Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಸುಲಭವಾಗಿ ಮಾಡಿ ನೋಡಿ ನುಗ್ಗೇಕಾಯಿ ಬಿರಿಯಾನಿ..! ಹೇಗೆ ಮಾಡೋದು..?
ನೀವೆನಾದ್ರು ಸಸ್ಯಹಾರಿಗಳಾಗಿದ್ದರೆ ತರಕಾರಿಗಳ ಸೇವಿಸೋದು ನಿಮಗೆ ಕಾಮನ್, ಆದ್ರೆ ವೆಜ್ ಬಿರಿಯಾನಿ ಸಹ ನಿಮ್ಮ ಫೇವರಿಟ್ ಫುಡ್ ಆಗಿರಬಹುದು. ಆದರೆ ಅದನ್ನು ನೀವು ನಿತ್ಯ ಮಾಡಿ ಸವಿಯಲು ಸಾಧ್ಯವಿಲ್ಲ. ಹೀಗಾಗಿ ನೀವೇನಾದರು ವಿಶೇಷ ರುಚಿಯ ಬಿರಿಯಾನಿ ಮಾಡಲು ಯೋಚಿಸಿದ್ದರೆ ಈ ನುಗ್ಗೇಕಾಯಿ ಬಿರಿಯಾನಿ ಮಾಡಿ ನೋಡಿ.
ಹೌದು ಹೆಸರೇ ಹೇಳುವಂತೆ ಇಲ್ಲಿ ನುಗ್ಗೇಕಾಯಿಯನ್ನು ಬಳಸಿಕೊಂಡು ಬಿರಿಯಾನಿ ಮಾಡಲಾಗುತ್ತದೆ. ಚಿಕನ್, ಮಟನ್, ಮೊಟ್ಟಯ ಬದಲಿಗೆ ನುಗ್ಗೇಕಾಯಿಯನ್ನು ಹಾಕಿ ಈ ಬಿರಿಯಾನಿ ಮಾಡಲಾಗುತ್ತದೆ. ಆದರೆ ರುಚಿಯಲ್ಲಿ ಮಾತ್ರ ಯಾವ ಬಿರಿಯಾನಿಗಿಂತ ಇದೇನು ಕಡಿಮೆ ಇಲ್ಲ. ಎಲ್ಲರಿಗೂ ಇಷ್ಟವಾಗುವಂತಹ, ಆರೋಗ್ಯಕ್ಕೂ ಅತ್ಯಂತ ಉತ್ತಮ ಶೈಲಿಯ ಬಿರಿಯಾನಿ ಇದಾಗಿದೆ.

ನೀವು ವೆಜ್ ಬಿರಿಯಾನಿಯಲ್ಲಿ ಮಶ್ರೂಮ್ ಹಾಕಿ ಅಥವಾ ಆಲೂಗಡ್ಡೆ, ಸೋಯಾಬಿನ್ ಬಳಸಿಕೊಂಡು ಬಿರಿಯಾನಿ ಮಾಡಿ ಸವಿದಿರಬಹುದು. ಅದೇ ವಿಧಾನದಲ್ಲಿಯೇ ಈ ನುಗ್ಗೇಕಾಯಿ ಬಿರಿಯಾನಿಯನ್ನು ಸಹ ಮಾಡಬಹುದು. ಹಾಗಾದರೆ ನಾವಿಂದು ಈ ನುಗ್ಗೇಕಾಯಿ ಬಿರಿಯಾನಿ ಮಾಡಲು ಯಾವೆಲ್ಲಾ ಪದಾರ್ಥಗಳು, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕಾಗುತ್ತದೆ? ಬಿರಿಯಾನಿ ಮಾಡುವಾಗ ಯಾವೆಲ್ಲಾ ಮುನ್ನೆಚ್ಚರಿಕೆ ಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ನುಗ್ಗೇಕಾಯಿ ಬಿರಿಯಾನಿ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ - 400 ಗ್ರಾಂ
- ನುಗ್ಗೆಕಾಯಿ ಚಿಕ್ಕದಾದರೆ 3 ದೊಡ್ಡದಿದ್ದರೆ 2
- ದಾಲ್ಚಿನ್ನಿ - 2
- ಏಲಕ್ಕಿ-4
- ಲವಂಗ-8
- ಮರಾಠಿ ಮೊಗ್ಗು
- ಚಕ್ರ ಮೊಗ್ಗುಗಳು- 4
- ಈರುಳ್ಳಿ-4
- ಟೊಮೆಟೊ-3
- ಪುದೀನ ಎಲೆಗಳು - 1 tbs
- ಕೊತ್ತಂಬರಿ ಸೊಪ್ಪು - 1 tbs
- ಹಸಿರು ಮೆಣಸಿನಕಾಯಿ - 6
- ಹಸಿರು ಬಟಾಣಿ - 1/2 ಕಪ್
- ಮೊಸರು
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 1/2 tbs
- ಬಿರಿಯಾನಿ ಪುಡಿ - 1/2 ಟೀಸ್ಪೂನ್
- ಕಸೂರಿ ಮೇಥಿ - 1 tbs
- ಖಾರದ ಪುಡಿ - 1 tbs
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ನುಗ್ಗೇಕಾಯಿ ಬಿರಿಯಾನಿ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಅದಕ್ಕೆ ಚಕ್ಕೆ, ಲವಂಗ, ಮರಾಠಿ ಮೊಗ್ಗು, ಚಕ್ರಮೊಗ್ಗು, ಈರುಳ್ಳಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈರುಳ್ಳಿಯನ್ನು 3 ನಿಮಿಷ ಫ್ರೈ ಮಾಡಿಕೊಳ್ಳಿ. ಇದಕ್ಕೆ ಪುದೀನ, ಕೊತ್ತಂಬರಿ, ಕಸೂರಿ ಮೇಥಿ ಹಾಕಿಕೊಳ್ಳಿ.
ಬಳಿಕ ಇದಕ್ಕೆ ಹಸಿ ಮೆಣಸಿನಕಾಯಿ, ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ ಕೈಯಾಡಿಸಿ. ಬಳಿಕ ಟೊಮೆಟೊ, ಬಟಾಣಿ ಕಾಳು ಹಾಗೂ ಕತ್ತರಿಸಿದ ನುಗ್ಗೇಕಾಯಿ, ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. 3ರಿಂದ 4 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಇದೇ ವೇಳೆ ಉಪ್ಪು ಹಾಕಿಕೊಳ್ಳಿ.
ಬಳಿಕ ಬಿರಿಯಾನಿ ಪೌಡರ್, ಹಾಕಿ ಚೆನ್ನಾಗಿ ಫ್ರೈ ಮಾಡಿ. ಒಟ್ಟು 5 ನಿಮಿಷ ಫ್ರೈ ಆದರೆ ಸಾಕು. ಇದು ಗೊಜ್ಜಿನ ರೀತಿಯ ರೂಪಕ್ಕೆ ಬರಬೇಕು. ಇದಾದ ಬಳಿಕ ಸರಿಯಾದ ಗ್ಲಾಸ್ನಲ್ಲಿ ನೀರು ತೆಗೆದುಕೊಂಡು ಹಾಕಿಕೊಳ್ಳಿ. ಒಂದು ಕಪ್ ನೀರಿಗೆ 2 ಕಪ್ ನೀರಿನ ಅಳತೆಯಂತೆ ನೀರು ಹಾಕಿಕೊಳ್ಳಿ.
ಈ ನೀರು ಕುದಿಯುವಂತೆ ಬಿಟ್ಟು ಅದಕ್ಕೆ ನೆನೆಸಿಟ್ಟುಕೊಂಡ ಅಕ್ಕಿಯನ್ನು ಅದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಪಾತ್ರೆಯನ್ನು ಮುಚ್ಚಿಕೊಳ್ಳಿ. 5 ನಿಮಿಷದ ಬಳಿಕ ಮುಚ್ಚಳ ತೆಗೆದು ಮಿಕ್ಸ್ ಮಾಡಿಕೊಂಡು, ಬಳಿಕ 15 ನಿಮಿಷ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ನುಗ್ಗೇಕಾಯಿ ಬಿರಿಯಾನಿ ರೆಡಿಯಾಗಿರುತ್ತದೆ, ಇದನ್ನೇ ಕುಕ್ಕರ್ನಲ್ಲೂ ಸಹ ನೀವು ಮಾಡಬಹುದು.



Click it and Unblock the Notifications
