Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬಾಯಿ ರುಚಿ ದುಪ್ಪಟ್ಟಾಗಿಸುವ ಆನಿಯನ್ ರಿಂಗ್ ಮಾಡಿ..! 2 ಈರುಳ್ಳಿ ಇದ್ರೆ ಸಾಕು..!
ನಾವು ಅಂಗಡಿಯಲ್ಲಿ ಅಥವಾ ಬೇಕರಿಯಲ್ಲಿ ಸಿಗುವಂತಹ ಆನಿಯನ್ ರಿಂಗ್ ತಿಂಡಿಯನ್ನು ಬಾಯಿ ಚಪ್ಪರಿಸಿ ಸವಿದಿರುತ್ತೇವೆ. ಮಕ್ಕಳಿಗೆ ಈ ಆನಿಯನ್ ರಿಂಗ್ ಅಂದ್ರೆ ಪಂಚಪ್ರಾಣ. ಖಾರ ಖಾರವಾಗಿ ಬಾಯಿ ರುಚಿ ಹೆಚ್ಚಿಸುವಂತಹ ತಿಂಡಿಗೆ ಎಲ್ಲರು ಫಿದಾ ಆಗುತ್ತಾರೆ. ಹಾಗೆ ಇದನ್ನು ಸಂಜೆ ಸಮಯದಲ್ಲಿ ಟೀ ಕಾಫಿಯ ಜೊತೆ ಸವಿಯಲು ನೀಡಿದರೆ ಸಂಜೆ ಹೊತ್ತಲ್ಲಿ ಬಾಯಿ ರುಚಿ ಹೆಚ್ಚಾಗುತ್ತೆ.
ಹಾಗೆ ಈ ಆನಿಯನ್ ರಿಂಗ್ಸ್ ಅನ್ನು ಊಟದ ಜೊತೆಗೆ ಸೈಡ್ ಡಿಷ್ ಆಗಿಯೂ ಕೆಲವರು ಸವಿಯಲು ಇಷ್ಟಪಡುತ್ತಾರೆ. ಇನ್ನು ಈ ಆನಿಯನ್ ರಿಂಗ್ ಅನ್ನು ನಾವು ಮನೆಯಲ್ಲೇ ಮಾಡಬಹುದು. ಅತ್ಯಂತ ಸುಲಭವಾಗಿ ಕಡಿಮೆ ವಸ್ತುಗಳ ಬಳಸಿಕೊಂಡು ಮನೆ ಮಂದಿಯಲ್ಲ ಸವಿಯಬಹುದಾದ ರುಚಿಯಲ್ಲಿ ಆನಿಯನ್ ರಿಂಗ್ ಮಾಡಬಹುದು.

ನಿಮಗೆ ಎಷ್ಟು ಖಾರವಾಗಿ ಬೇಕೋ ಹಾಗೆ ಮಸಾಲೆ ರೆಡಿ ಮಾಡಿಕೊಂಡು ಆನಿಯನ್ ರಿಂಗ್ ಮಾಡಿಕೊಳ್ಳಬಹುದು. ಹಾಗಾದ್ರೆ ನಾವಿಂದು ಈ ಆನಿಯನ್ ರಿಂಗ್ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಆನಿಯನ್ ರಿಂಗ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನ ವೇನು?, ಮಾಡಲು ಎಷ್ಟು ಸಮಯಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆನಿಯನ್ ರಿಂಗ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಈರುಳ್ಳಿ-4
- ಮೈದಾ ಹಿಟ್ಟು - 1 ಕಪ್
- ಕಾರ್ನ್ ಹಿಟ್ಟು - 2 tbs
- ಗರಂ ಮಸಾಲಾ ಪುಡಿ
- ಕಾಳು ಮೆಣಸು ಪುಡಿ
- ಖಾರದ ಪುಡಿ - 1/2 ಟೀಸ್ಪೂನ್
- ಬ್ರೆಡ್ ತುಂಡುಗಳು - 1 ಕಪ್
- ಎಣ್ಣೆ
- ಉಪ್ಪು
ಆನಿಯನ್ ರಿಂಗ್ ಮಾಡುವ ವಿಧಾನವೇನು?
ಮೊದಲು ಈರುಳ್ಳಿಯನ್ನು ಚೆನ್ನಾಗಿ ವೃತ್ತಾಕಾರವಾಗಿ ಕತ್ತರಿಸಿಕೊಳ್ಳಿ. ಒಂದೊಂದು ಲೇಯರ್ನಲ್ಲಿ ಒಂದು ರಿಂಗ್ ಬರುವಂತೆ ಹೆಚ್ಚಿಕೊಳ್ಳಬೇಕು. ಈಗ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟು ಹಾಗೆ ಕಾರ್ನ್ ಹಿಟ್ಟು ಅಥವಾ ಅಕ್ಕಿ ಹಿಟ್ಟು ಹಾಕಿಕೊಳ್ಳಿ. ಉಪ್ಪು, ಖಾರದ ಪುಡಿ, ಕಾಳು ಮೆಣಸಿನ ಪುಡಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಬೋಂಡಾ ಹಿಟ್ಟಿನಂತೆ ಕಲಸಿಕೊಳ್ಳಿ. ಬೋಂಡಾ ಮಾಡಲು ಬೇಕಾಗುವ ಹದದಂತೆ ಈ ಹಿಟ್ಟನ್ನು ಕೂಡ ಕಲಸಿಕೊಳ್ಳಬೇಕು. ಈ ಹಿಟ್ಟು ಅಂಟು ಅಂಟಾಗಿರಬೇಕು, ತೀರ ನೀರಾಗದಂತೆ ನೋಡಿಕೊಳ್ಳಿ. ಈಗ ಅಂಗಡಿಯಲ್ಲಿ ಸಿಗುವ ಬ್ರೆಡ್ ಅನ್ನು ತಂದು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಬೇಕು. ಮಿಕ್ಸಿಗೆ ಹಾಕುವ ಮೊದಲು ಹುರಿದುಕೊಳ್ಳಿ.
ತರಿ ತರಿಯಾದ ಈ ಪುಡಿಯನ್ನು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ರೆಡಿ ಮಾಡಿಕೊಂಡ ಹಿಟ್ಟಿಗೆ ವೃತ್ತಾಕಾರವಾಗಿ ಹೆಚ್ಚಿಕೊಂಡಿರುವ ರಿಂಗ್ ರೀತಿಯ ಈರುಳ್ಳಿಯನ್ನು ಹಾಕಿಕೊಳ್ಳಿ. ಅನಂತರ ಅದನ್ನು ಎತ್ತಿ ಬ್ರೆಡ್ ಪುಡಿಗೆ ಹಾಕಿ ಈ ಪುಡಿ ಅಂಟಿಕೊಳ್ಳುವಂತೆ ಮಾಡಿ. ಎಲ್ಲಾ ಈರುಳ್ಳಿಯನ್ನು ಇದೇ ರೀತಿ ಮಾಡಿ ತಟ್ಟೆಗೆ ಹಾಕಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಅನಂತರ ಈ ರಿಂಗ್ ಆನಿಯನ್ ಅನ್ನು ಎಣ್ಣೆ ಬಿಟ್ಟು ಕರಿದುಕೊಳ್ಳಿ. 4 ರಿಂದ 5 ನಿಮಿಷದಲ್ಲಿ ಈ ಆನಿಯನ್ ಬೇಯುತ್ತದೆ. ನಂತರ ನೀವು ಇದನ್ನು ಎಣ್ಣೆಯಿಂದ ತೆಗೆದು ತಣ್ಣಗಾದ ಬಳಿಕ ಸವಿಯಲು ನೀಡಬಹುದು. ಸ್ಟೀಲ್ ಡಬ್ಬದಲ್ಲಿ ಹಾಕಿಟ್ಟರೆ ತಿಂಗಳ ಕಾಲ ಬೇಕಾದರು ಇಟ್ಟು ಸವಿಯಬಹುದು. ನೀವು ಕೂಡ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
