Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಅತೀ ಸುಲಭದ ಪುಡಿ ಒಗ್ಗರಣೆ ರೈಸ್ ಮಾಡಿ..! ಹೇಗೆ ಮಾಡಬೇಕೆಂಬ ವಿಧಾನ ಇಲ್ಲಿದೆ..!
ನೀವು ಬೆಳಗ್ಗೆ ಅನ್ನದಿಂದ ಮಾಡುವಂತಹ ಹಲವು ಬಗೆಯ ಟೇಸ್ಟಿ ಖಾದ್ಯ ಮಾಡಿರುತ್ತೀರಿ. ರಸ್‌ನಿಂದ ಮಾಡುವ ಒಂದೊಂದು ಐಟಂಗಳು ಕೂಡ ಅದಭುತವಾಗಿರುತ್ತೆ. ಪಲಾವ್, ಚಿತ್ರಾನ್ನ, ರೈಸ್ ಬಾತ್, ಪುಳಿಯೋಗರೆ ಹೀಗೆ ಒಂದಲ್ಲಾ ಒಂದು ಖಾದ್ಯ ಸವಿಯುವುದು ನೋಡಬಹುದು. ಹಾಗೆ ನಾವು ರೈಸ್‌ನಿಂದ ಆರಾಮವಾಗಿ ಕೆಲವೊಂದು ವಿಭಿನ್ನ ಖಾದ್ಯ ಕೂಡ ಮಾಡಬಹುದು. ಅದರಲ್ಲೂ ಹೋಟೆಲ್‌ನಲ್ಲಿ, ರೆಸ್ಟೋರೆಂಟ್ ಎಲ್ಲಿಯೂ ಸವಿಯಲು ಸಿಗದೆ ಇರುವಂತಹ ಕೆಲವೊಂದು ಖಾದ್ಯಗಳನ್ನು ಮನೆಯಲ್ಲಿ ಮಾಡಿ ಸವಿಯಬಹುದು.
ಹಾಗೆ ನಾವಿಂದು ಮನೆಯಲ್ಲಿ ಮಾಡಬಹುದಾದ ಅದ್ಭುತ ರುಚಿಯ ಪುಡಿ ಒಗ್ಗರಣೆಯ ಅನ್ನ ಮಾಡುವ ಕುರಿತು ನಿಮಗೆ ತಿಳಿದಿದ್ಯಾ? ಈ ರೀತಿಯ ಒಗ್ಗರಣೆ ಅನ್ನ ಮಾಡಿದರೆ ಬೆಳಗ್ಗೆ ಟೀಫ್‌ಗೆ ಹಾಗೆ ಬಾಕ್ಸ್‌ಗೆ, ಊಟದ ಜೊತೆಗೂ ಕೂಡ ಸವಿಯಬಹುದು. ಈ ಒಗ್ಗರಣೆ ಅನ್ನವು ಯಾವ ಹೋಟೆಲ್‌ನಲ್ಲೂ ನಿಮಗೆ ಸವಿಯಲು ಸಿಗುವುದಿಲ್ಲ.

ಹಾಗೆ ಈ ಒಗ್ಗರಣೆ ಅನ್ನವು ಪುಳಿಯೋಗರೆ ರೀತಿಯಲ್ಲಿ ಕಂಡರೂ ಬಹಳ ರುಚಿ ನೀಡಲಿದೆ. ಹಾಗೆ ಮಾಡೋದು ಕೂಡ ತುಂಬಾನೆ ಸುಲಭ. ಹಾಗಾದ್ರೆ ನಾವಿಂದು ಈ ಪುಡಿ ಒಗ್ಗರಣೆ ರೈಸ್ ಮಾಡೋದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪುಡಿ ಒಗ್ಗರಣೆ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅನ್ನ
- ಜೀರಿಗೆ
- ಧನಿಯಾ ಕಾಳು
- ಉದ್ದಿನ ಬೇಳೆ
- ಕಡಲೆ ಬೀಜ
- ಕಡಲೆ ಬೇಳೆ
- ಒಣ ಮೆಣಸು
- ಕರಿಬೇವು
- ಉಪ್ಪು
- ಎಣ್ಣೆ
- ಗೋಡಂಬಿ
ಪುಡಿ ಒಗ್ಗರಣೆ ರೈಸ್ ಮಾಡುವ ವಿಧಾನವೇನು?
ಮೊದಲು ಈ ರೈಸ್ ಮಾಡಲು ಹುಡಿ ಹುಡಿಯಾದ ರೈಸ್ ರೆಡಿ ಮಾಡಿಕೊಟ್ಟುಕೊಳ್ಳಿ. ಹುಡಿ ಅನ್ನ ಮಾಡುವುದಾದರೆ ನೀವು ನಿತ್ಯ ಅನ್ನ ಮಾಡಲು ಬಳಸುವ ನಿಗದಿತ ನೀರಿನ ಪ್ರಮಾಣಕ್ಕಿಂತ ಕಡಿಮೆ ಇಟ್ಟು ಕೊಂಡು ಮಾಡಿಕೊಳ್ಳಿ. ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟುಕೊಂಡು ಅದಕ್ಕೆ ಕಡಲೆ ಬೀಜ, ಕಡಲೆ ಬೇಳೆ, ಉದ್ದಿನ ಬೇಳೆ, ಧನಿಯಾ ಕಾಳು, ಜೀರಿಗೆ, ಕಾಳು ಮೆಣಸು, ಒಣ ಮೆಣಸು, ಕರಿಬೇವು ಹಾಕಿ 5ರಿಂದ 6 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ನಂತರ ಇದನ್ನು ತಣ್ಣಗಾಗಲು ಬಿಟ್ಟು ನಂತರ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ರುಬ್ಬುವಾಗ ಉಪ್ಪು ಹಾಕಿ ಪುಡಿ ಪುಡಿಯಾಗಿ ಹದವಾಗಿ ರುಬ್ಬಿಕೊಳ್ಳಿ. ಈ ಪುಡಿಯನ್ನು ತೆಗೆದು ಬೌಲ್‌ನಲ್ಲಿ ಹಾಕಿಡಿ. ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಇದು ಬಿಸಿಯಾದಾಗ ಅದಕ್ಕೆ ಸಾಸಿವೆ, ಕಡಲೆ ಬೀಜ ಹಾಕಿ ಬಿಸಿ ಮಾಡಿ.
ಈಗ 10 ಗೋಡಂಬಿ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಮತ್ತೆ ಅರ್ಧ ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಒಣ ಮೆಣಸು, ಕರಿವೇವು ಹಾಕಿ 1 ನಿಮಿಷ ಫ್ರೈ ಮಾಡಿ. ನಂತರ ಒಲೆ ಆಫ್ ಮಾಡಿಕೊಳ್ಳಿ. ಈಗ ಈ ಒಗ್ಗರಣೆಗೆ ಮೊದಲು ಮಾಡಿಟ್ಟಿರುವ ಅನ್ನವನ್ನು ಹಾಕಿಕೊಂಡು ಒಂದು ಸುತ್ತು ಮಿಕ್ಸ್ ಮಾಡಿ. ಈಗ ಮಿಕ್ಸಿಯಲ್ಲಿ ರುಬ್ಬಿದ್ದ ಮಸಾಲೆ ಪುಡಿಯನ್ನು ಕೂಡ ಹಾಕಿಕೊಂಡು ಮಿಕ್ಸ್ ಮಾಡಿ.
ಎಲ್ಲಾ ಮಸಾಲೆ ಚೆನ್ನಾಗಿ ಹಿಡಿಯುವಂತೆ ಮಿಕ್ಸ್ ಮಾಡಿಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ಪುಡಿ ಒಗ್ಗರಣೆ ಅನ್ನ ರೆಡಿಯಾಗುತ್ತದೆ. ಇದರ ರುಚಿಗೆ ನಿಮ್ಮ ಬಾಯಲ್ಲಿ ನೀರು ತರಿಸುತ್ತದೆ. ಈ ರೀತಿಯ ಮಸಾಲೆ ಅನ್ನವನ್ನು ನೀವು ಕೂಡ ಮನೆಯಲ್ಲಿ ಬ್ರೇಕ್ ಫಾಸ್ಟ್‌ಗೆ ಸವಿದು ನೋಡಿ.



Click it and Unblock the Notifications
