Latest Updates
-
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ!
ಉತ್ತರ ಕರ್ನಾಟಕ ಶೈಲಿಯ ಬದನೆಕಾಯಿ ಎಣ್ಣೆಕಾಯಿ ಪಲ್ಯ..! ಎಷ್ಟು ಸಿಂಪಲ್ ಗೊತ್ತಾ?
ಸಾಮಾನ್ಯವಾಗಿ ನೀವು ಚಪಾತಿ, ಪರೋಟ, ರೊಟ್ಟಿ, ದೋಸೆ ಮಾಡಿದಾಗ ಅದರ ಜೊತೆಗೆ ಸವಿಯಲು ರುಚಿ ರುಚಿಯ ಖಾದ್ಯ ಮಾಡಿಯೇ ಮಾಡುತ್ತೀರಿ. ಹಾಗೆ ಬಹಳ ಸುಲಭದ ಖಾದ್ಯಗಳ ಮಾಡಿ ಸವಿಯುವುದೇ ಹೆಚ್ಚು. ಅದರಲ್ಲಿ ಬಹಳ ಮುಖ್ಯವಾಗಿ ನಾವು ಎಣ್ಣೆಗಾಯಿ ಮಾಡಿ ಸವಿಯಲು ಬಹಳ ಇಷ್ಟಪಡುತ್ತೇವೆ. ಅದರಲ್ಲೂ ರೊಟ್ಟಿ, ಚಪಾತಿ, ಊಟದ ಜೊತೆಗೂ ಈ ಬದನೆಕಾಯಿ ಎಣ್ಣೆಗಾಯಿ ಹೇಳಿ ಮಾಡಿಸಿದ ಖಾದ್ಯ.
ಆದ್ರೆ ಕರ್ನಾಟಕದ ಒಂದೊಂದು ಭಾಗದಲ್ಲಿ ಒಂದೊಂದು ರುಚಿಯಲ್ಲಿ ಈ ಎಣ್ಣೆಗಾಯಿ ಮಾಡುತ್ತಾರೆ. ಎಲ್ಲರು ಬೇರೆ ಬೇರೆ ವಿಧಾನ ಆಗಿದ್ದರೂ ರುಚಿಯೂ ಕೂಡ ಬೇರೆ ಬೇರೆಯಾಗಿದೆ. ಹಾಗೆ ಉತ್ತರ ಕರ್ನಾಟಕ ಭಾಗದಲ್ಲಿ ಮಾಡಲಾಗುವ ಈ ವಿಧವಾದ ಎಣ್ಣೆಗಾಯಿ ಬಹಳ ಫೇಮಸ್. ಖಾರ ಖಾರವಾಗಿ ಅವರು ಮಾಡುವ ಖಾದ್ಯ ಎಲ್ಲಾ ಅಡುಗೆಗೂ ಬಹಳ ರುಚಿ ನೀಡುತ್ತೆ.

ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಈ ಎಣ್ಣೆಗಾಯಿ ಪಲ್ಯ ಬಹಳ ಅದ್ಭುತವಾಗಿ ಮಾಡುತ್ತಾರೆ. ರೊಟ್ಟಿಯ ರುಚಿ ಹೆಚ್ಚಿಸಬೇಕಾದರೆ ಈ ರೀತಿ ಎಣ್ಣೆಗಾಯಿ ಪಲ್ಯ ಮಾಡಿ ಸವಿಯಬೇಕಾಗುತ್ತೆ.
ಹಾಗಾದ್ರೆ ನಾವಿಂದು ಉತ್ತರ ಕರ್ನಾಟಕ ಭಾಗದಲ್ಲಿ ಮಾಡುವಂತಹ ರುಚಿಯ ಈ ಎಣ್ಣಗಾಯಿ ಪಲ್ಯ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಎಣ್ಣೆಗಾಯಿ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬದನೆಕಾಯಿ ಎಣ್ಣೆಗಾಯಿ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಬದನೆಕಾಯಿ
- ಸಾಸಿವೆ
- ಕರಿಬೇವು
- ಧನಿಯಾ ಕಾಳು
- ಜೀರಿಗೆ
- ಬೆಳ್ಳುಳ್ಳಿ
- ದಾಲ್ಚಿನ್ನಿ
- ಲವಂಗ
- ಕೆಡಲೆ ಬೇಳೆ
- ಬಿಳಿ ಎಳ್ಳು
- ಕಡಲೆ ಕಾಳು
- ಒಣ ಮೆಣಸು
- ಮೆಂತ್ಯ
- ಈರುಳ್ಳಿ
- ಟೊಮೆಟೋ
- ಅರಿಶಿನ ಪುಡಿ
- ತೆಂಗಿನಕಾಯಿ ತುರಿ
- ಬೆಲ್ಲ
- ಹುಣಸೆಹಣ್ಣು
- ಉಪ್ಪು
- ಎಣ್ಣೆ
ಬದನೆಕಾಯಿ ಎಣ್ಣೆಗಾಯಿ ಪಲ್ಯ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಧನಿಯಾ ಕಾಳು, ಸಾಸಿವೆ, ಚಕ್ಕೆ, ಲವಂಗ, ಜೀರಿಗೆ, ಬೆಳ್ಳುಳ್ಳಿ, ಮೆಂತ್ಯ ಕಾಳು, ಕಡಲೆ ಬೇಳೆ, ಬಿಳಿ ಎಳ್ಳು, ಒಣ ಮೆಣಸು, ಕಡಲೆ ಕಾಳು ಬೀಜ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 4 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಕರಿಬೇವು, ಈರುಳ್ಳಿ, ಟೊಮೆಟೋ, ಅರಶಿಣ ಹಾಕಿ ಫ್ರೈ ಮಾಡಿ.
ನಂತರ ಇದಕ್ಕೆ ಅರ್ಧ ಕಪ್ ತೆಂಗಿನಕಾಯಿ ತುರಿ, ಹುಣಸೆ ಹುಳಿ, ಬೆಲ್ಲ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಈಗ ಈ ಎಲ್ಲಾ ಮಸಾಲೆಗಳನ್ನು ಒಲೆಯಿಂದ ಇಳಿಸಿ ತಣ್ಣಗಾಗಲು ಬಿಡಿ. ಸಂಪೂರ್ಣ ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ಸ್ವಲ್ಪ ನೀರು ಹಾಕಿಕೊಂಡು ಚಟ್ನಿ ಹದಕ್ಕೆ ರುಬ್ಬಿಕೊಳ್ಳಬೇಕು. ಗಟ್ಟಿ ಚಟ್ನಿಯಂತೆ ರುಬ್ಬಿ ಒಂದು ಬೌಲ್ಗೆ ಹಾಕಿಡಿ.
ಈಗ ಬದನೆ ಕಾಯಿಯನ್ನು ತೆಗೆದಿಕೊಂಡು 4 ಭಾಗದಂತೆ ಕತ್ತರಿಸಿಕೊಳ್ಳಿ ಆದರೆ ಪೀಸ್ ಮಾಡಬೇಡಿ, ಇಡಿ ಕಾಯಿ ಹಾಗೆ ಇರಲಿ. ಕತ್ತರಿಸಿದ ಭಾಗದೊಳಗೆ ಈ ರುಬ್ಬಿದ ಮಸಾಲೆಯನ್ನು ಹಾಕಿಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಸ್ವಲ್ಪ ಜಾಸ್ತಿ ಎಣ್ಣೆ ಹಾಕಿ ಇದಕ್ಕೆ ಸಾಸಿವೆ, ಕರಿಬೇವು, ಉದ್ದಿನ ಬೇಳೆ ಹಾಕಿ ಫ್ರೈ ಮಾಡಿ.
ನಂತರ ಎಲ್ಲಾ ಬದಲನೆಯಾಯಿಯನ್ನು ಈ ಬಾಣಲೆಗೆ ಹಾಕಿ 10 ನಿಮಿದಷಗಳ ಕಾಲ ಫ್ರೈ ಮಾಡಿಕೊಳ್ಳಿ. ಉಳಿದ ರುಬ್ಬಿದ ಮಸಾಲೆಯನ್ನು ಇದಕ್ಕೆ ಹಾಕಿಕೊಳ್ಳಿ. ಸ್ವಲ್ಪ ನೀರು ಬೆರಿಸಿಕೊಂಡು ಈ ಬಾಣಲೆಗೆ ಮಸಾಲೆ ಹಾಕಿ. ಇದಕ್ಕೆ ಉಪ್ಪು ಸೇರಿಸಿ 10 ನಿಮಿಷ ಬೇಯಿಸಿಕೊಳ್ಳಿ. ಆಗಾಗ ತಳ ಹಿಡಿಯದಂತೆ ತಿರುಗಿಸುತ್ತಾ ಇರಿ. 10ರಿಂದ 12 ನಿಮಿಷ ಬೇಯಿಸಿದರೆ ಸಾಕಾಗುತ್ತದೆ ಇಷ್ಟಾದರೆ ಉತ್ತರ ಕರ್ನಾಟಕ ಶೈಲಿಯ ಈ ಎಣ್ಣೆಗಾಯಿ ಪಲ್ಯ ರೆಡಿಯಾಗುತ್ತೆ.



Click it and Unblock the Notifications