Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ರೋಗನಿರೋಧಕ ಶಕ್ತಿ ಹೆಚ್ಚಿಸುವ ನುಗ್ಗೆ ಸೊಪ್ಪಿನ ಸಾರು ಮಾಡಿ..! ಇಲ್ಲಿದೆ ರೆಸಿಪಿ
ನಿಮ್ಮ ಮನೆಯಲ್ಲಿ ಯಾರಾದರು ಯಾವಾಗಲು ಸಣ್ಣ ಪುಟ್ಟ ಕಾಯಿಲೆಗೆ ಬೀಳುವುದು ನಡೆಯುತ್ತಿದ್ದರೆ ರೋಗ ನಿರೋಧಕ ಶಕ್ತಿ ಕಡಿಮೆ ಆಗಿದೆ ಎಂದರ್ಥ. ಶೀತ, ಕೆಮ್ಮು, ಗಂಟಲು ನೋವು ಸೇರಿ ಕೆಲವೊಂದು ಸಣ್ಣ ಪುಟ್ಟ ಕಾಯಿಲೆಗಳಿಗೆ ನಮ್ಮ ದೇಹವೇ ವೈದ್ಯರಂತೆ ಚಿಕಿತ್ಸೆ ನೀಡುತ್ತದೆ. ಇದು ರೋಗ ನಿರೋಧಕ ಶಕ್ತಿಯ ಮೂಲಕ ದೇಹಕ್ಕೆ ರಕ್ಷಣೆ ನೀಡಲಿದೆ. ಆದ್ರೆ ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ನೀವು ಮಾತ್ರೆ, ವೈದ್ಯರ ಭೇಟಿಯಾಗದೆ ಈ ಸಮಸ್ಯೆ ದೂರಾಗುವುದಿಲ್ಲ.
ಇನ್ನು ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕಾದರೆ ಪೋಷಕಾಂಶ ಭರಿತ ಆಹಾರ ಸೇವನೆ ಮಾಡಬೇಕಾಗುತ್ತದೆ. ಅದರಲ್ಲೂ ಈ ನುಗ್ಗೆಸೊಪ್ಪಿಯಲ್ಲಿರುವ ಕಬ್ಬಿಣದ ಅಂಶ ನಿಮ್ಮ ದೇಹಕ್ಕೆ ಅತ್ಯಂತ ಮುಖ್ಯವಾಗುತ್ತದೆ. ಈ ಕಬ್ಬಿಣಾಂಶ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲಿದೆ. ಹೀಗಾಗಿ ಹಿರಿಯರು ಯಾವಾಗಲು ಸೊಪ್ಪು ತರಕಾರಿ ಹೆಚ್ಚು ಸೇವಿಸಬೇಕು ಎನ್ನುತ್ತಿರುತ್ತಾರೆ.

ಹಾಗಾದ್ರೆ ನಾವಿಂದು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಅಂಶಗಳಲ್ಲಿ ಒಂದಾಗಿರುವ ಕಬ್ಬಿಣಾಂಶ ಭರಿತ ಈ ನುಗ್ಗೆಕಾಯಿಯ ಸಾರು ಮಾಡಿದ್ರೆ ಆರೋಗ್ಯಕ್ಕೂ ಉತ್ತಮ ಹಾಗೆ ರುಚಿಯು ದುಪ್ಪಟ್ಟು, ಸಾರು, ಚಪಾತಿ ಸೇರಿ ಬಹುತೇಕ ಎಲ್ಲಾ ಖಾದ್ಯದ ಜೊತೆಗೂ ನೀವು ಇದನ್ನು ಸವಿಯಬಹುದು. ಪಾಲಕ್ ಸೊಪ್ಪಿ ಚಟ್ನಿ, ಗ್ರೇವಿ ಸವಿದವರಿಗಂತು ಈ ನುಗ್ಗೆ ಸೊಪ್ಪಿನ ಸಾರು ಸಖತ್ ರುಚಿ ನೀಡಿಲಿದೆ.
ಹಾಗಾದ್ರೆ ನಾವಿಂದು ಈ ನುಗ್ಗೆ ಸೊಪ್ಪಿನ ಸಾರು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ನುಗ್ಗೆ ಸೊಪ್ಪಿನ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ನುಗ್ಗೆ ಸೊಪ್ಪಿನ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ನುಗ್ಗೆ ಸೊಪ್ಪು
- ಸಾಸಿವೆ
- ಬೇಳೆ
- ಒಣ ಮೆಣಸು
- ಕರಿಬೇವು
- ಇಂಗು
- ಈರುಳ್ಳಿ
- ಟೊಮೆಟೋ
- ಸಾಂಬಾರ್ ಪುಡಿ
- ಹುಣಸೆ ಹುಳಿ
- ತೆಂಗಿನ ತುರಿ
ನುಗ್ಗೆ ಸೊಪ್ಪಿನ ಸಾರು ಮಾಡುವುದು ಹೇಗೆ?
ಮೊದಲು ಒಂದು ಕುಕ್ಕರ್‌ನಲ್ಲಿ ಒಂದು ಲೋಟದಷ್ಟು ಬೇಳೆ ಹಾಕಿ ಅದಕ್ಕೆ ನೀರು, ಮೂರು ಟೊಮೆಟೋ ಹಾಕಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಬೇಕು. 2 ಸೀಟಿ ಹೊಡೆದರೆ ಸಾಕಾಗುತ್ತದೆ. ನಂತರ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಹಾಕಿ ಎಣ್ಣೆ ಕಾದ ಬಳಿಕ ಅದಕ್ಕೆ ಸಾಸಿವೆ, ಎರಡು ಮೆಣಸು, ಕರಿಬೇವು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ನಂತರ ಚಿಟಿಕೆ ಇಂಗು, ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಈರುಳ್ಳಿ ಫ್ರೈ ಆದ ಬಳಿಕ ಸೀಟಿ ಹೊಡೆಸಿಟ್ಟುಕೊಂಡಿದ್ದ ಟೊಮೆಟೋ, ಬೇಳೆಯನ್ನು ಹಾಕಿಕೊಂಡು ಸ್ವಲ್ಪ ಪುಡಿ ಮಾಡಿಕೊಳ್ಳಬೇಕು. ಟೊಮೆಟೋ ಸ್ವಲ್ಪ ಪುಡಿಯಾಗುವಂತೆ ತಿತುಗಿಸಿಕೊಳ್ಳುತ್ತಾ ಒಂದು ಕುದಿ ಬರಲು ಬಿಡಬೇಕು. ನಂತರ ಇದಕ್ಕೆ ಸಾಂಬಾರ್ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ನಂತರ ಸಾರಿಗೆ ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ. ನಂತರ ತೊಳೆದುಕೊಂಡಿರುವ ನುಗ್ಗೆ ಸೊಪ್ಪನ್ನು ಹಾಕಿಕೊಂಡು ಕಲಸಿಕೊಳ್ಳಿ. ಕುದಿಬರಲು ಬಿಡಬೇಕು, ನಂತರ ಇದಕ್ಕೆ ಹುಣಸೆ ಹುಳಿ ನೀರು, ಹಸಿ ತೆಂಗಿನ ತುರಿ ಹಾಕಿಕೊಂಡು ಕುದಿಬರಲು ಬಿಡಿ. 5 ನಿಮಿಷ ಕುದಿ ಬಂದರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ನುಗ್ಗೆ ಸೊಪ್ಪಿನ ಸಾರು ರೆಡಿಯಾಗುತ್ತದೆ. ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು. ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
