Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ತರಕಾರಿ ಇಲ್ಲದೆಯೇ ಬ್ರೇಕ್‌ಫಾಸ್ಟ್‌ಗೆ ಸಖತ್ ರುಚಿ ನೀಡುವ ರೈಸ್ ಮಾಡಿ ನೋಡಿ..!
ಮನೆಯಲ್ಲಿ ಬೆಳಗ್ಗಿನ ತಿಂಡಿ ಮಾಡಲು ಎಷ್ಟೇ ಪದಾರ್ಥಗಳು ನಮ್ಮ ಮುಂದಿದ್ದರೂ ಕೆಲವೊಮ್ಮೆ ಗೊಂದಲ ಮೂಡುವುದು ಸಾಮಾನ್ಯವೇ. ಆದ್ರೆ ಯಾವ ವಸ್ತುಗಳು ಸಹ ಇಲ್ಲದಿದ್ದ ಏನು ಮಾಡಬೇಕು? ಮನೆಯಲ್ಲಿ ಯಾವುದೇ ತರಕಾರಿ ಇಲ್ಲ, ತಿಂಡಿ ಮಾಡಲು ಯಾವ ವಸ್ತುಗಳು ಕೈಗೆ ಸಿಗುತ್ತಿಲ್ಲ ಎನ್ನುವಾಗ ಸುಲಭವಾಗಿ ಯಾವ ತಿಂಡಿ ಮಾಡಬಹುದು ಗೊತ್ತಾ?
ಹೌದು ತರಕಾರಿ ಇಲ್ಲದೆ ಒಂದು ಈರುಳ್ಳಿ ಬಳಸಿ ಬ್ರೇಕ್‌ಫಾಸ್ಟ್‌ಗೆ ರುಚಿಕರ ಈರುಳ್ಳಿ ರೈಸ್ ಮಾಡಬಹುದು. ಇದಕ್ಕೆ ಯಾವುದೇ ತರಕಾರಿ ಹಾಕಬೇಕೆಂದಿಲ್ಲ. ಒಂದಿಷ್ಟು ವಸ್ತುಗಳ ಹಾಕಿದರೆ ಈ ಬ್ರೇಕ್‌ಫಾಸ್ಟ್ ರುಚಿಗೆ ನೀವು ಫಿದಾ ಆಗೋದು ಗ್ಯಾರಂಟಿ.

ಈರುಳ್ಳಿ ರೈಸ್ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ಸರಿಯಾದ ವಿಧಾನವೇನು? ಮಾಡುವಾಗ ಯಾವ ಕ್ರಮ ಅನುಸರಿಸಬೇಕು? ಎಂಬ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಈರುಳ್ಳಿ ರೈಸ್ ಮಾಡಲು ಬೇಕಾಗುವ ಪದಾರ್ಥಗಳು
- ಈರುಳ್ಳಿ - 2
- ಅನ್ನ - 2 ಬೌಲ್ ಅಥವಾ 200 ಗ್ರಾಮ್
- ಒಣ ಮೆಣಸು - 4
- ಟೊಮೆಟೋ -2
- ಕರಿಬೇವು
- ಸಾಸಿವೆ - ಅರ್ಧ ಟೀ ಸ್ಪೂನ್
- ಜೀರಿಗೆ- ಅರ್ಧ ಟೀ ಸ್ಪೂನ್
- ಕಡಲೆ ಬೇಳೆ- 1 ಸ್ಪೂನ್
- ಅರಶಿನ - ಅರ್ಧ ಟೀ ಸ್ಪೂನ್
- ಗರಂ ಮಸಾಲ- ಅರ್ಧ ಟೀ ಸ್ಪೂನ್
- ಚಿಕನ್ ಮಸಾಲ- ಅರ್ಧ ಟೀ ಸ್ಪೂನ್
- ಖಾರದ ಪುಡಿ- ಅರ್ಧ ಟೀ ಸ್ಪೂನ್
- ಧನಿಯಾ ಪುಡಿ- ಅರ್ಧ ಟೀ ಸ್ಪೂನ್
- ಕಡಲೆ ಬೀಜ
- ಗೋಡಂಬಿ
- ಉಪ್ಪು
- ಎಣ್ಣೆ
ಈರುಳ್ಳಿ ರೈಸ್ ಮಾಡುವುದು ಹೇಗೆ
ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ 3 ಸ್ಪೂನ್ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಅದಕ್ಕೆ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿಕೊಂಡು ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ಬಳಿಕ ಇದಕ್ಕೆ ಕಡಲೆ ಬೀಜ, ಗೋಡಂಬಿ ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು.
1 ನಿಮಿಷ ಫ್ರೈ ಮಾಡಿಕೊಂಡರೆ ಸಾಕಾಗುತ್ತದೆ. ಬಳಿಕ ಇದಕ್ಕೆ ಬೆಳ್ಳುಳ್ಳಿ, ಒಣ ಮೆಣಸು, ಕರಿಬೇವು, ಈರುಳ್ಳಿ, ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. 2 ನಿಮಿಷ ಫ್ರೈ ಮಾಡಿದಾಗ ಅದರ ಬಣ್ಣ ಬದಲಾದಾಗ ಇದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡ ಟೋಮೆಟೋ ಹಾಕಿ.
ಟೊಮೆಟೋ ಹಾಕಿದ ಬಳಿಕ ಇದಕ್ಕೆ ಉಪ್ಪು, ಅರಶಿಣ, ಗರಂ ಮಸಾಲ, ಖಾರದ ಪುಡಿ, ಧನಿಯಾ ಪುಡಿ, ಚಿಕನ್ ಮಸಾಲ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು. ಬಳಿಕ ಸ್ವಲ್ಪವೇ ಸ್ವಲ್ಪ ನೀರು ಹಾಕಿ ಸಣ್ಣ ಉರಿಯಲ್ಲಿ 2 ನಿಮಿಷ ಫ್ರೈ ಮಾಡಿಕೊಳ್ಳಬೇಕು. ಸಣ್ಣದಾಗಿ ಗೊಜ್ಜಿನಂತೆ ಆದ ಬಳಿಕ ಇದಕ್ಕೆ ಅನ್ನವನ್ನು ಹಾಕಿಕೊಳ್ಳಬೇಕು.
ಅನ್ನ ಹಾಕಿದ ಬಳಿಕ ಚೆನ್ನಾಗಿ ಮಿಕ್ಸ್ ಮಾಡಬೇಕು. ಈ ವೇಳೆ ಸಹ ಉರಿ ಸಣ್ಣದಾಗಿ ಇಟ್ಟುಕೊಳ್ಳಬೇಕು. ಅಂತಿಮವಾಗಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿಕರ ಈರುಳ್ಳಿ ರೈಸ್ ರೆಡಿಯಾಗುತ್ತದೆ. ಇದಕ್ಕೆ ಯಾವುದೇ ತರಕಾರಿಯ ಅಗತ್ಯವಿರುವುದಿಲ್ಲ. ನೀವು ಸಹ ಈ ರೀತಿಯ ವಿಧಾನದಲ್ಲಿ ಈರುಳ್ಳಿ ರೈಸ್ ಮಾಡಿಕೊಳ್ಳಿ.



Click it and Unblock the Notifications
