Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ರುಚಿ ರುಚಿಯ ಒಬ್ಬಟ್ಟು ಸಾರು ಮಾಡೋದು ಹೇಗೆ? ಇಲ್ಲಿದೆ ಸುಲಭದ ರೆಸಿಪಿ
ಬೇಳೆ ಸಾರು, ಕಟ್ಟಿನ ಸಾರು, ಮೆಣಸಿನ ಸಾರು, ಕೂಟು, ಈರುಳ್ಳಿ ಸಾಂಬಾರು, ಸೊಪ್ಪಿನ ಸಾರು ಮುಂತಾದ ವಿವಿಧ ಬಗೆಯ ಸಾರು, ಸಾಂಬಾರು ಮಾಡಿ ನಿಮಗೆ ತಿಳಿದಿರುತ್ತದೆ. ಅನ್ನದ ಜೊತೆಗೆ ನೀವು ಈ ರೀತಿಯ ಬಗೆ ಬಗೆಯ ಸಾರು ಮಾಡಿ ಸವಿದಿರುತ್ತೀರಿ. ಆದ್ರೆ ಒಬ್ಬಟ್ಟು ಸಾರು ಅಥವಾ ಹೋಳಿಗೆ ಸಾರು ಎಂದಾದ್ರು ಮಾಡಿ ಅದರ ಸವಿ ನೋಡಿದ್ದೀರಾ.?
ಈ ಸಾರು ಮಾಡಿದರೆ ಅನ್ನಕ್ಕೆ ಬಹಳ ರುಚಿ ನೀಡಲಿದೆ. ಹಾಗೆ ಚಪಾತಿ, ಮುದ್ದೆಗೂ ಇದು ಬಹಳ ರುಚಿಕರ ಸಾರು. ಹಾಗಾದ್ರೆ ನಾವಿಂದು ಈ ಒಬ್ಬಟ್ಟು ಸಾರು ಅಥವಾ ಹೋಳಿಗೆ ಸಾರು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಒಬ್ಬಟ್ಟು ಸಾರು ಅಥವಾ ಹೋಳಿಗೆ ಸಾರು ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯುತ್ತದೆ. ಮಾಡುವಾಗ ಯಾವೆಲ್ಲಾ ಸೂಚನೆ ಪಾಲಿಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಒಬ್ಬಟ್ಟು ಸಾರು ಅಥವಾ ಹೋಳಿಗೆ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ಬೇಳೆ ಬೇಯಿಸಿ ಬಸಿದ ನೀರು
- ಜೀರಿಗೆ
- ಮೆಂತ್ಯ
- ಕಾಳುಮೆಣಸು
- ಬೆಳ್ಳುಳ್ಳಿ
- ಒಣಮೆಣಸಿನಕಾಯಿ
- ಕರಿಬೇವಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ತೆಂಗಿನಕಾಯಿ ತುರಿ
- ಬೇಳೆ ಹೂರಣ
- ಹುಣಸೆ ಹಣ್ಣು
- ಸಾಸಿವೆ
- ಇಂಗು
- ಅರಿಶಿನದ ಪುಡಿ
- ಎಣ್ಣೆ
- ಉಪ್ಪು
ಒಬ್ಬಟ್ಟು ಸಾರು ಅಥವಾ ಹೋಳಿಗೆ ಸಾರು ಮಾಡುವ ವಿಧಾನ ಇಲ್ಲಿದೆ
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಜೀರಿಗೆ, ಕಾಳು ಮೆಣಸು, ಮೆಂತ್ಯ ಕಾಳು ಸಹ ಸ್ವಲ್ಪ ಹುರಿದುಕೊಳ್ಳಬೇಕು. 2 ನಿಮಿಷ ಹುರಿದುಕೊಂಡರೆ ಸಾಕು. ಈಗ ಈ ಪದಾರ್ಥಗಳನ್ನು ತೆಗೆದು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಒಲೆ ಮೇಲೆ ಪಾತ್ರೆ ಇಟ್ಟು ಇದಕ್ಕೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಇಂಗು, ಬೆಳ್ಳುಳ್ಳಿ, ಒಣ ಮೆಣಸು, ಕರಿಬೇವಿನ ಸೊಪ್ಪು ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ.
ಈಗ ಬೇಳೆ ನೀರನ್ನು ತೆಗೆದುಕೊಳ್ಳಿ. ( ಮೊದಲೇ ಕುಕ್ಕರ್‌ನಲ್ಲಿ ಬೇಳೆ ಹಾಕಿಕೊಂಡು ಅದನ್ನು ಬೇಯಿಸಿದ ಬಳಿಕ ಉಳಿಯುವ ನೀರು) ಈ ನೀರನ್ನು ಒಲೆ ಮೇಲೆ ಇಟ್ಟಿರುವ ಪಾತ್ರೆಗೆ ಹಾಕಿಕೊಳ್ಳಿ. ಬಳಿಕ ಇದಕ್ಕೆ ಹುಣಸೆ ಹುಳಿಯನ್ನು ಹಾಕಿ, ಅರಶಿನ ಪುಡಿ, ಒಬ್ಬಟ್ಟಿನ ಹೂರ್ಣ, ತೆಂಗಿನ ತುರಿ, ಹುರಿದು ಪುಡಿ ಮಾಡಿಕೊಂಡಿದ್ದ ಮಸಾಲೆ ಹಾಕಿ ಕಲಸಿಕೊಳ್ಳಿ.
ನಂತರ ಉಪ್ಪು, ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಮಿಕ್ಸ ಮಾಡಿಕೊಳ್ಳಿ. ನಂತರ 10 ನಿಮಿಷಗಳ ಕಾಲ ಕುದಿಯಲು ಬಿಡಿ. ಚೆನ್ನಾಗಿ ಕುದಿಯುತ್ತಿರುವ ನಡುವೆ ಆಗಾಗ ಮಿಕ್ಸ್ ಮಾಡುತ್ತಾ ಇರಿ. ಇಷ್ಟಾದರೆ ನಿಮ್ಮ ಮುಂದೆ ಈ ಒಬ್ಬಟ್ಟಿನ ಸಾರು ರೆಡಿಯಾಗುತ್ತದೆ. ನೀವು ಹೋಳಿಗೆ ಮಾಡುವಾಗ ಈ ಸಾರು ಮಾಡುವುದು ಸುಲಭ ಏಕೆಂದರೆ ಹೂರ್ಣ ಮಾಡಿಕೊಂಡಿರುವುದು ಸಿಗುತ್ತದೆ. ಇದಕ್ಕೆಂದು ಬೇಕಾದರೆ ನೀವು ಸ್ವಲ್ಪವೇ ಸ್ವಲ್ಪ ಬೇಳೆ, ಬೆಲ್ಲದ ಹೂರ್ಣ ಮಾಡಿಕೊಳ್ಳಬಹುದು.
ನೀವು ಸಹ ಒಮ್ಮೆ ಮನೆಯಲ್ಲ ಇದನ್ನು ಟ್ರೈ ಮಾಡಿ ನೋಡಿ. ಇದರ ರುಚಿಗೆ ಎಲ್ಲಾ ಖಾದ್ಯ ಸವಿಯಬಹುದು.



Click it and Unblock the Notifications
