Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ತರಕಾರಿ, ಸಾಸ್ ಯಾವುದೂ ಬೇಡ; ಈ ರೀತಿ ಮಾಡಿ ಈರುಳ್ಳಿ ಮಂಚೂರಿಯನ್!
ಸಂಜೆ ಸಮಯದಲ್ಲಿ ನೀವು ಗೋಬಿ ಮಂಚೂರಿಯನ್ ಸವಿಯಲು ಬಹಳ ಇಷ್ಟಪಡುವ ಮಂದಿ ಆಗಿರಬಹುದು. ಅದ್ರಲ್ಲೂ ಇತ್ತೀಚಿಗೆ ಗೋಬಿ ಮಂಚೂರಿಯನ್ ಎಲ್ಲರ ಇಷ್ಟದ ಸ್ನ್ಯಾಕ್ಸ್ ಆಗಿರಲಿದೆ. ಸಂಜೆ ಸಮಯದಲ್ಲಿ ಸಾಲಿನಲ್ಲಿ ನಿಂತು ಈ ಸವಿಯೋಕೆ ಮುಂದಾಗುತ್ತಾರೆ. ಹಾಗೆ ಆರೋಗ್ಯರ ಸ್ನ್ಯಾಕ್ಸ್ ಬೇಕಿದ್ದರೆ ಮನೆಯಲ್ಲೇ ಮಾಡಬೇಕಾಗುತ್ತದೆ.
ಗೋಬಿ ಮಂಚೂರಿಯನ್‌ಗೆ ಕೋಸನ್ನು ಬಳಸಲಾಗುತ್ತದೆ. ಚೆನ್ನಾಗಿ ಎಣ್ಣೆಯಲ್ಲಿ ಕರಿದು ಸಾಸ್ ಬಳಸಿ ರುಚಿ ರುಚಿಯಾದ ಗೋಬಿ ಮಂಚೂರಿಯನ್ ಮಾಡಲಾಗುತ್ತದೆ. ನಾವಿಂದು ಯಾವುದೇ ತರಕಾರಿಯನ್ನು ಬಳಸದೆಯೇ ಹಾಗೆ ಸಾಸ್ ಕೂಡ ಇಲ್ಲದೆ ಸುಲಭವಾಗಿ ಗೋಬಿ ಮಂಚೂರಿಯನ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಅದ್ರಲ್ಲೂ ಈರುಳ್ಳಿ ಬಳಸಿಕೊಂಡು ಮಾಡುವ ಈ ಗೋಬಿ ಮಂಚೂರಿಯನ್ ಬಹಳ ರುಚಿ ನೀಡಲಿದೆ.
ಗೋಬಿ ಮಂಚೂರಿಯನ್ ಅಂದ್ರ ಮಕ್ಕಳಿಂದ ಹಿಡಿದು ಎಲ್ಲರಿಗೂ ಇಷ್ಟವಾಗೋ ಸ್ನ್ಯಾಕ್ಸ್. ಆದ್ರೆ ಮನೆಯಲ್ಲೇ ಮಾಡುವ ನಿಮ್ಮ ಬಯಕೆಯಾಗಿದ್ದರೆ ನಾವಿಂದು ಸುಲಭವಾಗಿ ಮಾಡುವ ಈರುಳ್ಳಿ ಮಂಚೂರಿಯನ್ ಮಾಡುವ ಕುರಿತಾಗಿ ಹೇಳಲಿದ್ದೇವೆ. ಈ ಈರುಳ್ಳಿ ಮಂಚೂರಿಯನ್ ಮಾಡಲು ತರಕಾರಿ ಹಾಗೆ ಸಾಸ್ ಅಗತ್ಯವಿಲ್ಲ. ಬಹಳ ಸುಲಭವಾಗಿ ಮಾಡಿಕೊಳ್ಳಬಹುದು.
ಹಾಗಾದ್ರೆ ಈ ಈರುಳ್ಳಿ ಮಂಚೂರಿಯನ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಈರುಳ್ಳಿ ಮಂಚೂರಿಯನ್ ಮಾಡಲು ಬೇಕಾಗುವ ಪದಾರ್ಥಗಳು
- ಈರುಳ್ಳಿ
- ಖಾರದ ಪುಡಿ
- ಉಪ್ಪು
- ಕಾಲು ಕಪ್ ಕಾರ್ನ್ ಫ್ಲೋರ್
- ಕಾಲು ಕಪ್ ಮೈದಾ
- ಶುಂಠಿ
- ಹಸಿ ಮೆಣಸು
- ಸೋಯಾ ಸಾಸ್
- ಚಿಲ್ಲಿ ಸಾಸ್
- ಟೊಮೆಟೋ ಸಾಸ್
- ಎಣ್ಣೆ
- ಕ್ಯಾಪ್ಸಿಕಂ
- ಎಣ್ಣೆ
ಈರುಳ್ಳಿ ಮಂಚೂರಿಯನ್ ಮಾಡುವ ವಿಧಾನವೇನು?
ಒಂದು ಬೌಲ್‌ಗೆ ಈರುಳ್ಳಿಗಳನ್ನು ಸಣ್ಣದಾಗಿ ಹೆಚ್ಚಿಕೊಂಡು ಹಾಕಿಕೊಳ್ಳಿ. ಇದಕ್ಕೆ ಖಾರದ ಪುಡಿ, ಉಪ್ಪು, ಕಾಲು ಕಪ್ ಕಾರ್ನ್ ಫ್ಲೋರ್, ಕಾಲು ಕಪ್ ಮೈದಾ ಹಿಟ್ಟು ಹಾಕಿಕೊಂಡು ಡ್ರೈ ಮಿಕ್ಸ್ ಮಾಡಿ. ಈರುಳ್ಳಿಯಲ್ಲಿನ ನೀರಿನ ಅಂಶ ಇರುವ ಕಾರಣ ಮೊದಲು ಹಾಗೆ ಮಿಕ್ಸ್ ಮಾಡಿ. ಈರುಳ್ಳಿಗೆ ಹಿಟ್ಟು ಹಿಡಿಯಬೇಕು. ಹೀಗಾಗಿ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ. ಬಿಸಿಯಾದ ಬಳಿಕ ಈ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಯನ್ನು ಮಾಡಿ ಎಣ್ಣೆಯಲ್ಲಿ ಹಾಕಿ ಕರಿದುಕೊಳ್ಳಬೇಕು. ನಿಧಾನವಾಗಿ ಕರಿದುಕೊಳ್ಳಿ. ಈಗ ಚಿಕ್ಕ ಬೌಲ್‌ಗೆ ಕಾರ್ನ್ ಫ್ಲೋರ್, ಸೋಯಾ ಸಾಸ್, ಟೊಮೆಟೋ ಸಾಸ್, ಚಿಲ್ಲಿ ಸಾಸ್ ಹಾಕಿಕೊಂಡು ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇದು ಕೆಂಪು ನೀರಿನ ಹದಕ್ಕೆ ಬರಬೇಕು. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು ಕರಿದುಕೊಳ್ಳಿ. ಅನಂತರ ಇದಕ್ಕೆ ಒಂದು ಈರುಳ್ಳಿ, ಕ್ಯಾಪ್ಸಿಕಂ ಸಹ 1 ನಿಮಿಷ ಫ್ರೈ ಮಾಡಿ. ಈಗ ಮಿಶ್ರಣ ಮಾಡಿ ಇಟ್ಟ ಸಾಸ್ ಮಿಶ್ರಣವನ್ನು ಇದಕ್ಕೆ ಹಾಕಿ. ಇದಕ್ಕೆ ಕಾಳು ಮೆಣಸಿನ ಪುಡಿ ಚಿಟಿಕೆ ಉಪ್ಪು ಸಹ ಹಾಕಿಕೊಳ್ಳಿ. ಬೇಕಿದ್ದರೆ ಈಗ ಮೆಣಸಿನ ಸಾಸ್ ಹಾಕಿಕೊಳ್ಳಬಹುದು.
ಈಗ ಕರಿದುಕೊಂಡ ಡ್ರೈ ಗೋಬಿ ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಉರಿ ಹೆಚ್ಚಾಗಿ ಇಟ್ಟುಕೊಂಡು ಮಿಕ್ಸ್ ಮಾಡಿ. ಕೊನೆಯಲ್ಲಿ ಕೊತ್ತಂಬರಿ, ಹಸಿ ಈರುಳ್ಳಿ ಮೇಲೆ ಹಾಕಿಕೊಂಡು ಸವಿಯಬಹುದು, ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಮಂಚೂರಿ ಸಿದ್ದವಾಗುತ್ತೆ. ಇದಕ್ಕೆ ಹೆಚ್ಚು ಸಾಸ್ ಬಳಸುವ ಅಗತ್ಯವೂ ಇರುವುದಿಲ್ಲ.



Click it and Unblock the Notifications

