Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಆರೋಗ್ಯ ವೃದ್ಧಿಸುವ ನುಗ್ಗೆ ಸೊಪ್ಪಿನ ಖಾರ ಚಟ್ನಿ..! ಬೆಳಗ್ಗೆ ತಿಂಡಿಗೆ ಮಾಡಿ ನೋಡಿ..!
ನುಗ್ಗೆ ಸೊಪ್ಪು ಬಹಳಷ್ಟು ಪೋಷಕಾಂಶಗಳನ್ನು ತನ್ನಲ್ಲಿಟ್ಟುಕೊಂಡಿರುವ ಹಸಿರು ತರಕಾರಿಯಾಗಿದೆ, ನುಗ್ಗೆಕಾಯಿ ಸಾಂಬಾರ್ ಅನ್ನು ನಾವೆಲ್ಲಾ ಬಾಯಿ ಚಪ್ಪರಿಸಿ ಸವಿದಿರುತ್ತೇವೆ. ಹಾಗೆ ಈ ನುಗ್ಗೆ ಸೊಪ್ಪಿನಿಂದ ಮಾಡುವ ಕೆಲವು ಖಾದ್ಯ ಕೂಡ ಅಷ್ಟೇ ರುಚಿಯಾಗಿರುತ್ತೆ, ಅದರಲ್ಲೂ ನುಗ್ಗೆ ಸೊಪ್ಪಿನ ಪಲ್ಯ, ಚಟ್ನಿ ಅಂತು ಊಟ ತಿಂಡಿಗೆ ಹೇಳಿ ಮಾಡಿಸಿದ ಖಾದ್ಯ ಎನ್ನಬಹುದು.
ಈ ನುಗ್ಗೆ ಸೊಪ್ಪಿನ ಯಾವುದೇ ಖಾದ್ಯ ಆದ್ರೂ ಅದನ್ನು ಮಾಡುವುದು ಬಹಳ ಸುಲಭ ಹಾಗೆ ಕಡಿಮೆ ಸಮಯದಲ್ಲಿ ಮಾಡಬಹುದು. ಇನ್ನು ನುಗ್ಗೆ ಸೊಪ್ಪಿನ ಆರೋಗ್ಯಕಾರಿ ಅಂಶಗಳ ಬಗ್ಗೆ ನಾವು ಹೇಳುವುದಾದರೆ ಈ ಸೊಪ್ಪಿನಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ವಿಟಮಿನ್ ಎ, ಸಿ ಮತ್ತು ಆ್ಯಂಟಿಆಕ್ಸಿಡೆಂಟ್ಗಳು ಹೇರಳವಾಗಿದ್ದು, ಬೊಜ್ಜು, ಮಧುಮೇಹ, ರಕ್ತಹೀನತೆ, ಹೃದ್ರೋಗ, ಸಂಧಿವಾತ, ಪಿತ್ತಜನಕಾಂಗದ ಕಾಯಿಲೆಗಳು, ಚರ್ಮ ರೋಗ ಸೇರಿ ಹಲವು ಸಮಸ್ಯೆಗಳಿಗೆ ಇದು ಪರಿಹಾರ ನೀಡಬಹುದು.
ಹೀಗಾಗಿಯೇ ಇದನ್ನು ಸೂಪರ್ ಫುಡ್ ಅಂತಲೂ ವರ್ಗೀಕರಿಸಲಾಗಿದೆ. ಅಂದರೆ ನೀವು ಬೆಳಗ್ಗೆ ಈ ನುಗ್ಗೆ ಸೊಪ್ಪಿನ ಯಾವುದಾದರು ಖಾದ್ಯ ಸವಿಯುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ ಅಭ್ಯಾಸವಾಗಲಿದೆ, ಇದರಿಂದ ಇಡೀ ದಿನ ಚಟುವಟಿಕೆಯಿಂದ ಕೆಲಸ ಮಾಡಬಹುದು. ಹಾಗಾದ್ರೆ ನಾವಿಂದು ಬೆಳಗ್ಗೆ ತಿಂಡಿಗೆ ಖಾರ ಖಾರವಾಗಿ ನುಗ್ಗೆ ಸೊಪ್ಪಿನಿಂದ ಮಾಡಲಾದ ಚಟ್ನಿಯ ಸ್ವಾಧಿಸೋಣ.
ಈ ನುಗ್ಗೆ ಸೊಪ್ಪಿನ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡಲು ಯಾವೆಲ್ಲಾ ತಯಾರಿಯನ್ನು ಮಾಡಿಕೊಳ್ಳಬೇಕಾಗುತ್ತದೆ ಎಂಬ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳೋಣ.
ನುಗ್ಗೆ ಸೊಪ್ಪಿನ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ನುಗ್ಗೆ ಸೊಪ್ಪು
- ಕರಿಬೇವು
- ಎಣ್ಣೆ
- ಹಸಿ ಮೆಣಸು
- ಕಡಲೆ ಬೇಳೆ
- ಮೆಂತ್ಯ
- ಹುಣಸೆ ಹುಳಿ
- ಕಾಯಿ ತುರಿ
- ಉದ್ದಿನ ಬೇಳೆ
- ಉಪ್ಪು
- ಕೊತ್ತಂಬರಿ ಸೊಪ್ಪು
ನುಗ್ಗೆ ಸೊಪ್ಪಿನ ಚಟ್ನಿ ಮಾಡುವುದು ಹೇಗೆ?
ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಇದಕ್ಕೆ 3 ಸ್ಪೂನ್ ಕಡಲೆ ಬೇಳೆ ಹಾಗೂ ಉದ್ದಿನ ಬೇಳೆ, ಸ್ವಲ್ಪ ಮೆಂತ್ಯ, ಕರಿಬೇವು ಹಾಕಿಕೊಂಡು 1 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಚೆನ್ನಾಗಿ ತೊಳೆದಿರುವ ಒಂದು ಕಪ್ಗಿಂತ ಹೆಚ್ಚಿನ ನುಗ್ಗೆ ಸೊಪ್ಪನ್ನು ಹಾಕಿಕೊಳ್ಳಿ. ನುಗ್ಗೆ ಸೊಪ್ಪು ಹೆಚ್ಚಾಗಿ ಬಳಸಿ ಇದನ್ನು ಫ್ರೈ ಮಾಡಿದಾಗ ಸ್ವಲ್ಪವೇ ಪ್ರಮಾಣದಲ್ಲಿ ಸಿಗುತ್ತದೆ.
ನುಗ್ಗೆ ಸೊಪ್ಪು ಸೇರಿಸಿ ಬೇಯಿಸಿಕೊಳ್ಳಬೇಕು. 3 ನಿಮಿಷ ಬೇಯಿಸಿಕೊಂಡರೆ ಸಾಕು. ಈಗ ಇಡಿ ಹಸಿ ಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ. ಅನಂತರ ಇದಕ್ಕೆ ಹುಣಸೆ ಹಣ್ಣು ಹಾಗೂ ಕಾಯಿ ತುರಿ ಕೊತ್ತಂಬರಿ ಸೊಪ್ಪು ಸೇರಿಸಿ 1 ನಿಮಿಷ ಫ್ರೈ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಹಾಗೆ ಈ ಎಲ್ಲಾ ಮಿಶ್ರಣ ತಣ್ಣಗಾಗಲು ಬಿಡಬೇಕಾಗುತ್ತದೆ.
ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ಗೆ ಈ ಎಲ್ಲಾ ಮಸಾಲೆಗಳ ಸೇರಿಸಿಕೊಂಡು ಅನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಕೂಡ ಸೇರಿಸಿಕೊಂಡು ರುಬ್ಬಿಕೊಳ್ಳಬೇಕು. ಈ ವೇಳೆ ನಿಮಗೆ ಬೇಕಾದರೆ ಸ್ವಲ್ವವೇ ಸ್ವಲ್ಪ ನೀರು ಹಾಕಿಕೊಳ್ಳಿ. ನೀವು ಗಟ್ಟಿಯಾಗಿಯೂ ಚಟ್ನಿ ಮಾಡಬಹುದು ಇಲ್ಲವೆ ನೀರಾಗಿಯೂ ಮಾಡಬಹುದು. ಇಷ್ಟಾದರೆ ನಿಮ್ಮ ಮುಂದೆ ಈ ನುಗ್ಗೆ ಚಟ್ನಿ ರೆಡಿಯಾಗುತ್ತದೆ, ನೀವು ಕೂಡ ಒಮ್ಮೆ ಇದನ್ನು ಮಾಡಿ ನೋಡಿ.



Click it and Unblock the Notifications

