Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ತರಕಾರಿ ಖಾಲಿಯಾದಾಗ ಈ ಈರುಳ್ಳಿ ಪಲ್ಯ ಮಾಡಿ..! 3 ನಿಮಿಷ ಸಾಕು!
ಊಟದ ಜೊತೆಗೆ ಸವಿಯಲು ನೀವು ಸಾಂಬಾರ್ ರುಚಿ ರುಚಿ ಪಲ್ಯ ಮಾಡುವುದು ಸಾಮಾನ್ಯ. ಆದ್ರೆ ನಿತ್ಯವು ತರಕಾರಿ ಸಾಂಬಾರ್, ಹಾಗೆ ತರಕಾರಿ ಪಲ್ಯ ಮಾಡುವುದು ಅಂದರೆ ಎಲ್ಲರಿಗೂ ಬೇಜಾರ್ ಆಗಬಹುದು. ಹಾಗೆ ತರಕಾರಿಯ ಸಾಂಬಾರ್ ಮಾಡುವ ಜೊತೆಗೆ ತರಕಾರಿ ಪಲ್ಯ ಮಾಡುವುದು ಕೂಡ ಬೇಜಾರಿನ ಸಂಗತಿ. ಹೀಗಾಗಿ ಊಟದ ಜೊತೆಗೆ ಸವಿಯಲು ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ರುಚಿ ರುಚಿ ಖಾದ್ಯ ಮಾಡಲು ಮುಂದಾಗುವುದೇ ಹೆಚ್ಚು.
ಹಾಗಾದ್ರೆ ಕಡಿಮೆ ಸಮಯದಲ್ಲಿ ಕಡಿಮೆ ವಸ್ತು ಬಳಸಿ ಮಾಡುವ ಖಾದ್ಯ ಯಾವುದು ಅಂದರೆ ಅದು ಈರುಳ್ಳಿ ಪಲ್ಯ. ಊಟದ ಜೊತೆಗೆ ಸವಿಯಲು ಮಸಾಲೆ ಭರಿತ ಈ ಈರುಳ್ಳಿ ಪಲ್ಯ ಮಾಡಿದ್ರೆ ಊಟದ ರುಚಿ ಹೆಚ್ಚಾಗೋದು ಖಚಿತ. ಹಾಗೆ ಇದನ್ನು ಮಾಡಲು ಯಾವ ಹಸಿರು ತರಕಾರಿಯ ಅಗತ್ಯವೂ ಇಲ್ಲ. ಜೊತೆಗೆ ಹೆಚ್ಚು ಪದಾರ್ಥಗಳು ಕೂಡ ಬೇಕಾಗಿಲ್ಲ.

ಇನ್ನು ತರಕಾರಿ ಸಾಂಬಾರ್ ಜೊತೆಗೆ ಈ ಈರುಳ್ಳಿ ಪಲ್ಯ ಇದ್ದರೆ ಬಾಯಿ ಚಪ್ಪರಿಸಿ ಸವಿಯಲು ನೀವು ಮುಂದಾಗೋದು ಪಕ್ಕಾ. ಹಾಗೆ ಈ ಈ ಈರುಳ್ಳಿ ಪಲ್ಯ ಊಟದ ಜೊತೆಗೆ ಹಾಗೆ ಯಾವುದೇ ತಿಂಡಿಯ ಜೊತೆಗೂ ಕೂಡ ಸವಿಯಬಹುದು. ಹಾಗಾದ್ರೆ ಈರುಳ್ಳಿ ಚಟ್ನಿ ಮಾಡೀದು ಹೇಗ? ಮಾಡಲು ಎಷ್ಟು ಸಮಯ ಬೇಕಾಗುತ್ತದೆ?, ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈರುಳ್ಳಿ ಪಲ್ಯ ಮಾಡಲು ಬೇಕಾಗುವ ವಸ್ತುಗಳು
- ಈರುಳ್ಳಿ - 4
- ಸಾಸಿವೆ
- ಜೀರಿಗೆ
- ಹಸಿ ಮೆಣಸಿನಕಾಯಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕರಿಬೇವು
- ಕೊತ್ತಂಬರಿ ಸೊಪ್ಪು
- ಅರಿಶಿನ ಪುಡಿ
- ಕೆಂಪು ಮೆಣಸಿನ ಪುಡಿ
- ಗರಂ ಮಸಾಲ
- ರುಚಿಗೆ ತಕ್ಕಷ್ಟು ಉಪ್ಪು
- ಎಣ್ಣೆ
ಈರುಳ್ಳಿ ಪಲ್ಯ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ. ನಂತರ ಇದಕ್ಕೆ ಸಾಸಿವೆ, ಜೀರಿಗೆ, ಹಸಿ ಮೆಣಸು ಹಾಕಿ ಅರ್ಧ ನಿಮಿಷ ಬಿಟ್ಟು ನಂತರ ಕರಿಬೇವು ಹಾಕಿಕೊಳ್ಳಿ. ಮತ್ತೆ ಅರ್ಧ ನಿಮಿಷ ಬಿಟ್ಟು ಇದಕ್ಕೆ ಚೆನ್ನಾಗಿ ಸ್ಲೈಸ್ ಮಾಡಿಕೊಂಡಿರುವ ಈರುಳ್ಳಿಗಳನ್ನು ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು.
2 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈರುಳ್ಳಿ ಬಣ್ಣ ಕೆಂಪಗಾಗಲಿ. ಈಗ ಅರಶಿಣ, ಖಾರದ ಪುಡಿ, ಗರಂ ಮಸಾಲೆ ಹಾಕಿಕೊಂಡು ಮತ್ತೆ 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಈಗ ಒಂದು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಫ್ರೈ ಆಗಲು ಬಿಡಿ.
ಕೈ ಬಿಡದೆ ಕಲಸಿಕೊಳ್ಳುತ್ತಾ ಇರಿ. 1 ನಿಮಿಷ ಬಿಟ್ಟು ಇದಕ್ಕೆ ಕೊತ್ತಂಬರಿ ಸೊಪ್ಪು ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ನಂತರ ಬಿಸಿಯಲ್ಲೇ ಒಂದು ನಿಮಿಷ ಕಲಸಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಈರುಳ್ಳಿ ಪಲ್ಯ ರೆಡಿಯಾಗುತ್ತೆ. ಈ ಪಲ್ಯ ಮಾಡೋಕೆ 5 ನಿಮಿಷ ಸಾಕು. ಹಾಗೆ ಕಡಿಮೆ ವಸ್ತಗಳ ಬಳಸಿ ಇದನ್ನು ಮಾಡಬಹುದು. ನೀವು ಕೂಡ ಊಟದ ಜೊತೆಗೆ ಇದನ್ನು ಮಾಡಿ ನೋಡಿ. ಮನೆಯಲ್ಲಿ ತರಕಾರಿ ಖಾಲಿ ಆದಾಗಲು ಕೂಡ ಈ ಈರುಳ್ಳಿ ಪಲ್ಯ ಮಾಡಿ ಸವಿಯಬಹುದು. ಊಟ ಹಾಗೂ ತಿಂಡಿಯ ಜೊತೆಗೆ ಅದ್ಭುತ ರುಚಿ ನೀಡಲಿದೆ.



Click it and Unblock the Notifications
