Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ತರಕಾರಿ ಇಲ್ಲದಿದ್ರೂ ಸುಲಭವಾಗಿ ಈರುಳ್ಳಿ ರೈಸ್ ಮಾಡಿ! ಸುಲಭದ ರೆಸಿಪಿ
ಬೆಳಗ್ಗೆ ತಿಂಡಿಗೆ ನೀವು ಹೊಸದಾಗಿ ಯಾವುದಾದ್ರು ರೆಸಿಪಿ ಮಾಡಿ ಸವಿಯುವ ನಿಮ್ಮ ಬಯಕೆ ಆಗಿದ್ದರೆ ರೈಸ್‌ನಿಂದ ಮಾಡುವ ಹೊಸ ಖಾದ್ಯ ಇಲ್ಲಿದೆ. ಇನ್ನು ದಿನದ ಆರಂಭದಲ್ಲಿ ಬ್ರೇಕ್‌ಫಾಸ್ಟ್ ಮಾಡಲು ನೀವು ಯಾವುದಾದರು ಪದಾರ್ಥಗಳ ಹುಡುಕುತ್ತಿರಬಹುದು. ಆದ್ರೆ ಮನೆಯಲ್ಲಿ ತರಕಾರಿ ಇಲ್ಲದೆ ಇದ್ರೆ ಆ ದಿನ ಏನು ಮಾಡಬೇಕು ಎಂಬ ಗೊಂದಲದಲ್ಲೇ ಸಮಯ ಕಳೆಯಲಿದೆ.
ಆದ್ರೆ ಮನೆಯಲ್ಲಿ ತರಕಾರಿಗಳು ಇಲ್ಲದಿದ್ದರೂ ಒಂದೇ ಒಂದು ಈರುಳ್ಳಿ ಬಳಸಿಕೊಂಡು ನೀವು ಸುಲಭವಾಗಿ ರೈಸ್ ಮಾಡಿ ಸವಿಯಬಹುದು. ಅದ್ರಲ್ಲೂ ಈ ರೀತಿಯ ರೈಸ್ ಮಾಡಲು ಹೆಚ್ಚು ವಸ್ತುಗಳು ಬೇಕಾಗಿಲ್ಲ, ಹಾಗೆ ಕಡಿಮೆ ಸಮಯದಲ್ಲಿ ಇದನ್ನು ಮಾಡಿ ಮುಗಿಸಬಹುದು. ಬ್ರೇಕ್‌ಫಾಸ್ಟ್ ಸಮಯದಲ್ಲಿ ನೀವು ಸಹ ಈ ಹೊಸ ಬಗೆಯ ಈರುಳ್ಳಿ ರೈಸ್ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳಿ.

ಈರುಳ್ಳಿ ರೈಸ್ ಮಾಡಲು 2 ನಿಮಿಷ ಸಾಕು ಹಾಗೆ ಈ ರೈಸ್ ಸವಿಯಲು ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಇದನ್ನು ಮಾಡೋದು ಕೂಡ ಬಹಳ ಸುಲಭ ಆಗಿರೋದ್ರಿಂದ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ಈ ಈರುಳ್ಳಿ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಈರುಳ್ಳಿ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅನ್ನ
- ಸಾಸಿವೆ
- ಬೆಳ್ಳುಳ್ಳಿ
- ಕರಿಬೇವು
- ಎಣ್ಣೆ
- ಜೀರಿಗೆ
- ಈರುಳ್ಳಿ
- ಗರಂ ಮಸಾಲ
- ಖಾರದ ಪುಡಿ
- ಅರಶಿಣ
- ಉಪ್ಪು
- ಕೊತ್ತಂಬರಿ ಸೊಪ್ಪು
ಈರುಳ್ಳಿ ರೈಸ್ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ
ನಂತರ ಇದಕ್ಕೆ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಕರಿಬೇವು, ಹಸಿ ಮೆಣಸು, ಗೋಡಂಬಿ
ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಹಾಗೆ ಇದಕ್ಕೆ ಹೆಚ್ಚಿಕೊಂಡಿರುವ ಈರುಳ್ಳಿ ಹಾಕಿಕೊಂಡು ಫ್ರೈ
ಮಾಡಿಕೊಳ್ಳಬೇಕು.
ಅನಂತರ ಇದಕ್ಕೆ ಖಾರದ ಪುಡಿ, ಗರಂ ಮಸಾಲ, ಅರಶಿಣ, ಉಪ್ಪು ಸಹ ಹಾಕಿಕೊಂಡು ಮಿಶ್ರಣ
ಮಾಡಿ ಫ್ರೈ ಮಾಡಿ.
ಇದು ಚೆನ್ನಾಗಿ ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಬೇಕು.
ಅನಂತರ ಇದಕ್ಕೆ ಹುಡಿ ಹುಡಿಯಾದ ಅನ್ನವನ್ನು ಹಾಕಿಕೊಳ್ಳಿ.
ಅನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅದ್ರಲ್ಲೂ ಹಳೆಯ ಅನ್ನವನ್ನು ಸಹ
ಬಳಸಿ ಇದನ್ನು ಮಾಡಬಹುದು.
ನೀವಿದನ್ನು ಬೆಳಗ್ಗೆ ತಿಂಡಿಗೆ ಸವಿದು ಮಧ್ಯಾಹ್ನದ ಬಾಕ್ಸ್‌ಗೂ ಸಹ
ಬಳಸಿಕೊಳ್ಳಬಹುದು.
ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿಕೊಂಡರೆ ನಿಮ್ಮ ಮುಂದೆ ಈ ರುಚಿ
ರುಚಿಯ ಈರುಳ್ಳಿ ರೈಸ್ ಸಿದ್ದವಾಗುತ್ತೆ.



Click it and Unblock the Notifications
