ಚೆನ್ನಾಗಿ 1 ನಿಮಿಷ ಫ್ರೈ ಮಾಡಿ. ಇದಕ್ಕೆ ಕ್ಯಾಪ್ಸಿಕಂ, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲ, ಉಪ್ಪು, ಹಾಕಿ ಮಿಕ್ಸ್ ಮಾಡುತ್ತಾ ಇರಿ. 1 ನಿಮಿಷ ಬಿಟ್ಟು ಇದಕ್ಕೆ ಟೊಮೆಟೋ ಸಾಸ್, ಅರ್ಧ ಸ್ಪೂನ್ ಸೋಯಾ ಸಾಸ್ ಹಾಕಿಕೊಂಡು ಮಿಶ್ರಣ ಮಾಡಿ.
ಇದು ಚೆನ್ನಾಗಿ ಗೊಜ್ಜು ಮಾಡಿದಂತೆ ಬರಬೇಕು. ಇದಕ್ಕೆ ಚೂರು ನೀರು ಸಹ ಸೇರಿಸಿ. ಈ ಗ್ರೇವಿ ರೆಡಿಯಾದಾಗ ಇದಕ್ಕೆ ಕರಿದುಕೊಂಡಿದ್ದ ಡ್ರೈ ಗೋಬಿಯನ್ನು ಹಾಕಿಕೊಂಡು ಉರಿ ಜಾಸ್ತಿ ಮಾಡಿ ಮಿಕ್ಸ್ ಮಾಡಿ. ಕೊನೆಯಲ್ಲಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಇಳಿಸಿಕೊಳ್ಳಿ ಕೊನೆಯಲ್ಲಿ ಹಸಿ ಈರುಳ್ಳಿ ಹಾಕಿ ಸವಿಯಲು ನೀಡಿ. ಇಷ್ಟಾದರೆ ನಿಮ್ಮ ಮನೆಯಲ್ಲೇ ಈರುಳ್ಳಿ ಮಂಚೂರಿಯನ್ ಸಿದ್ದವಾಗುತ್ತೆ.



Click it and Unblock the Notifications
