Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಉಪ್ಪಿಟ್ಟು ಬೇಡ ಅನ್ನೋರು ಕೂಡ ಈ ಉತ್ತರ ಕರ್ನಾಟಕ ಶೈಲಿಯ ತಿಂಡಿ ಸವಿಯುತ್ತಾರೆ!
ಉತ್ತರ ಕರ್ನಾಟಕ ಶೈಲಿಯ ಊಟ ತಿಂಡಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಖಾರ ಖಾರವಾದ ಊಟದ ಶೈಲಿಯ ರುಚಿಯೇ ಬೇರೆ. ಅದ್ರಲ್ಲೂ ಬೆಳಗ್ಗಿನ ತಿಂಡಿಗೆ ಉತ್ತರ ಕರ್ನಾಟಕದಲ್ಲಿ ಹಲವು ಬಗೆಯ ಖಾದ್ಯಗಳ ಮಾಡಿ ಸವಿಯುತ್ತಾರೆ. ಆದ್ರೆ ಉಳಿದ ಕರ್ನಾಟದ ಭಾಗದಲ್ಲಿ ಈ ರೀತಿಯ ಖಾದ್ಯ ನೋಡಲು ಸಿಗುವುದಿಲ್ಲ. ಅಂತಹ ಖಾದ್ಯಗಳಲ್ಲಿ ಉಪ್ಪಿಟ್ಟು ಕೂಡ ಒಂದಾಗಿದೆ.
ಉಪ್ಪಿಟ್ಟು ಬಹುತೇಕರ ಮನೆಯ ಬೆಳಗ್ಗಿನ ತಿಂಡಿ ಎನ್ನಬಹುದು, ರವೆ ಬಳಸಿ ಅತ್ಯಂತ ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಬಹುದಾದ ತಿಂಡಿ ಆಗಿರುವುದರಿಂದ ಎಲ್ಲರಿಗೂ ಇದು ಇಷ್ಟವಾಗುತ್ತೆ. ಆದ್ರೆ ಹಲವರು ಉಪ್ಪಿಟ್ಟು ರುಚಿಯನ್ನು ಇಷ್ಟಪಡುವುದಿಲ್ಲ. ಆದ್ರೆ ಉತ್ತರ ಕರ್ನಾಟಕ ಶೈಲಿಯಲ್ಲಿ ಮಾಡುವಂತಹ ಈ ರೀತಿಯ ಉಪ್ಪಿಟ್ಟು ಮಾಡಿದ್ರೆ ಎಲ್ಲರೂ ಸವಿಯಲು ಮುಂದಾಗುತ್ತಾರೆ.

ಹಾಗೆ ಈ ರೀತಿಯ ಉಪ್ಪಿಟ್ಟು ಖಾರ ಖಾರವಾಗಿ ಮಸಾಲೆ ಭರಿತವಾಗಿರುತ್ತೆ. ಹೀಗಾಗಿ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ಈ ರೀತಿಯ ಹೋಟೆಲ್ ಶೈಲಿ ಉತ್ತರ ಕರ್ನಾಟಕ ಭಾಗದಲ್ಲಿ ಮಾಡುವಂತಹ ರುಚಿ ರುಚಿಯ ಉಪ್ಪಿಟ್ಟು ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಈ ಉಪ್ಪಿಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉತ್ತರ ಕರ್ನಾಟಕ ಶೈಲಿಯ ಉಪ್ಪಿಟ್ಟು ಮಾಡಲು ಬೇಕಾಗುವ ವಸ್ತುಗಳು
- ರವೆ
- ಈರುಳ್ಳಿ
- ಹಸಿ ಮೆಣಸು
- ಉದ್ದಿನ ಬೇಳೆ
- ಜೀರಿಗೆ
- ಸಾಸಿವೆ
- ಇಂಗು
- ಎಣ್ಣೆ
- ಉಪ್ಪು
ಉತ್ತರ ಕರ್ನಾಟಕ ಶೈಲಿಯ ಉಪ್ಪಿಟ್ಟು ಮಾಡುವ ವಿಧಾನ ಹೇಗೆ?
ಮೊದಲು ಒಲೆ ಮೇಲೆ ಬಾಣಲೆ ಇಟ್ಟು 2 ಸ್ಪೂನ್ ಎಣ್ಣೆ ಹಾಕಿಕೊಂಡು ಅದಕ್ಕೆ ಜೀರಿಗೆ, ಸಾಸಿವೆ, 1 ಸ್ಪೂನ್ ಉದ್ದಿನ ಬೇಳೆ ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷ ಬಿಟ್ಟು ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಈರುಳ್ಳಿ ಕೂಡ ಒಂದು ನಿಮಿಷ ಹುರಿದು ಇಂಗು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈ ಎಲ್ಲಾ ಪದಾರ್ಥಗಳು ಮೆತ್ತಗಾದ ಬಳಿಕ ರವೆ ಹಾಕಬೇಕು.
ರವೆಯನ್ನು ಹುರಿದುಕೊಳ್ಳದೆ ತೆಗೆದುಕೊಳ್ಳಬೇಕು. ಈಗ ರವೆ ಹಾಕುವ ಮುನ್ನ 1 ಕಪ್ ರವೆ ತೆಗೆದುಕೊಂಡು ಮೂರು ಕಪ್ ನೀರು ಹಾಕಬೇಕು. ನೀವು ಹಾಕಿಕೊಂಡ ಬಳಿಕ 3 ಸ್ಪೂನ್ ಸಕ್ಕರೆ ಸಹ ಹಾಕಿಕೊಳ್ಳಿ. ಹಾಗೆ ಉಪ್ಪು ಸಹ ಹಾಕಿ ಮಿಕ್ಸ್ ಮಾಡಿ ನೀರು ಕುದಿಬರಲು ಮುಚ್ಚಳ ಮುಚ್ಚಿ ಬಿಡಿ.
ನೀರು ಕುದಿಯಲು ಆರಂಭಿಸಿದಾಗ ರವೆಯನ್ನು ಹಾಕಿಕೊಳ್ಳುತ್ತಾ ನಿಧಾನಕ್ಕೆ ತಿರುಗಿಸಿಕೊಳ್ಳಿ. ಸಣ್ಣ ಉರಿಯಲ್ಲಿ ಇಟ್ಟುಕೊಂಡಿರಿ. ರವೆ ಹಾಕಿಕೊಂಡು ಮಿಕ್ಸ್ ಮಾಡುತ್ತಾ ಇರಿ. 1 ನಿಮಿಷದ ಬಳಿಕ ಮುಚ್ಚಳ ಮುಚ್ಚಿ ಮತ್ತೆ 2 ನಿಮಿಷ ಬಿಟ್ಟು ಮುಚ್ಚಳ ತೆಗೆದು ಒಲೆ ಆಫ್ ಮಾಡಿಕೊಳ್ಳಿ. ಹಾಗೆ ಮಿಕ್ಸ್ ಮಾಡಿಕೊಂಡು ಮತ್ತೆ ಮುಚ್ಚಳ ಮುಚ್ಚಿ
2 ನಿಮಿಷದ ಬಳಿಕ ಉಪ್ಪಿಟ್ಟು ಸವಿಯಲು ಸಿದ್ಧವಾಗುತ್ತದೆ. ಈ ವಿಧಾನದಲ್ಲಿ ನೀವು ಕೂಡ ಉಪ್ಪಿಟ್ಟು ಮಾಡಿ ಸವಿದು ನೋಡಿ. ಮಾಡೋದು ಕೂಡ ಬಹಳ ಸುಲಭ. ಹಾಗೆ ಬೆಳಗ್ಗೆ ಇದನ್ನು ಸವಿಯಲು ನೀಡಿದರೆ ಎಲ್ಲರಿಗೂ ಇಷ್ಟವಾಗುತ್ತೆ. ಮಸಾಲೆ ಭರಿತ ಉಪ್ಪಿಟ್ಟು ನಿಮಿಷದಲ್ಲಿ ಖಾಲಿಯಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ನೋಡಿ. ಉತ್ತರ ಕರ್ನಾಟಕ ಭಾಗದಲ್ಲಿ ಈ ಉಪ್ಪಿಟ್ಟು ಮಾಡಿ ಸವಿಯುತ್ತಾರೆ, ಹಲವರಿಗೆ ಈ ಉಪ್ಪಿಟ್ಟು ಬಹಳ ರುಚಿಸುತ್ತದೆ. ಉಪ್ಪಿಟ್ಟು ಬೇಡ ಎನ್ನುವವರು ಕೂಡ ಇದನ್ನು ಸವಿಯಲು ಮುಂದಾಗುತ್ತಾರೆ.



Click it and Unblock the Notifications