Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಉತ್ತರ ಕರ್ನಾಟಕ ಶೈಲಿಯಲ್ಲಿ ಸುಸ್ಲಾ ಮಾಡಿ ಸವಿದು ನೋಡಿ!
ಉತ್ತರ ಕರ್ನಾಟಕದ ಒಂದೊಂದು ಖಾದ್ಯಗಳು ಕೂಡ ಅದ್ಭುತ ರುಚಿ ಹಾಗೆ ವಿಭಿನ್ನ ಆಗಿರಲಿವೆ. ನೀವು ಎಷ್ಟು ರೀತಿಯ ಖಾದ್ಯಗಳ ಮಾಡಿದ್ರೂ ನಿಮಗೆ ಬೇಸರ ತರಿಸುವುದಿಲ್ಲ. ಅಷ್ಟು ರುಚಿಕರ ಹಾಗೆ ವಿಭಿನ್ನ ಎನಿಸುತ್ತವೆ. ಹಾಗೆ ಕೆಲವೊಂದು ಬೇರೆ ಯಾವ ಭಾಗದಲ್ಲೂ ಮಾಡದೆ ಇರುವಂತಹ ತಿಂಡಿಗಳು ಉತ್ತರ ಕರ್ನಾಟಕ ಭಾಗದಲ್ಲಿ ನೋಡಲು ಸಿಗುತ್ತವೆ. ಇನ್ನು ಸಂಜೆ ಸಮಯಕ್ಕೆ ಮಾಡುವ ಸ್ನ್ಯಾಕ್ಸ್ ಅಂತು ಒಂದಕ್ಕಿಂತ ಒಂದು ಭಿನ್ನ ಎನ್ನಬಹುದು.
ಖಾರ ಖಾರವಾದ ಖಾದ್ಯಗಳು ಉತ್ತರ ಭಾಗದ ಸ್ಪೆಷಲ್ ಎನ್ನಬಹುದು. ಹಾಗೆ ಈ ಖಾದ್ಯಗಳ ಮಾಡೋದು ಕೂಡ ವಿಭಿನ್ನವೇ ಆಗಿರಲಿದೆ. ನೀವು ಕೂಡ ಹಲವು ರೀತಿಯ ಖಾದ್ಯಗಳ ಸವಿದಿರಬಹುದು. ಅದರಲ್ಲಿ ನಾವಿಂದು ಸುಲಭವಾಗಿ ಎಲ್ಲರ ಮನೆಯಲ್ಲೂ ಮಾಡುವಂತಹ ಈ ಸುಸ್ಲಾ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಮಂಡಕ್ಕಿ ಬಳಸಿ ಹಲವು ರೀತಿಯ ಖಾದ್ಯಗಳ ಮಾಡಿ ಸವಿಯುತ್ತಾರೆ. ಮಂಡಕ್ಕಿ ಒಗ್ಗರಣೆ, ಮಸಾಲ ಮಂಡಕ್ಕಿ, ಕಾಯಿ ಮಂಡಕ್ಕಿ, ಹಾಗೆ ಮಂಡಕ್ಕಿಯಿಂದ ಮಾಡುವ ಸುಸ್ಲಾ ಕೂಡ ರುಚಿ ರುಚಿಯ ಖಾದ್ಯ ಎನ್ನಬಹುದು, ಅವರು ಬೆಳಗ್ಗೆ ತಿಂಡಿಗೆ ಹಾಗೆ ಸಂಜೆ ಸ್ನ್ಯಾಕ್ಸ್‌ಗೂ ಕೂಡ ಈ ಸುಸ್ಲಾ ಸವಿಯುವುದು ನೋಡಬಹುದು.
ಹಾಗಾದ್ರೆ ಮಂಡಕ್ಕಿಯಿಂದ ರುಚಿ ರುಚಿಯ ಸುಸ್ಲಾ ಮಾಡೋದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ.
ಮಂಡಕ್ಕಿ ಸುಸ್ಲಾ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಮಂಡಕ್ಕಿ
- ಕೊತ್ತಂಬರಿ ಸೊಪ್ಪು
- ಶೇಂಗಾ
- ಈರುಳ್ಳಿ
- ಅರಶಿಣ
- ಹುರಿಗಡಲೆ
- ಸಾಸಿವೆ
- ಜೀರಿಗೆ
- ಇಂಗು
- ಕರಿವೇವು
- ಹಸಿ ಮೆಣಸು
ಮಂಡಕ್ಕಿ ಸುಸ್ಲಾ ಮಾಡುವುದು ಹೇಗೆ?
ಮೊದಲು ಮಂಡಕ್ಕಿಯನ್ನು ಜರಡಿಯಲ್ಲಿ ಹಾಕಿಕೊಂಡು ಚೆನ್ನಾಗಿ ಜರಡಿ ಹಿಡಿದು ಕಸಗಳಿದ್ದರೆ ಅದನ್ನು ತೆಗೆದು ಕ್ಲೀನ್ ಮಾಡಿ ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಈಗ ಸ್ವಲ್ಪ ಹುರಿಗಡಲೆಯನ್ನು ತೆಗೆದುಕೊಂಡು ಕುಟ್ಟಿ ಇಲ್ಲವೆ ಮಿಕ್ಸಿ ಜಾರ್‌ಗೆ ಹಾಕಿಕೊಂಡು ಪುಡಿ ಮಾಡಬೇಕು. ತರಿತರಿಯಾಗಿ ಪುಡಿ ಮಾಡಿಟ್ಟುಕೊಳ್ಳಿ.
ಈಗ ಮಂಡಕ್ಕಿಯನ್ನು ನೀರು ತುಂಬಿರುವ ಮತ್ತೊಂದು ಪಾತ್ರೆಗೆ ಹಾಕಿಕೊಳ್ಳಿ. ಹಾಗೆ ಮಂಡಕ್ಕಿಯನ್ನು ಚೆನ್ನಾಗಿ ನೆನೆಸಿಕೊಂಡು ತಕ್ಷಣ ತೆಗೆದು ಸ್ವಲ್ಪ ಹಿಂಡಿಕೊಂಡು ಮತ್ತೊಂದು ಪಾತ್ರೆಗೆ ಹಾಕಿಕೊಳ್ಳಿ. ಅಥವಾ ಒಂದು ಬಟ್ಟಲಲ್ಲಿ ಹಾಕಿ ಸ್ವಲ್ಪ ಹರಡಿಕೊಳ್ಳಿ. ಈಗ ರುಚಿಗೆ ತಕ್ಕಷ್ಟು ಉಪ್ಪನ್ನು ಮೇಲೆ ಚೆನ್ನಾಗಿ ಹರಡಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಿ.
ಈಗ ಮೊದಲು ಪುಡಿ ಮಾಡಿ ಇಟ್ಟಿರುವ ಹುರಿಗಡಲೆ ಪುಡಿಯನ್ನು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಅದಕ್ಕೆ ಶೇಂಗಾ ಹಾಕಿಕೊಳ್ಳಿ. ಶೇಂಗಾ ಹುರಿದ ಬಳಿಕ ಎತ್ತಿಟ್ಟುಕೊಳ್ಳಿ. ನಂತರ ಈ ಎಣ್ಣೆಗೆ ಸಾಸಿವೆ, ಜೀರಿಗೆ, ಇಂಗು, ಹಸಿ ಮೆಣಸು, ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
2 ನಿಮಿಷದ ಬಳಿಕ ಇದಕ್ಕೆ ಈರುಳ್ಳಿ, ಅರಶಿಣ, ಕರಿಬೇವು ಹಾಕಿ ಮತ್ತೆ 2 ನಿಮಿಷ ಹುರಿದುಕೊಳ್ಳಿ. ಈಗ ನೆನೆಸಿಟ್ಟುಕೊಂಡಿದ್ದ ಮಂಡಕ್ಕಿಯನ್ನು ಇದಕ್ಕೆ ಹಾಕಿಕೊಳ್ಳಿ. ಹಾಗೆ ಒಂದು ನಿಂಬೆ ಹಣ್ಣಿನ ರಸ ಹಿಂಡಿಕೊಂಡು ಅದಕ್ಕೆ ಎಣ್ಣೆಯಲ್ಲಿ ಹುರಿದ ಶೇಂಗಾ, ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿ ಹಾಕಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ರುಚಿ ರುಚಿಯ ಈ ಮಂಡಕ್ಕಿ ಸುಸ್ಲಾ ಸಿದ್ದವಾಗುತ್ತೆ.



Click it and Unblock the Notifications
