Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ರವೆ, ಈರುಳ್ಳಿ ಹಾಕಿ ಈ ದೋಸೆ ಮಾಡಿ! 10 ನಿಮಿಷದಲ್ಲಿ ಕ್ರಿಸ್ಪಿ & ಟೇಸ್ಟಿ ದೋಸೆ ರೆಡಿ
ಬೋರಿಂಗ್ ದೋಸೆಗೆ ಗುಡ್‌ಬೈ ಹೇಳಿ. 10 ನಿಮಿಷದಲ್ಲಿ ಮಾಡಿ ಈ ಹೊಸ ಬಗೆಯ ದೋಸೆ. ಪ್ರತಿದಿನ ಒಂದೇ ರೀತಿಯ ದೋಸೆಯಿಂದ ಬೇಸರವಾಗಿದೆಯೇ? ಹಾಗಿದ್ರೆ, ರುಚಿಕರವಾದ, ಸುಲಭವಾಗಿ ತಯಾರಿಸಬಹುದಾದ ಈರುಳ್ಳಿ ರವಾ ದೋಸೆ (Onion Rava Dosa) ನಿಮಗಾಗಿ. ಈ ಆರೋಗ್ಯಕರ ಮತ್ತು ಗರಿಗರಿಯಾದ ದೋಸೆ ಬೆಳಗಿನ ಟಿಫನ್ ಅಥವಾ ಸಂಜೆಯ ಲಘು ಆಹಾರಕ್ಕೆ ಅತ್ಯುತ್ತಮ ಆಯ್ಕೆ. ಬನ್ನಿ, ರವಾ ದೋಸೆಯನ್ನು (Onion Rava Dosa Recipe) ತಯಾರಿಸುವ ವಿಧಾನವನ್ನು ತಿಳಿಯೋಣ.
ರವಾ ದೋಸೆ, ಸಾಮಾನ್ಯ ದೋಸೆಗಿಂತ ಭಿನ್ನವಾಗಿರುತ್ತದೆ. ಮುಖ್ಯವಾಗಿ ಕೆಲವೇ ನಿಮಿಷಗಳಲ್ಲಿ ಸಿದ್ಧವಾಗುತ್ತದೆ. ಇದನ್ನು ತಯಾರಿಸುವುದು ಕೂಡಾ ಅತೀ ಸುಲಭ. ಮನೆಯಲ್ಲಿಯೇ ಹಂತ ಹಂತವಾಗಿ ಸಿದ್ಧಪಡಿಸುವ ಮೂಲಕ ಈ ಸ್ವಾದಿಷ್ಟಕರ ರವಾ ದೋಸೆಯನ್ನು ತೆಂಗಿನಕಾಯಿ ಚಟ್ನಿ ಮತ್ತು ಟೀ ಅಥವಾ ಕಾಫಿಯೊಂದಿಗೆ ಸವಿಯಬಹುದು.

ಈರುಳ್ಳಿ ರವಾ ದೋಸೆಗೆ ಬೇಕಾಗುವ ಸಾಮಗ್ರಿಗಳು
• ಹುರಿದ ರವೆ - 1/2 ಕಪ್
• ಹುರಿದ ಅಕ್ಕಿ ಹಿಟ್ಟು - 1/2 ಕಪ್
• ಮೈದಾ - 1/3 ಕಪ್
• ಹಸಿ ಮೆಣಸಿನಕಾಯಿ - 2 (ಸಣ್ಣಗೆ ಹೆಚ್ಚಿದ್ದು)
• ಈರುಳ್ಳಿ - 1 ಕಪ್ (ಸಣ್ಣಗೆ ಹೆಚ್ಚಿದ್ದು)
• ಕಾಳುಮೆಣಸು - 1 ಸ್ಪೂನ್
• ಕೊತ್ತಂಬರಿ ಸೊಪ್ಪು - 2 ಕಡ್ಡಿ (ಸಣ್ಣಗೆ ಹೆಚ್ಚಿದ್ದು)
• ಕರಿಬೇವಿನ ಎಲೆಗಳು - 1 ಕಡ್ಡಿ (ಸೀಳಿದ್ದು)
• ಮಜ್ಜಿಗೆ - 2 ಕಪ್
• ಎಣ್ಣೆ - 1 ಸ್ಪೂನ್
• ಜೀರಿಗೆ - 1 ಸ್ಪೂನ್
• ತುರಿದ ತೆಂಗಿನಕಾಯಿ - 1 ಸ್ಪೂನ್
• ಉಪ್ಪು - ರುಚಿಗೆ ತಕ್ಕಷ್ಟು

ಈರುಳ್ಳಿ ರವಾ ದೋಸೆ ತಯಾರಿಸುವ ವಿಧಾನ
ಮೊದಲಿಗೆ ಒಂದು ಸಣ್ಣ ಪಾತ್ರೆಯಲ್ಲಿ 1 ಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಜೀರಿಗೆ ಹಾಕಿ, ಸಿಡಿಯಲು ಬಿಡಿ. ಬಳಿಕ ಒಲೆ ಆಫ್ ಮಾಡಿ. ಈಗ ತುರಿದ ತೆಂಗಿನಕಾಯಿ ಹಾಕಿ, ಪಾತ್ರೆಯ ಬಿಸಿಯಲ್ಲೇ ಕೆಲವು ನಿಮಿಷ ಹುರಿಯಿರಿ. ಈಗ ಮಧ್ಯಮ ಗಾತ್ರದ ಬೌಲ್‌ಗೆ ರವೆ, ಅಕ್ಕಿ ಹಿಟ್ಟು, ಮೈದಾ, ಹಸಿ ಮೆಣಸಿನಕಾಯಿ, ಕಾಳುಮೆಣಸು, ಹೆಚ್ಚಿದ ಈರುಳ್ಳಿ, ಸೀಳಿದ ಕರಿಬೇವಿನ ಎಲೆಗಳು, ಕೊತ್ತಂಬರಿ ಸೊಪ್ಪು, ಹುರಿದ ಜೀರಿಗೆ, ತೆಂಗಿನಕಾಯಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇದಾದ ಬಳಿಕ, ನಿಧಾನವಾಗಿ ಮಜ್ಜಿಗೆ ಸೇರಿಸುತ್ತಾ, ಹಿಟ್ಟು ಗಂಟುಗಳಾಗದಂತೆ ಕೈಯಾಡಿಸಿ. ಹಿಟ್ಟು ತೆಳುವಾಗಿರಬೇಕು. ಆಗ ಮಾತ್ರ ದೋಸೆ ತಾನಾಗಿಯೇ ಹರಡುತ್ತದೆ. ಈಗ ಸಿದ್ಧಪಡಿಸಿದ ಹಿಟ್ಟನ್ನು 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಈ ಸಮಯದಲ್ಲಿ ಹಿಟ್ಟು ಸ್ವಲ್ಪ ಗಟ್ಟಿಯಾಗಬಹುದು. ಅಗತ್ಯವೆನಿಸಿದರೆ, ಸ್ವಲ್ಪ ನೀರು ಸೇರಿಸಿ ಮತ್ತೊಮ್ಮೆ ತೆಳುಗೊಳಿಸಿ. ನಾನ್ ಸ್ಟಿಕ್ ಹೆಂಚನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಹೆಂಚಿನ ಮೇಲೆ ಸ್ವಲ್ಪ ನೀರು ಚಿಮುಕಿಸಿ. ನೀರು ಸಿಡಿದರೆ ಹೆಂಚು ದೋಸೆ ಹಾಕಲು ಸಿದ್ಧವಾಗಿದೆ ಎಂದರ್ಥ.

ಈಗ ಒಂದು ಸೌಟು ಹಿಟ್ಟನ್ನು ತೆಗೆದುಕೊಂಡು ಹೆಂಚಿನ ಅಂಚಿನಿಂದ ಮಧ್ಯಕ್ಕೆ ಸುರಿಯಿರಿ. ಹಿಟ್ಟು ತಾನಾಗಿಯೇ ಹರಡುತ್ತದೆ. ರವಾ ದೋಸೆಯನ್ನು ಸಾಮಾನ್ಯ ದೋಸೆಯಂತೆ ಹರಡಬೇಕಿಲ್ಲ. ಹಾಗಾಗಿ, ಹಿಟ್ಟು ತೆಳುವಾಗಿರುವುದು ಮುಖ್ಯ. ದೋಸೆಯ ಸುತ್ತಲೂ ಸ್ವಲ್ಪ ಎಣ್ಣೆ ಹಾಕಿ. ಮಧ್ಯಮ ಉರಿಯಲ್ಲಿ ಕೆಳಭಾಗವು ಗೋಲ್ಡ್ ಕಲರ್ ಬರುವವರೆಗೆ ಮತ್ತು ಗರಿಗರಿಯಾಗುವವರೆಗೆ ಬೇಯಿಸಿ. ರವಾ ದೋಸೆಯನ್ನು ಕೇವಲ ಒಂದು ಬದಿಯಲ್ಲಿ ಬೇಯಿಸಲಾಗುತ್ತದೆ. ಬೆಂದ ನಂತರ ಅದನ್ನು ಮಡಚಿ ಪಾತ್ರಗೆ ಹಾಕಿ.
ಇಷ್ಟು ಮಾಡಿದರೆ ಸಾಕು, ಬಿಸಿ ಬಿಸಿಯಾದ ಈರುಳ್ಳಿ ರವಾ ದೋಸೆ ಸಿದ್ಧ. ಇದನ್ನು ತೆಂಗಿನಕಾಯಿ ಚಟ್ನಿ ಮತ್ತು ಫಿಲ್ಟರ್ ಕಾಫಿಯೊಂದಿಗೆ ಸವಿಯಬಹುದು. ಮಕ್ಕಳ ಟಿಫನ್ ಬಾಕ್ಸ್‌ಗೂ ಸಹ ಹಾಕಬಹುದು.



Click it and Unblock the Notifications
