Latest Updates
-
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು!
ಊಟದ ರುಚಿ ಡಬಲ್ ಮಾಡುವ ಉಪ್ಪಿನಕಾಯಿ: ಈರುಳ್ಳಿ ಪಿಕಲ್ ಮಾಡೋದು ಹೇಗೆ?
ಊಟದೊಂದಿಗೆ ಎಲ್ಲರೂ ಉಪ್ಪಿನಕಾಯಿ ಸವಿಯಲು ಇಷ್ಟಪಡುತ್ತಾರೆ, ಉಪ್ಪಿನಕಾಯಿ ಒಂದಿದ್ದರೆ ಹಲವರಿಗೆ ಸಾಂಬಾರ್, ಚಟ್ನಿ, ಪಲ್ಯ ಈ ಯಾವುದೇ ಖಾದ್ಯಗಳು ಬೇಡ. ಮೊಸರು, ಮಜ್ಜಿಗೆ ಉಪ್ಪಿನಕಾಯಿಯಲ್ಲಿ ಇಡೀ ಊಟ ಮುಗಿಸುವವರು ಸಹ ಇದ್ದಾರೆ. ಹಾಗೆ ಉಪ್ಪಿನಕಾಯಿಯಲ್ಲಿ ಹತ್ತಾರು ವಿಧಗಳಿರುವುದು ನೋಡಬಹುದು.
ಹಾಗೆ ಉಪ್ಪಿನಕಾಯಿಯಲ್ಲಿ ಹತ್ತು ಹಲವು ವಿಧಗಳಿವೆ. ಮಾರುಕಟ್ಟೆಯಲ್ಲಂತು ಒಂದಲ್ಲಾ ಒಂದು ರೀತಿಯ ವಿಶೇಷ ವಿಭಿನ್ನ ಶೈಲಿಯ ಉಪ್ಪಿನಕಾಯಿಗಳು ನೋಡಲು ಸಿಗುತ್ತವೆ. ಇವು ದುಬಾರಿಯೂ ಸಹ ಹೌದು. ಆದ್ರೆ ಮನೆಯಲ್ಲೇ ಮಾಡುವಂತಹ ರುಚಿ ರುಚಿಯ ಉಪ್ಪಿನಕಾಯಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.

ನಾವಿಂದು ಸುಲಭವಾಗಿ ಮನೆಯಲ್ಲೇ ಮಾಡಿ ಸವಿಯುವ ಉಪ್ಪಿನಕಾಯಿ ಕುರಿಯಾಗಿ ತಿಳಿದುಕೊಳ್ಳೋಣ ಅದ್ರಲ್ಲೂ ಈರುಳ್ಳಿಯಿಂದ ಮಾಡುವ ಖಾರ ಖಾರವಾದ ಉಪ್ಪಿನಕಾಯಿ ಎಲ್ಲರಿಗೂ ಇಷ್ಟವಾಗುವ ರೀತಿ ಮನೆಯಲ್ಲೇ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಈರುಳ್ಳಿ ಬಳಸಿ ಮಾಡುವ ಈ ಉಪ್ಪಿನಕಾಯಿ ಊಟದೊಂದಿಗೆ ಅದ್ಭುತ ರುಚಿ ನೀಡಲಿದೆ. ಹಾಗೆ ವಿಶೇಷ ರುಚಿ ಹಾಗೆ ಆರೋಗ್ಯದ ದೃಷ್ಟಿಯಿಂದ ಇದು ಅತ್ಯುತ್ತಮ ಉಪ್ಪಿನಕಾಯಿ ಆಗಿದೆ. ಈರುಳ್ಳಿಯಲ್ಲಿನ ಆರೋಗ್ಯಕಾರಿ ಅಂಶಗಳು ನಿಮಗೂ ಉತ್ತಮವಾಗಲಿದೆ. ಹಾಗಾದ್ರೆ ಈ ಈರುಳ್ಳಿ ಉಪ್ಪಿನಕಾಯಿ ಮನೆಯಲ್ಲೇ ಮಾಡೋದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಈರುಳ್ಳಿ ಉಪ್ಪಿನಕಾಯಿ ಮಾಡಲು ಬೇಕಾಗುವ ವಸ್ತುಗಳು
- ಈರುಳ್ಳಿ- ಅರ್ಧ ಕೆಜಿ
- ಬೆಲ್ಲ
- ಜೀರಿಗೆ
- ಸಾಸಿವೆ
- ಬೆಲ್ಲ
- ಇಂಗು
- ಹುಣಸೆ ಹುಳಿ
- ಉಪ್ಪು
- ಬೆಳ್ಳುಳ್ಳಿ
- ಖಾರದ ಪುಡಿ
- ಒಣ ಮೆಣಸಿನಕಾಯಿ
- ಎಣ್ಣೆ
ಈರುಳ್ಳಿ ಉಪ್ಪಿನಕಾಯಿ ಮಾಡುವ ಸುಲಭದ ವಿಧಾನವೇನು?
ಮೊದಲು ಈರುಳ್ಳಿಯನ್ನು ಚೆನ್ನಾಗಿ ಸ್ಲೈಸ್ ಆಗಿ ಕತ್ತರಿಸಿಕೊಂಡು ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಮೆಂತ್ಯ, ಸಾಸಿವೆ, ಜೀರಿಗೆ, ಹಾಕಿಕೊಂಡು ಹುರಿದುಕೊಳ್ಳಬೇಕು. ನಂತರ ತೆಗೆದು ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಅದೇ ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಸ್ವಲ್ಪ ಹೆಚ್ಚಾಗಿಯೇ ಬಳಸಿಕೊಳ್ಳಿ.
ಹಾಗೆ ಈ ಎಣ್ಣೆಗೆ ಹೆಚ್ಚಿಕೊಂಡಿರುವ ಈರುಳ್ಳಿಗಳನ್ನು ಹಾಕಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಈ ಸಮಯದಲ್ಲಿ ಮಿಕ್ಸಿ ಜಾರ್ಗೆ ಈ ಮೊದಲು ಹುರಿದುಕೊಂಡಿದ್ದ ಮೆಂತ್ಯ, ಸಾಸಿವೆ ಎಲ್ಲಾ ಹಾಕಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ. ಈಗ ಈರುಳ್ಳಿ ದೊಡ್ಡ ನಿಂಬೆ ಗಾತ್ರದ ಹುಣಸೆ ಹುಳಿ ಹಾಕಿಕೊಳ್ಳಿ.
ಈಗ ಈರುಳ್ಳಿಯನ್ನು ಪಾತ್ರೆಯಿಂದ ತೆಗೆದು ಒಂದು ಜರಡಿಯಲ್ಲಿ ಹಾಕಿ ಎಣ್ಣೆ ಬಸಿದು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಈರುಳ್ಳಿ ತಣ್ಣಗಾಗಲು ಬಿಡಿ. ನಂತರ ಮಿಕ್ಸಿ ಜಾರ್ಗೆ ಈ ಈರುಳ್ಳಿಯನ್ನು ಹಾಕಿ ನೀರು ಹಾಕದೆ ಪೇಸ್ಟ್ ಮಾಡಿಕೊಳ್ಳಿ. ಈಗ ಬಾಣಲೆಗೆ ಮತ್ತೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಬೆಳ್ಳುಳ್ಳಿ, ಇಂಗು, ಖಾರದ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ರುಬ್ಬಿಕೊಂಡಿದ್ದ ಈರುಳ್ಳಿ ಪೇಸ್ಟ್ ಅನ್ನು ಇದಕ್ಕೆ ಹಾಕಿಕೊಂಡು ಸಣ್ಣ ಉರಿಯಲ್ಲಿ ಬೇಯಲು ಬಿಡಿ.
ಕೈ ಬಿಡದೆ ಇದನ್ನು ಮಿಕ್ಸ್ ಮಾಡುತ್ತಾ ಇರಿ. ಹಾಗೆ ಮತ್ತೆ ಉಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಇದಕ್ಕೆ ಮೊದಲು ಪುಡಿ ಮಾಡಿಕೊಂಡ ಸಾಸಿವೆ ಪುಡಿಯನ್ನು ಸಹ ಹಾಕಿಕೊಂಡು ಸ್ವಲ್ಪ ಬೆಲ್ಲದ ಪುಡಿ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷ ಬಿಟ್ಟರೆ ನಿಮ್ಮ ಮುಂದೆ ಈರುಳ್ಳಿ ಉಪ್ಪಿನಕಾಯಿ ಸಿದ್ದವಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ನೋಡಿ.



Click it and Unblock the Notifications
