Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಹೋಟೆಲ್ ರುಚಿಯ ಈರುಳ್ಳಿ ದೋಸೆ ಮನೆಯಲ್ಲೇ ಮಾಡಿ..! ಹಿಟ್ಟು ಮಾಡೋದು ಹೀಗೆ
ದೋಸೆ ಅಂದ ತಕ್ಷಣ ನಮ್ಮ ನೆನಪಿಗೆ ಬರೋದು ಮಸಾಲಾ ದೋಸೆ. ಆದ್ರೆ ದೋಸೆಯಲ್ಲಿ ಹತ್ತಾರು ವಿಧಗಳಿವೆ. ದಕ್ಷಿಣ ಭಾರದತದಲ್ಲಿ, ದೋಸೆ ಸಾಮಾನ್ಯವಾದ ತಿಂಡಿಯಾಗಿದೆ, ಬೆಳಗ್ಗಿನ ಜಾವದಲ್ಲಿ ಸುಲಭವಾಗಿ ತಯಾರಿಸಬಹುದಾದ ಒಂದು ಟೇಸ್ಟಿ ರೆಸಿಪಿ ಇದಾಗಿದೆ.
ಆದರೆ ಮಸಾಲೆ ದೋಸೆ, ರವೆ ದೋಸೆ, ಖಾಲಿ ದೋಸೆ, ಬೆಣ್ಣೆ ದೋಸೆ ಹೀಗೆ ಹತ್ತಾರು ವಿಧಗಳ ನಡುವೆ ಈ ಈರುಳ್ಳಿ ತುಂಬಾನೆ ಫೇಮಸ್, ಈರುಳ್ಳಿ ಬೆರೆತಿರುವ ಯಾವುದೇ ಆಹಾರ ಪದಾರ್ಥಗಳನ್ನು ಬೆಳಗ್ಗೆ ತಿನ್ನುವುದು ನಿಮಗೆ ಶಕ್ತಿಯನ್ನು ನೀಡುತ್ತದೆ. ಯುವಕರು ಮತ್ತು ಹಿರಿಯರಿಗೆ ಇದೊಂದು ಆರೋಗ್ಯಕರವಾದ ರುಚಿಕರ ಡಿಶ್ ಆಗಿದೆ.

ಅದರಲ್ಲೂ ಹೋಟೆಲ್‌ಗಳಲ್ಲಿ ಈರುಳ್ಳಿ ದೋಸೆಗೆಂದೇ ಒಂದಿಷ್ಟು ಅಭಿಮಾನಿಗಳಿರುತ್ತಾರೆ. ಈರುಳ್ಳಿ ದೋಸೆಯನ್ನು ಚಿಕ್ಕವರಿಂದ ಹಿಡಿದು ಹಿರಿಯರು ಸಹ ಇಷ್ಟಪಡುತ್ತಾರೆ. ಏಕೆಂದರೆ ದೋಸೆ ಮೇಲಿರುವ ಈರುಳ್ಳಿ ದೋಸೆ ರುಚಿ ಡಬಲ್ ಮಾಡುತ್ತೇ. ಹೀಗಾಗಿ ಈರುಳ್ಳಿ ದೋಸೆ ಇಷ್ಟೊಂದು ಇಷ್ಟದ ಖಾದ್ಯ.
ಹಾಗಾದ್ರೆ ನಾವಿಂದು ಮನೆಯಲ್ಲೇ ಹೋಟೆಲ್ ರುಚಿತ ಈರುಳ್ಳಿ ದೋಸೆ ಮಾಡುವುದು ಹೇಗೆ? ಈ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಈರುಳ್ಳಿ ದೋಸೆಗೆ ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಈರುಳ್ಳಿ ದೋಸೆ ಮಾಡಲು ಬೇಕಾಗು ಪದಾರ್ಥಗಳು
- ಜೀರಿಗೆ -ಅರ್ಧ ಟೀಸ್ಪೂನ್
- ತುಪ್ಪ - 2 ಟೀಸ್ಫೂನ್
- ಉಪ್ಪು
- ಎಣ್ಣೆ
- ಈರುಳ್ಳಿ - 3
- ಕೊತ್ತಂಬರಿ
- ಹಸಿಮೆಣಸು - 3
- ಅಡುಗೆ ಸೋಡಾ
ಈರುಳ್ಳಿ ದೋಸೆ ಮಾಡುವುದು ಹೇಗೆ?
ಮೊದಲು ಹಿಟ್ಟು ರೆಡಿ ಮಾಡಿಕೊಳ್ಳಿ. ಒಂದು ಕಪ್‌ನಲ್ಲಿ ಅಕ್ಕಿ ತೆಗೆದುಕೊಂಡು ಬೌಲ್‌ಗೆ ಹಾಕಿ. ಅದಕ್ಕೆ ಉದ್ದಿನ ಬೇಳೆ, ಮೆಂತ್ಯೆ, ಕಡಲೆ ಬೇಳೆ, ನೀರಿನಲ್ಲಿ ಹಾಕಿ ನೆನೆಸಿಡಬೇಕು. ಇನ್ನೊಂದು ಕಡ ಅವಲಕ್ಕಿಯನ್ನ ಬೌಲ್‌ನಲ್ಲಿ ನೆನೆಸಿಡಿ. 1 ಗಂಟೆ ನೆನೆಸಿದ ಬಳಿಕ ಇದನ್ನು ರುಬ್ಬಿಕೊಳ್ಳಬೇಕು. ದೋಸೆ ಮಾಡುವ ಹಿಂದಿನ ದಿನವೇ ಹಿಟ್ಟುರುಬ್ಬಿಕೊಳ್ಳಬೇಕು.
ಇನ್ನೊಂದು ಕಡೆ ಕತ್ತರಿಸಿಕೊಂಡ ಈರುಳ್ಳಿ, ಹಸಿಮೆಣಸು, ಕೊತ್ತಂಬರಿಗೆ ಉಪ್ಪು, ಜೀರಿಗೆ ಹಾಕಿ ಚೆನ್ನಾಗಿ ಕಲಸಿ ಮಿಕ್ಸ್ ಮಾಡಿಕೊಳ್ಳಿ. ಇನ್ನೊಂದು ಕಡೆ ದೋಸೆ ಕಾವಲಿ ಬಿಸಿ ಮಾಡಿಕೊಂಡು ಅದಕ್ಕೆ ರುಬ್ಬಿಕೊಂಡಿರುವ ಹಿಟ್ಟನ್ನು ಹಾಕಿ ಅದರ ಮೇಲೆ ಕಲಸಿಕೊಂಡಿರುವ ಈರುಳ್ಳಿ ಮಿಕ್ಸ್ ಅನ್ನು ದೋಸೆ ಮೇಲೆ ಹಾಕಿ.
ಈ ದೋಸೆ ಮೇಲೆ ತುಪ್ಪ ಅಥವಾ ಎಣ್ಣೆ ಹಾಕಿ 3 ನಿಮಿಷ ಕಾಯಿಸಿ ಎರಡು ಕಡೆಗಳಲ್ಲಿ ಬೇಯಿಸಿಕೊಳ್ಳಿ. 3 ನಿಮಿಷ ಬೇಯಿಸಿಕೊಂಡರೆ ಸಾಕು, ನಿಮ್ಮ ಮುಂದೆ ಈರುಳ್ಳಿ ದೋಸೆ ರೆಡಿಯಾಗಿರುತ್ತೆ ಅದನ್ನು ಚಟ್ನಿ ಜೊತೆ ಸವಿಯಬಹುದು. ಬೆಳಗ್ಗೆಯ ತಿಂಡಿಗೆ ಇದು ಅತ್ಯುತ್ತಮ ಖಾದ್ಯವಾಗಬಹುದು. ಈರುಳ್ಳಿ ದೋಸೆಯಲ್ಲಿ ಆರೋಗ್ಯಕರ ಅಂಶ ಸಹ ಅಡಗಿದೆ.
ಈ ದೋಸೆಯನ್ನು ಬಾಯಿ ಚಪ್ಪರಿಸಿ ಸವಿಯುತ್ತೀರಿ. ಇಂತಹ ರುಚಿಯಲ್ಲಿ ಎಷ್ಟು ದೋಸೆ ಬೇಕಾದರು ತಿನ್ನಬಹುದು. ಅದರಲ್ಲೂ ಈರುಳ್ಳಿ ದೋಸೆಯನ್ನು ಡಬಲ್ ರೋಸ್ಟ್ ಮಾಡಿದರೆ ಎಂತವರು ಸಹ ಇದರ ರುಚಿಗೆ ಮಾರು ಹೋಗುತ್ತಾರೆ.
ಇನ್ನು ಹೋಟೆಲ್‌ನಲ್ಲೂ ಇದೇ ವಿಧಾನದಲ್ಲಿ ಈರುಳ್ಳಿ ದೋಸೆ ಮಾಡುತ್ತಾರೆ. ಅಲ್ಲಿಯೂ ದೋಸೆ ಮೃದುವಾಗಿರಲಿ ಎಂದು ಅವಲಕ್ಕಿ ಸೇರಿಸಿ ರುಬ್ಬುತಾರೆ. ಇಲ್ಲಿಯೂ ದಪ್ಪ ವಲಕ್ಕಿಯನ್ನು ನೆನೆಸಿಟ್ಟು ಬಳಿಕ ರುಬ್ಬಿಕೊಂಡರೆ ಅದು ಹಿಟ್ಟು ಮತ್ತಷ್ಟು ಮೃದುವಾಗಲು ಕಾರಣವಾಗುತ್ತದೆ.
ಇನ್ನು ಈ ದೋಸೆ ಸವಿಯಲು ತೆಂಗಿನ ಕಾಯಿ ಚಟ್ನಿ ಸೇರಿದಂತೆ ಪುದಿನ ಚಟ್ನಿ ರೆಸಿಪಿಯನ್ನು ನಾವು ಮೊದಲೇ ತಿಳಿಸಿದ್ದೇವೆ.



Click it and Unblock the Notifications
