Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಊಟ, ತಿಂಡಿಗೆ ಈರುಳ್ಳಿ ಸಾಗು ಮಾಡಿ ನೋಡಿ..ಈ ರುಚಿಯಂತು ಅದ್ಭುತ!!
ನೀವು ಊಟದ ಜೊತೆಗೆ ಒಂದು ಯಾವುದಾದರು ರುಚಿ ರುಚಿಯ ಸಾಂಬಾರ್ ಮಾಡಲು ಇಷ್ಟಪಡುತ್ತೀರಿ. ಈ ಸಾಂಬಾರ್ ರುಚಿಯಾಗಿದ್ದರೆ ಆ ದಿನದ ಊಟದ ಮಜವೇ ಬೇರೆ. ಹಾಗೆ ಎಲ್ಲಾ ಊಟಕ್ಕೂ ತರಕಾರಿಯ ಸಾಂಬಾರ್ ಮಾಡುವುದು ಹೆಚ್ಚು. ಆದ್ರೆ ತರಕಾರಿಯ ಬಳಸದೆಯೂ ಸಾಂಬಾರ್ ಮಾಡಬಹುದು ಎಂಬುದು ನಿಮಗೆ ತಿಳಿದಿದೆ. ಬೇಳೆ ಸಾಂಬಾರ್ ತರಕಾರಿ ಸಾಂಬಾರ್‌ಗಿಂತ ಹೆಚ್ಚು ರುಚಿ ನೀಡಬಹುದು. ಹಾಗೆ ನಿಮಗೆ ಇಷ್ಟವೂ ಆಗಬಹುದು, ಆದ್ರೆ ಎಂದಾದರು ಕೇವಲ ಈರುಳ್ಳಿ ಬಳಸಿ ಸಾಗು ಮಾಡಿದ್ದೀರಾ?
ಸಾಗು ಊಟಕ್ಕೆ ಮಾತ್ರವಲ್ಲ ತಿಂಡಿಯ ಜೊತೆಗೂ ಸವಿಯಬಹುದಾದ ಖಾದ್ಯ, ಇಡ್ಲಿ, ದೋಸೆ, ಪೂರಿಯೊಂದಿಗೆ ಸಾಗು ಸವಿಯಬಹುದು. ತರಕಾರಿ ಹಾಕಿ ಮಾಡುವ ಸಾಗು ಎಲ್ಲಾ ಕಡೆ ಸಿಗುತ್ತದೆ. ನೀವು ಸಹ ಇದರ ರುಚಿ ನೋಡಿರುತ್ತೀರಿ. ಆದ್ರೆ ನಾವಿಂದು ವಿಭಿನ್ನ ಹಾಗೂ ವಿಶೇಷ ರುಚಿಯ ಈರುಳ್ಳಿ ಸಾಗು ಮಡುವ ಕುರಿತಾಗಿ ತಿಳಿದುಕೊಳ್ಳೋಣ. ಈರುಳ್ಳಿ ಸಾಗು ಮಾಡುವುದು ಹೇಗೆ ನೋಡೋಣ.

ಈರುಳ್ಳಿ ಸಾಗು ತಿಂಡಿಯ ಜೊತೆಗೆ ಊಟಕ್ಕೂ ಅದ್ಭುತ ರುಚಿ ನೀಡಲಿದೆ, ನೀವು ಒಂದು ಬಾರಿ ಮಾಡಿ ಸವಿದರೆ ಪದೇ ಪದೇ ಈ ಸಾಗು ಮಾಡಿ ಸವಿಯಲು ಮುಂದಾಗುವುದು ಖಚಿತ. ಹಾಗೆ ಈ ಈರುಳ್ಳಿ ಸಾಗು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈರುಳ್ಳಿ ಸಾಗು ಮಾಡಲು ಬೇಕಾಗುವ ಪದಾರ್ಥಗಳು
- ಈರುಳ್ಳಿ -2
- ಟೊಮೆಟೋ -1
- ಸಾಸಿವೆ
- ಇಂಗು
- ಕಡ್ಲೆಬೇಳೆ
- ಉದ್ದಿನಬೇಳೆ
- ಹಸಿ ಮೆಣಸು
- ತುರಿದ ಶುಂಠಿ
- ಕರಿಬೇವಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಅರಿಶಿಣ ಪುಡಿ
- ಕಡ್ಲೆ ಹಿಟ್ಟು - ಸ್ವಲ್ಪ
- ಉಪ್ಪು ರುಚಿಗೆ ತಕ್ಕಷ್ಟು
ಈರುಳ್ಳಿ ಸಾಗು ಮಾಡುವ ವಿಧಾನವೇನು?
ಮೊದಲಿಗೆ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಕಾಯ ಬಿಡಿ ನಂತರ ಇದಕ್ಕೆ ಸಾಸಿವೆ, ಇಂಗು, ಕಡಲೆ ಬೇಳೆ, ಉದ್ದಿನ ಬೇಳೆ, ಹಸಿ ಮೆಣಸು, ತುರಿದ ಶುಂಠಿ, ಕರಿಬೇವು ಹಾಕಿ ಬಿಸಿ ಮಾಡಿಕೊಳ್ಳಿ. ಅನಂತರ ಇದಕ್ಕೆ 2 ಈರುಳ್ಳಿ ಕತ್ತರಿಸಿಕೊಂಡು ಇದಕ್ಕೆ ಹಾಕಿ. ನಂತರ 2 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
ಈಗ ಚಿಕ್ಕದಾಗಿ ಕತ್ತರಿಸಿಕೊಂಡಿರುವ ಟೊಮೆಟೋ ಸೇರಿಸಿ, ಅರಶಿಣ, ಉಪ್ಪು ಹಾಕಿಕೊಂಡು ಮತ್ತೆ 1 ನಿಮಿಷ ಫ್ರೈ ಮಾಡಿಕೊಳ್ಳಿ. ಅನಂತರ ಇದಕ್ಕೆ ಸ್ವಲ್ಪವೇ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಕುದಿಯಲು ಬಿಡಿ. ಸುಮಾರು 5 ನಿಮಿಷ ಕುದಿಯಲು ಬಿಡಿ, ಹಾಗೆ ಆಗಾಗ ಮಿಕ್ಸ್ ಮಾಡುತ್ತಾ ಇರಿ.
ಈಗ ಒಂದು ಸಣ್ಣ ಬೌಲ್‌ಗೆ ಕಡಲೆ ಹಿಟ್ಟು ಹಾಕಿಕೊಂಡು ಅದಕ್ಕೆ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಆ ನೀರನ್ನು ಈ ಬಾಣಲೆಯಲ್ಲಿನ ಸಾಗುವಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 2 ನಿಮಿಷ ಕುದಿಯಲು ಬಿಡಿ. ಇದಾದ ಬಳಿಕ ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ಬಿಸಿ ಬಿಸಿಯ ಅದ್ಭುತ ರುಚಿಯ ಈ ಈರುಳ್ಳಿ ಸಾಗು ರೆಡಿಯಾಗುತ್ತದೆ. ನೀವು ಕೂಡ ಮಾಡಿ ನೋಡಿ ಇದರ ರುಚಿಗೆ ನೀವು ಪಡೆ ಪದೇ ಮಾಡಿ ಸವಿಯುತ್ತೀರಿ. ಇದು ಊಟ ಹಾಗೂ ಯಾವುದೇ ತಿಂಡಿಯ ಜೊತೆಗೂ ಕೂಡ ಸವಿಯಬಹುದು.



Click it and Unblock the Notifications
