Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಈರುಳ್ಳಿ ಸಮೋಸಾ, ಒಮ್ಮೆ ಸವಿದರೆ ಫಿದಾ ಆಗೋದು ಪಕ್ಕಾ..! ಮಾಡೋದು ಹೇಗೆ?
ನೀವು ಸ್ನ್ಯಾಕ್ಸ್ ಪ್ರಿಯರಾಗಿದ್ದರೆ ಬೇಕರಿಯಲ್ಲೋ ಅಥವಾ ಅಂಗಡಿಯಲ್ಲೋ ಸಮೋಸಾ ನೋಡಿ ಬಾಯಲ್ಲಿ ನೀರು ಸುರಿಸಿರುತ್ತೀರಿ. ಸಮೋಸಾ ಅಂದ್ರೆ ಎಲ್ಲರಿಗೂ ತುಂಬಾನೆ ಇಷ್ಟ, ಅದರ ಮೇಲೆ ಒಂಚೂರು ಚಟ್ನಿ ಇಲ್ಲವೆ ಟೊಮೆಟೋ ಸಾಸ್ ಇದ್ದರೆ ಅದನ್ನು ಬಾಯಿ ಚಪ್ಪರಿಸಿ ಸವಿದಿರುತ್ತೇವೆ.
ಭಾರತದಲ್ಲಿ ಸಮೋಸಾ ಸಿಕ್ಕಾಪಟ್ಟೆ ಫೇಮಸ್ ಖಾದ್ಯ, ತಿಂಡಿ ಪ್ರಿಯರಿಗೆ ಈ ಕರಿದ ಸಮೋಸಾ ಹಾಟ್ ಫೇವರಿಟ್, ಹೀಗಾಗಿ ರಸ್ತೆ ಬದಿ ಬದಿಯಲ್ಲೂ ಸಮೋಸಾ ಸಿಗುತ್ತವೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಈ ಸಮೋಸಾವನ್ನ ಇಷ್ಟಪಡುತ್ತಾರೆ. ಹೀಗಾಗಿ ಸಮೋಸಾ ಸವಿಯೋಕೆ ಜನ ಕಾತರದಿಂದ ಕಾಯೋದು, ಸಾಲಿನಲ್ಲಿ ನಿಲ್ಲೋದು ಕಾಮನ್.

ಇನ್ನೂ ಟೀ-ಕಾಫಿ ಜೊತೆ ಸವಿಯಲು ಸಮೋಸಾ ಬಿಟ್ಟರೆ ಮತ್ತೊಂದು ತಿಂಡಿ ಸಿಗಲು ಸಾಧ್ಯವಿಲ್ಲ. ಹಲವು ಕಡೆಗಳಲ್ಲಿ ಟೀ ಜೊತೆ ಸಮೋಸಾವನ್ನೇ ಸವಿಯಲು ನೀಡುತ್ತಾರೆ. ಈ ಸಮೋಸಾ ಮಾಡೋದ್ರದಲ್ಲೂ ಹಲವು ರೀತಿಯ ವಿಧಗಳಿವೆ. ಕೆಲವು ಕಡೆ ಆಲೂ ಸಮೋಸಾ, ಈರುಳ್ಳಿ ಸಮೋಸಾ, ಮೆಣಸಿನಕಾಯಿ ಸಮೋಸಾ, ಮೈದಾ ಹಿಟ್ಟಿನಿಂದ ಮಾಡಿದ ಸಮೋಸಾ ಹೀಗೆ ಹಲವು ವಿಧದ ಸಮೋಸಾ ನಾವು ನೋಡಬಹುದು.
ನಾವಿಂದು ಈರುಳ್ಳಿ ಬಳಸಿ ಮಾಡುವ ಗರಂ ಕರಂ ಸಮೋಸಾ ಕುರಿತು ತಿಳಿಯೋಣ. ಈ ಈರುಳ್ಳಿ ಸಮೋಸಾ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಸಮೋಸಾ ಹಿಟ್ಟು ಮಾಡಿಕೊಳ್ಳುವ ವಿಧಾನವೇನು? ಎಂಬುದನ್ನು ಈ ಮೂಲಕ ತಿಳಿದುಕೊಳ್ಳೋಣ.
ಈರುಳ್ಳಿ ಸಮೋಸಾ ಮಾಡಲು ಬೇಕಾಗುವ ಪದಾರ್ಥಗಳು
- ಮೈದಾ ಹಿಟ್ಟು
- ಗೋಧಿ ಹಿಟ್ಟು
- ಹಸಿ ಮೆಣಸು
- ಈರುಳ್ಳಿ
- ಉಪ್ಪು
- ಎಣ್ಣೆ
- ಅವಲಕ್ಕಿ
- ಖಾರದ ಪುಡಿ
- ಧನಿಯಾ
- ಕೊತ್ತಂಬರಿ ಸೊಪ್ಪು
- ಜೀರಿಗೆ ಪುಡಿ
ಈರುಳ್ಳಿ ಸಮೋಸಾ ಮಾಡುವುದು ಹೇಗೆ?
ಒಂದು ಕಪ್ ಮೈದಾ ಹಿಟ್ಟು ಹಾಗೂ ಒಂದು ಕಪ್ ಗೋಧಿ ಹಿಟ್ಟು ತೆಗೆದುಕೊಂಡು ಅದನ್ನು ಜರಡಿ ಹಿಡಿದುಕೊಳ್ಳಿ. ಬಳಿಕ ಇದಕ್ಕೆ ಉಪ್ಪು, ಎಣ್ಣೆ ಹಾಕಿಕೊಳ್ಳಿ. ಈ ಎಣ್ಣೆ ಕಾಯಿಸಿಕೊಂಡು ಬಿಸಿ ಬಿಸಿ ಇದ್ದಾಗಲೇ ಹಾಕಿ. ಬಳಿಕ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟು ಚಪಾತಿಗೆ ಮಾಡಿಕೊಳ್ಳುವಂತೆ ರೆಡಿ ಮಾಡಿಕೊಳ್ಳಿ. ನಂತರ ಅರ್ಧ ಗಂಟೆ ಹಾಗೆಯೇ ಇಡಿ.
ಬಳಿಕ ಈಗ ಹಿಟ್ಟಿನ ಒಂದು ಉಂಡೆ ತೆಗೆದುಕೊಂಡು ಮೈದಾ ಹಿಟ್ಟು ಹಾಕಿಕೊಂಡು ಒತ್ತಿಕೊಳ್ಳಿ. ಲಟ್ಟಣಗೆಯಲ್ಲಿ ಚೆನ್ನಾಗಿ ಒತ್ತಿಕೊಂಡು ಚಪಾತಿಯಂತೆ ತೆಳುವಾಗಿ ಲಟ್ಟಿಸಿಕೊಳ್ಳಿ. ಈಗ ಇದನ್ನು ಚೌಕಾಕಾರಕ್ಕೆ ಬರುವಂತೆ ಕತ್ತರಿಸಿಕೊಳ್ಳಿ. ಕತ್ತರಿಸಿ ಉಳಿದ ಹಿಟ್ಟನ್ನು ಮತ್ತೆ ತೆಳುವಾಗಿ ಲಟ್ಟಿಸಿಕೊಳ್ಳಬಹುದು. ಹೀಗಾಗಿ ಚೌಕವಾಗಿ ಕತ್ತರಿಸಿಕೊಳ್ಳಿ.
ಈಗ ಕತ್ತರಿಸಿಕೊಂಡಿರುವ ಹಿಟ್ಟನ್ನು ಕಾವಲಿ ಮೇಲೆ ಹಾಕಿ ಬೇಯಿಸಿಕೊಳ್ಳಿ. 2 ಸೆಕೆಂಡ್ ಅಥವಾ 3 ಸೆಕೆಂಡ್ ಬೇಯಿಸಿಕೊಂಡರೆ ಸಾಕು. ಬಳಿಕ ಮತ್ತೆ ಲಟ್ಟಿಸಿಕೊಳ್ಳಿ. (ಈ ಹಿಟ್ಟು ಅಂಗಡಿಯಲ್ಲಿ ರೆಡಿ ಮೇಡ್ ಸಹ ಸಿಗುತ್ತದೆ, ಇದನ್ನ ಸಮೋಸಾ ಶೀಟ್ಗಳು ಅಂತಲೇ ಕರೆಯುತ್ತಾರೆ)
ಈಗ ಕತ್ತರಿಸಿಕೊಂಡ ಹಿಟ್ಟನ್ನು ತೆಗೆದುಕೊಂಡು ಎಷ್ಟು ದೊಡ್ಡ ಸಮೋಸಾ ಬೇಕೋ ಅಷ್ಟು ದೊಡ್ಡದಾಗಿ ಕತ್ತರಿಸಿಕೊಳ್ಳಿ. ಅಂದರೆ ಮತ್ತೆ ಶೀಟ್ಗಳ ರೀತಿ ಕತ್ತರಿಸಿಕೊಳ್ಳಿ. 3 ಇಂಚು ಅಗಲ ಹಾಗೂ 6 ಇಂಚು ಉದ್ದ ಇವರುವಂತಹ ಶೀಟ್ ರೆಡಿ ಮಾಡಿಕೊಳ್ಳಿ.
ಒಂದು ಸಣ್ಣ ಕಪ್ನಲ್ಲಿ ಅವಲಕ್ಕಿ ತೆಗೆದುಕೊಂಡು 2 ಕಪ್ ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ, ಹಸಿ ಮೆಣಸು, ಜೀರಿಗೆ ಪುಡಿ, ಅರಶಿನ, ಧನಿಯಾ, ಖಾರದ ಪುಡಿ, ಉಪ್ಪು, ಶುಂಠಿ ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಮಸಾಲೆಯನ್ನ ಮೊದಲು ಕತ್ತರಿಸಿಕೊಂಡ ಹಿಟ್ಟಿನ ಶೀಟ್ ತೆಗೆದುಕೊಂಡು ಮಧ್ಯ ಮಸಾಲೆ ಹಾಕಲು ಜಾಗ ಬಿಟ್ಟು ಮಡಚಿಕೊಂಡು ಹಿಟ್ಟು ಗಮ್ಮಿನಂತೆ ಅಂಟಿಸಿಕೊಳ್ಳಿ. ಬಳಿಕ ಮಧ್ಯದಲ್ಲಿ ಮಸಾಲೆ ಹಾಕಿ ಚೆನ್ನಾಗಿ ಬಂದ್ ಮಾಡಿ, ಇಟ್ಟುಕೊಳ್ಳಿ. (ಅಂಡಿಯಲ್ಲಿ ಪೊಟ್ಟಣ ಕಟ್ಟುವಂತೆ ಮಾಡಿಕೊಳ್ಳಬೇಕು)
ನಂತರ ಒಲೆ ಮೇಲೆ ಎಣ್ಣೆ ಇಟ್ಟು ಕಾದ ಬಳಿಕ ಸಮೋಸಾ ಹಾಕಿ 8ರಿಂದ 10 ನಿಮಿಷ ಕಾಯಿಸಿಕೊಂಡರೆ ಸಮೋಸಾ ರೆಡಿಯಾಗುತ್ತದೆ.



Click it and Unblock the Notifications
