Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
1 ವಾರ ಇಟ್ಟು ಸವಿಯಬಹುದಾದ ಈರುಳ್ಳಿ ಚಟ್ನಿ: ಹುಳಿ ಸಿಹಿಯಂತಹ ರುಚಿ ಬಾಯಲ್ಲಿ ನೀರು ತರಿಸುತ್ತೆ!
ನೀವು ತಿಂಡಿಯೊಂದಿಗೆ ಅಥವಾ ಊಟದೊಂದಿಗೆ ಯಾವುದಾದರು ರುಚಿಕರ ಚಟ್ನಿ ಮಾಡಿ ಸವಿಯಲು ಆಲೋಚಿಸಿರಬಹುದು. ಆದ್ರೆ ಒಂದೊಂದು ದಿನ ಒಂದೊಂದು ರೀತಿ ಚಟ್ನಿ ಮಾಡಲು ಆಗುವುದಿಲ್ಲ, ಇದಕ್ಕಾಗಿ ಒಂದೇ ದಿನ ಮಾಡಿದ ಚಟ್ನಿ ಹಲವು ದಿನಗಳ ಕಾಲ ನಿಮ್ಮ ನಾಲಿಗೆ ರುಚಿ ಹೆಚ್ಚಿಸುವಂತೆ ಇದ್ದರೆ ಬಹಳ ಇಷ್ಟವಾಗುತ್ತೆ. ಹಾಗೆ ಈ ಚಟ್ನಿಯನ್ನು ಮಾಡುವ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.
ಹೌದು ಒಂದು ಬಾರಿ ಮಾಡಿದ ಚಟ್ನಿ ಹಲವು ದಿನಗಳವರೆಗೆ ಇರಬೇಕಾದರೆ ಸುಲಭದ ವಿಧಾನವನ್ನು ಫಾಲೋ ಮಾಡಿ. ಅದ್ರಲ್ಲೂ ನಾವಿಂದು ಈರುಳ್ಳಿ ಬಳಸಿಕೊಂಡು ಮಾಡುವ ಈ ಚಟ್ನಿ ಒಂದು ವಾರಕ್ಕೂ ಅಧಿಕ ದಿನ ಇಟ್ಟು ಸವಿಯಬಹುದು. ಈ ಚಟ್ನಿ ಎಲ್ಲಾ ತಿಂಡಿಯೊಂದಿಗೆ ಹಾಗೆ ಊಟದೊಂದಿಗೆ ಸವಿಯಬಹುದು.

ಈ ಈರುಳ್ಳಿ ಚಟ್ನಿ ಬಹಳ ರುಚಿ ನೀಡಲಿದೆ. ಸಿಹಿ ಹಾಗೂ ಹುಳಿಯ ಮಿಶ್ರಣದೊಂದಿಗೆ ಸವಿಯಲು ಬಹಳ ರುಚಿ ನೀಡಲಿದೆ. ಹಾಗೆ ಇದು ಎಲ್ಲರ ಬಾಯಲ್ಲೂ ನೀರು ತರಿಸಲಿದೆ. ಈರುಳ್ಳಿ ಬಳಸಿ ಮಾಡುವ ಈ ಚಟ್ನಿ ಹಲವು ದಿನಗಳ ಕಾಲ ಇಟ್ಟು ಸವಿಯಬಹುದು. ಹಾಗೆ ಇದನ್ನು ಮಾಡೋದು ಕೂಡ ಬಹಳ ಸುಲಭ.
ಹಾಗಾದ್ರೆ ಸುಲಭವಾಗಿ ಈ ಈರುಳ್ಳಿ ಚಟ್ನಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಈರುಳ್ಳಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಈರುಳ್ಳಿ
- ಸಾಸಿವೆ
- ಇಂಗು
- ಮೆಂತ್ಯ
- ಜೀರಿಗೆ
- ಖಾರದ ಪುಡಿ
- ಎಣ್ಣೆ
- ಹುಣಸೆ ಹುಳಿ
- ಕರಿಬೇವು
ಈರುಳ್ಳಿ ಚಟ್ನಿ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ 1 ಸ್ಪೂನ್ ಮೆಂತ್ಯ ಹಾಗೂ ಸಾಸಿವೆ ಹಾಕಿಕೊಂಡು ಹುರಿದುಕೊಳ್ಳಬೇಕು. 1 ನಿಮಿಷ ಬಿಟ್ಟು ಅದನ್ನು ತೆಗೆದು ಬೌಲ್ಗೆ ಹಾಕಿ ತಣ್ಣಗಾಗಲು ಬಿಡಿ. ಈಗ ಅದೇ ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಅರ್ಧ ಕೆ.ಜಿ ಹೆಚ್ಚಿದ ಈರುಳ್ಳಿ ಹಾಕಿ ಹುರಿದುಕೊಳ್ಳಬೇಕು.
2 ನಿಮಿಷ ಹುರಿದು ಬಳಿಕ ಒಲೆ ಆಫ್ ಮಾಡಿ ಇದನ್ನು ಕೂಡ ತಣ್ಣಗಾಗಲು ಬಿಡಿ. ಈಗ ತಣ್ಣಗಾದ ವಸ್ತುಗಳನ್ನು ತೆಗೆದುಕೊಂಡು ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ಮೆಂತ್ಯ, ಸಾಸಿವೆ ಹಾಗೆ ಈರುಳ್ಳಿ ಸಹ ಹಾಕಿಕೊಂಡು ರುಬ್ಬಿಕೊಳ್ಳಬೇಕು. ತರಿ ತರಿಯಾಗಿ ರುಬ್ಬಿದ ಬಳಿಕ ಇದನ್ನು ತೆಗೆದು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಮತ್ತೆ ಅದೇ ಬಾಣಲೆಗೆ ಹೆಚ್ಚು ಎಣ್ಣೆ ಹಾಕಿಕೊಳ್ಳಿ. 10 ಸ್ಪೂನ್ ಎಣ್ಣೆ ಹಾಕಿ. ಬಳಿಕ ಇದಕ್ಕೆ ಸಾಸಿವೆ, ಇಂಗು ಹಾಕಿ ಹೆಚ್ಚಿಕೊಂಡು 1 ಈರುಳ್ಳಿ, ಕರಿಬೇವು, ಹಾಕಿ ಹುರಿದುಕೊಳ್ಳಬೇಕು. 2 ನಿಮಿಷ ಬಿಟ್ಟು ಅನಂತರ ಹುಣಸೆ ಹುಳಿ ನೀರಿನಲ್ಲಿ ನೆನೆಸಿಟ್ಟು ಇದಕ್ಕೆ ಹಾಕಿ ಕುದಿಬರಲು ಬಿಡಬೇಕು. ಚೆನ್ನಾಗಿ ಕುದಿಬರಲು ಆರಂಭಿಸಿದಾಗ ಇದಕ್ಕೆ ಮಿಕ್ಸಿಯಲ್ಲಿ ರುಬ್ಬಿಕೊಂಡಿದ್ದ ಪೇಸ್ಟ್ ಅನ್ನು ಹಾಕಿಕೊಳ್ಳಿ.
ಈರುಳ್ಳಿ ಪೇಸ್ಟ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದು ನೀರು ಇಂಗಲು ಬಿಡಬೇಕು. ನಂತರ ಇದಕ್ಕೆ ಖಾರದ ಪುಡಿ, ಅರಶಿಣ, ಉಪ್ಪು ಸಹ ಹಾಕಿ ಮಿಕ್ಸ್ ಮಾಡಿ. ನಂತರ ಸಣ್ಣ ಉರಿಯಲ್ಲಿ ಈ ಚಟ್ನಿಯು ಕುದಿಯಲು ಬಿಡಿ. ಆಗ ಮೆಂತ್ಯ ಹಾಗೂ ಸಾಸಿವೆ ಪುಡಿಯನ್ನು ಇದಕ್ಕೆ ಹಾಕಿಕೊಳ್ಳಿ. ಹಾಗೆ ಸಣ್ಣ ಉರಿಯಲ್ಲಿ ಇದನ್ನು ಕಾಯಿಸಿಕೊಳ್ಳಿ. ಇಷ್ಟಾದರೆ ನಿಮಗೆ ಸವಿಯಲು ಈರುಳ್ಳಿ ಚಟ್ನಿ ಸಿದ್ದವಾಗುತ್ತೆ.



Click it and Unblock the Notifications
