Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಬ್ರೇಕ್‌ಫಾಸ್ಟ್‌ಗೆ ಈರುಳ್ಳಿ ಗೊಜ್ಜನ್ನ ಪರ್ಫೆಕ್ಟ್ ರುಚಿ..! ಮಾಡೋದು ಸಹ ಸುಲಭ
ರೈಸ್‌ನಿಂದ ನಾವು ಎಷ್ಟೊಂದು ವಿಧದ ಖಾದ್ಯ ಮಾಡಬಹುದು. ಬೆಳಗ್ಗೆ ತಿಂಡಿಗೆ ಮಧ್ಯಾಹ್ನ ಊಟಕ್ಕೆ ಹಾಗೆ ರಾತ್ರಿ ಊಟಕ್ಕೂ ರೈಸ್‌ನಿಂದ ಹಲವು ಬಗೆಯ ಖಾದ್ಯ ಮಾಡಬಹುದು. ನಾವು ಕೂಡ ಹಲವು ರೀತಿಯ ರೈಸ್ ಮಾಡಿ ಸವಿದಿರುತ್ತೇವೆ. ಪಲಾವ್, ಚಿತ್ರಾನ್ನ, ಗೀರೈಸ್, ಪುಳಿಯೋಗರೆ, ಬಿಸಿ ಬೇಳೆ ಬಾತ್, ಬೆಳ್ಳುಳ್ಳಿ ಮಸಾಲೆ ರೈಸ್, ಫ್ರೈಡ್ ರೈಸ್ ಹೀಗೆ ಹೇಳುತ್ತಾ ಹೋದ್ರೆ ಈ ಪಟ್ಟಿ ಮುಂದುವರೆಯುತ್ತಲೇ ಇರುತ್ತೆ.
ಹೀಗೆ ನಾವು ರೈಸ್‌ನಲ್ಲಿ ಅತ್ಯುತ್ತಮ ರುಚಿಯ ಯಾವುದಾದರು ಖಾದ್ಯ ಮಾಡಲು ಇಷ್ಟಪಡುತ್ತೇವೆ, ಹೀಗಾಗಿ ಇಂದು ಈರುಳ್ಳಿ ಗೊಜ್ಜನ್ನ ಮಾಡುವ ಕುರಿತು ತಿಳಿದುಕೊಳ್ಳೋನ. ಅನ್ನಕ್ಕೆ ಒಂದು ಒಗ್ಗರಣೆ ಹಾಗೂ ಮಸಾಲೆ ಹಾಕಿರುವ ಗೊಜ್ಜನ್ನು ನಾವು ಬಳಸಿ ರೈಸ್ ಮಾಡಿದ್ರೆ ಆ ರುಚಿಗೆ ಮತ್ತೆ ಮತ್ತೆ ಮಾಡಿ ಸವಿಯಲು ಮುಂದಾಗುತ್ತೇವೆ.

ಇನ್ನು ಅನ್ನವನ್ನು ಬಳಸಿ ಬೆಳಗ್ಗೆ ಯಾವುದಾದರು ತಿಂಡಿ ಮಾಡುವ ಆಲೋಚನೆ ಇದ್ದರೆ ಈ ರೀತಿ ಈರುಳ್ಳಿ ಗೊಜ್ಜನ್ನ ಮಾಡಿ ನೋಡಿ, ಇದು ಮಕ್ಕಳಿಗೆ ಬಹಳ ಇಷ್ಟವಾಗುವಂತಹ ಖಾದ್ಯವಾಗಿದೆ. ಹಾಗೆ ನೀವು ಮಧ್ಯಾಹ್ನದ ಊಟಕ್ಕೂ ಕೂಡ ಇದನ್ನು ಮಾಡಬಹುದು. ಹಾಗಾದ್ರೆ ಈ ಈರುಳ್ಳಿ ಗೊಜ್ಜನ್ನ ಮಾಡುವುದು ಹೇಗೆ?
ಈರುಳ್ಳಿ ಗೊಜ್ಜನ್ನ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಹೇಗೆಲ್ಲಾ ತಯಾರಿ ಮಾಡಿಕೊಳ್ಳಬೇಕಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈರುಳ್ಳಿ ಗೊಜ್ಜನ್ನ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ
- ಸಾಸಿವೆ
- ಜೀರಿಗೆ
- ಬೆಳ್ಳುಳ್ಳಿ
- ಕರಿಬೇವಿನ ಎಲೆ
- ಈರುಳ್ಳಿ - 1
- ಹುಣಸೆ ಹಣ್ಣಿನ ರಸ
- ಸಾಂಬಾರ್ ಪುಡಿ
- ಅರಿಶಿನ ಪುಡಿ
- ತುಪ್ಪ
- ಕೊತ್ತಂಬರಿ ಸೊಪ್ಪು
- ಎಣ್ಣೆ
- ಉಪ್ಪು
ಈರುಳ್ಳಿ ಗೊಜ್ಜನ್ನ ಮಾಡುವ ವಿಧಾನವೇನು?
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟಿ ಎರಡು ಸ್ಪೂನ್ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಸಾಸಿವೆ, ಬೆಳ್ಳುಳ್ಳಿ, ಕರಿಬೇವು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಸ್ವಲ್ಪ ಹೆಚ್ಚು ಬೆಳ್ಳುಳ್ಳಿ ಹಾಕಿಕೊಳ್ಳಿ. ಈಗ ಒಂದು ಈರುಳ್ಳಿಯನ್ನು ಹಾಕಿಕೊಂಡು 3 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
ಈಗ ಇದಕ್ಕೆ ಹುಣಸೆ ಹಣ್ಣಿನ ರಸವನ್ನು ಇದಕ್ಕೆ ಹಾಕಿ ಕಲಸಿಕೊಳ್ಳಿ. ಅನಂತರ ಸಾಂಬಾರ್ ಪುಡಿ, ಅರಶಿಣಮ, ರುಚಿಗೆ ತಕ್ಕಷ್ಟು ಹಾಕಿ 3 ನಿಮಿಷ ಕುದಿಯಲು ಬಿಡಬೇಕು, ಕುದಿಸುತ್ತಾ ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ. ಈಗ ಈ ಗೊಜ್ಜಿಗೆ ಹುಡಿ ಹುಡಿಯಾಗಿ ಮಾಡಿಟ್ಟಿರುವ ಅನ್ನವನ್ನುನ ಇದಕ್ಕೆ ಹಾಕಿಕೊಳ್ಳಿ. ಹಾಗೆ ತುಪ್ಪ, ಕೊತ್ತಂಬರಿ ಸೊಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
2 ನಿಮಿಷ ಚೆನ್ನಾಗಿ ಸಣ್ಣ ಉರಿಯಲ್ಲಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಒಲೆ ಆಫ್ ಮಾಡಿಕೊಂಡು ಕೆಳಗೆ ಇಳಿಸಿಕೊಂಡರೆ ನಿಮ್ಮ ಮುಂದೆ ಈ ಈರುಳ್ಳಿ ಗೊಜ್ಜನ್ನ ಸವಿಯಲು ಸಿದ್ಧವಾಗುತ್ತೆ. ಹಾಗಾದ್ರೆ ನೀವು ಕೂಡ ಒಮ್ಮೆ ಮನೆಯಲ್ಲಿ ಈ ರೀತಿ ಈರುಳ್ಳಿ ಗೊಜ್ಜನ್ನ ಟ್ರೈ ಮಾಡಿ ನೋಡಿ.



Click it and Unblock the Notifications
