Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
5 ನಿಮಿಷದಲ್ಲಿ ಮಾಡಿ ಈರುಳ್ಳಿ ಚಟ್ನಿ..! 2 ಈರುಳ್ಳಿ ಇದ್ದರೆ ಚಟ್ನಿ ರೆಡಿ!
ಬೆಳಗ್ಗೆ ತಿಂಡಿ ಅಥವಾ ಊಟಕ್ಕೆ ಒಂದು ಚಟ್ನಿ ಇದ್ದರೆ ಅದರ ರುಚಿಯೇ ಬೇರೆ ಎಲ್ಲರೂ ಒಂದಲ್ಲಾ ಒಂದು ಚಟ್ನಿ ಇದ್ದರೆ ಊಟ, ತಿಂಡಿಗೆ ಅದ್ಭುತ ಕಾಂಬಿನೇಷನ್ ಆಗುತ್ತೆ. ಆದ್ರೆ ನಾವೆಲ್ಲಾ ಹೆಚ್ಚಿನದಾಗೊ ತಂಗಿನಕಾಯಿ ಚಟ್ನಿ, ಕಡಲೆ ಚಟ್ನಿ, ಹುರಿಗಡಲೆ ಚಟ್ನಿ ಮಾಡಿ ಸವಿಯುತ್ತೇವೆ. ಮಾಡಿದರೆ ಅದ್ಭುತ ರುಚಿಯ ಬಗೆ ಬಗೆಯ ಚಟ್ನಿ ಮಾಡಬಹುದು.
ನಾವು ಹಲವು ತರಕಾರಿ, ಹಣ್ಣು, ಸೊಪ್ಪಿನ ತರಕಾರಿ ಮಾಡಿ ನೋಡಿರುತ್ತೇವೆ. ಇಂದು ಎರಡು ಈರುಳ್ಳಿ ಬಳಸಿ ನೀವೆಂದು ಸವಿದಿರದಂತಹ ರುಚಿಯ ಚಟ್ನಿ ಮಾಡುವ ಕುರಿತು ತಿಳಿದುಕೊಳ್ಳೋಣ. ಒಂದು ಎರಡು ಈರುಳ್ಳಿ ಬಳಸಿಕೊಂಡು ಅತ್ಯಂತ ಸುಲಭವಾಗಿ ಕೆಲವೇ ನಿಮಿಷದಲ್ಲಿ ಈ ಚಟ್ನಿ ಮಾಡಬಹುದು.

ಈ ಚಟ್ನಿ ಇಡ್ಲಿ, ದೋಸೆ, ಚಪಾತಿ, ಅನ್ನ, ಪೂರಿ, ಕಡಬು ಸೇರಿ ಎಲ್ಲಾ ಖಾದ್ಯದೊಂದಿಗೆ ಸವಿಯಬಹುದು. ಹಾಗಾದ್ರೆ ನಾವಿಂದು ಈರುಳ್ಳಿ ಚಟ್ನಿ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಈರುಳ್ಳಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈರುಳ್ಳಿ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಈರುಳ್ಳಿ -4
- ಒಣಮೆಣಸಿನಕಾಯಿ -10
- ಬೆಳ್ಳುಳ್ಳಿ
- ಹುಣಸೆ ಹಣ್ಣು
- ಕಡ್ಲೆಬೇಳೆ
- ಧನಿಯ ಕಾಳು
- ಮೆಂತ್ಯ ಕಾಳು
- ಸಾಸಿವೆ
- ಜೀರಿಗೆ
- ಕರಿಬೇವಿನ ಸೊಪ್ಪು
- ಇಂಗು
- ಉಪ್ಪು
- ಎಣ್ಣೆ
ಈರುಳ್ಳಿ ಚಟ್ನಿ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ಬಳಿಕ ಕಡಲೆ ಬೇಳೆ, ಧನಿಯಾ ಕಾಳು ಅಥವಾ ಕೊತ್ತಂಬರಿ ಕಾಳು, ಮೆಂತ್ಯ ಕಾಳು ಸೇರಿಸಿ 1 ನಿಮಿಷ ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಒಣ ಮೆಣಸು ಕತ್ತರಿಸಿಕೊಂಡು ಹಾಕಿ ಬಿಸಿ ಮಾಡಿ. ನಂತರ ಚಿಕ್ಕದಾಗಿ ಕತ್ತರಿಸಿಕೊಂಡ ಈರುಳ್ಳಿ ಹಾಕಿಕೊಂಡು 4 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಈ ವೇಳೆ ಸ್ವಲ್ಪ ಉಪ್ಪು ಸೇರಿಸಿಕೊಳ್ಳಿ.
ನಂತರದಲ್ಲಿ ಬೆಳ್ಳುಳ್ಳಿ ಹಾಕಿ, ನಿಂಬೆ ಹಣ್ಣು ಗಾತ್ರದ ನಿಂಬೆಹಣ್ಣನ್ನು ಹಾಗೆಯೇ ಹಾಕಿಕೊಂಡು 2 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಒಲೆ ಆಫ್ ಮಾಡಿಕೊಂಡು ಈ ಮಸಾಲೆಗಳು ತಣ್ಣಗಾಗಲು ಬಿಡಬೇಕು. ಈ ಮಸಾಲೆ ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ಗೆ ಹಾಕಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು.
ಮಿಕ್ಸಿಯನ್ನು ಆನ್ ಆಫ್ ಮಾಡುವ ಮೂಲಕ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಗಟ್ಟಿಯಾದರೆ ಸ್ವಲ್ಪ ನೀರು ಸಹ ಹಾಕಿಕೊಂಡು ರುಬ್ಬಿಕೊಳ್ಳಬಹುದು. ಇದನ್ನು ಒಂದು ಬೌಲ್ಗೆ ಹಾಕಿಕೊಳ್ಳಿ, ನಂತರ ಇದಕ್ಕೆ ಒಂದು ಒಗ್ಗರಣೆ ಕೊಡಲು ಸಿದ್ಧತೆ ಮಾಡಿ.
ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ನಂತರ ಸಾಸಿವೆ, ಕರಿವೇವು, ಇಂಗು, ಜೀರಿಗೆ, ಬೆಳ್ಳುಳ್ಳಿ, ಒಣ ಮೆಣಸು ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಇದನ್ನು ಚಟ್ನಿಗೆ ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈರುಳ್ಳಿ ಚಟ್ನಿ ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications