Latest Updates
-
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ
ಉತ್ತರ ಕರ್ನಾಟಕದ ಕೆಂಪು ಖಾರ ಚಟ್ನಿ: ಅನ್ನದೊಂದಿಗೆ ಇದು ಅಮೃತ!
ಉತ್ತರ ಕರ್ನಾಟಕದ ಅಡುಗೆಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಆದ್ರಲ್ಲೂ ಖಾರ ಖಾರವಾದ ವಿಭಿನ್ನ ರುಚಿಯ ಹಾಗೆ ವಿಶೇಷವಾಗಿ ಮಾಡುವ ಹಲವು ಖಾದ್ಯಗಳ ಪರಿಚಯವೂ ಆಗಬಹುದು. ನಾವಿಂದು ಉತ್ತರ ಕರ್ನಾಟಕ ಭಾಗದಲ್ಲಿ ಮಾಡುವ ಖಾರ ಚಟ್ನಿ ಕುರಿತು ತಿಳಿಯೋಣ. ಅದ್ರಲ್ಲೂ ಅನ್ನದೊಂದಿಗೆ ಕಲಸಿಕೊಂಡು ಸವಿಯಲು ಹಾಗೆ ತಿಂಡಿಯೊಂದಿಗೆ ಸವಿಯಲು ಈ ಖಾರ ಚಟ್ನಿ ಬಹಳ ರುಚಿ ನೀಡಲಿದೆ.
ಅದ್ರಲ್ಲೂ ನೀವು ಕೆಂಪು ಚಟ್ನಿಯನ್ನು ಮಾಡಿ ಸವಿದಿರಬಹುದು, ಆದ್ರೆ ಅದರ ರುಚಿ ನಿಮಗೆ ಹಿಡಿಸದೆ ಇರಬಹುದು, ಇಲ್ಲವೆ ರುಚಿಯಾಗದೆ ಇರಬಹುದು. ಆದ್ರೆ ನಾವಿಂದು ಉತ್ತರ ಕರ್ನಾಟಕ ಭಾಗದಲ್ಲಿ ಎಲ್ಲರ ಮನೆಯಲ್ಲೂ ಮಾಡುವಂತಹ ರುಚಿ ರುಚಿಯ ಹಾಗೆ ಬಾಯಿ ರುಚಿ ಹೆಚ್ಚಿಸುವಂತಹ ಈ ಕೆಂಪು ಚಟ್ನಿ ಮಾಡುವ ಕುರಿತು ತಿಳಿಯೋಣ.

ಕೆಂಪು ಖಾರ ಚಟ್ನಿ ನೀವು ಕೂಡ ಮಾಡಿ ಸವಿದಿರುತ್ತೀರಿ. ಆದ್ರೆ ನಾವಿಂದು ಉತ್ತರ ಕರ್ನಾಟಕ ಭಾಗದಲ್ಲಿ ಮಾಡುವಂತಹ ರುಚಿ ರುಚಿಯ ಹಾಗೆ ಅನ್ನದೊಂದಿಗೆ ಅಮೃತದಂತಹ ರುಚಿ ನೀಡಲಿದೆ. ಹಾಗಾದ್ರೆ ಖಾರ ಕೆಂಪು ಚಟ್ನಿ ಮಾಡುವ ಕುರಿತಾಗಿ ಇಲ್ಲಿ ತಿಳಿದುಕೊಳ್ಳೋಣ.
ಉತ್ತರ ಕರ್ನಾಟಕ ಭಾಗದಲ್ಲಿ ಇದನ್ನು ಹೆಚ್ಚಾಗಿ ಮಾಡಲಾಗುತ್ತೆ. ಹಾಗಾದ್ರೆ ನೀವು ಮನೆಯಲ್ಲಿ ಈ ಚಟ್ನಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನ ನಾವಿಂದು ತಿಳಿದುಕೊಳ್ಳೋಣ.
ಉತ್ತರ ಕರ್ನಾಟಕ ಶೈಲಿಯ ಕೆಂಪು ಚಟ್ನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಒಣ ಮೆಣಸು
- ಕರಿಬೇವು
- ಎಣ್ಣೆ
- ಸಾಸಿವೆ
- ಜೀರಿಗೆ
- ಬೆಳ್ಳುಳ್ಳಿ
- ಕೊತ್ತಂಬರಿ ಸೊಪ್ಪು
- ಉಪ್ಪು
ಉತ್ತರ ಕರ್ನಾಟಕ ಶೈಲಿಯ ಕೆಂಪು ಚಟ್ನಿ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ನಲ್ಲಿ 30 ಒಣ ಮೆಣಸು ಹಾಕಿ ಅದಕ್ಕೆ ನೀರು ಹಾಕಿ ನೆನೆಸಿಡಿ. ಬಿಸಿ ನೀರಿನಲ್ಲಿ ನೆನೆಸಿದರೆ ಉತ್ತಮ. ಈಗ ಮಿಕ್ಸಿ ಜಾರ್ಗೆ ಈ ನೆನೆಸಿಟ್ಟ ಒಣ ಮೆಣಸು ಹಾಕಿಕೊಳ್ಳಿ. ಅದಕ್ಕೆ ನೆನೆಸಿಟ್ಟ ಹುಣಸೆ ಹುಳಿ, ಬೆಳ್ಳುಳ್ಳಿ, ಜೀರಿಗೆ, ಬೆಲ್ಲ, ಕೊತ್ತಂಬರಿ ಸೊಪ್ಪು, ಕರಿಬೇವು, ಉಪ್ಪು ಹಾಕಿ ರುಬ್ಬಿಕೊಳ್ಳಬೇಕು. ನೀರು ಸಹ ಹಾಕಿಕೊಳ್ಳಿ ಆದ್ರೆ ಗಟ್ಟಿಯಾಗಿರಲಿ.
ನುಣ್ಣಗೆ ರುಬ್ಬಿಕೊಂಡ ಬಳಿಕ ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಬೆಳ್ಳುಳ್ಳಿ, ಕರಿಬೇವು ಹಾಕಿ ರುಬ್ಬಿಕೊಂಡ ಚಟ್ನಿಯನ್ನು ಸಹ ಇದಕ್ಕೆ ಹಾಕಿ 5ರಿಂದ 6 ನಿಮಿಷ ಚೆನ್ನಾಗಿ ಹುರಿದುಕೊಳ್ಳುತ್ತಾ ಮಿಕ್ಸ್ ಮಾಡುತ್ತಾ ಇರಬೇಕು.
ಹೀಗೆ ಮಿಕ್ಸ್ ಮಾಡಿ, ಕೊನೆಯಲ್ಲಿ ಮುಚ್ಚಳ ಮುಚ್ಚಿ 1 ನಿಮಿಷ ಸಣ್ಣ ಉರಿಯಲ್ಲಿ ಬಿಡಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈ ಉತ್ತರ ಕರ್ನಾಟಕ ಶೈಲಿಯ ಕೆಂಪು ಚಟ್ನಿ ರೆಡಿಯಾಗುಯತ್ತದೆ. ಇದನ್ನು ಆಂಧ್ರ, ತೆಲಂಗಾಣದಲ್ಲೂ ಹೆಚ್ಚಾಗಿ ಮಾಡಿ ಸವಿಯುತ್ತಾರೆ. ಊಟದೊಂದಿಗೆ ಕಲಸಿಕೊಂಡು ಸವಿಯಲು ಬಹಳ ರುಚಿ ನೀಡಲಿದೆ. ನೀವು ಸಹ ಮನೆಯಲ್ಲಿ ಯಾವುದಾದರು ವಿಶೇಷ ಹಾಗೆ ರುಚಿ ರುಚಿಯ ಚಟ್ನಿ ಮಾಡುವ ಕುರಿತು ಆಲೋಚಿಸಿದ್ದರೆ ಈ ಚಟ್ನಿ ಮಾಡಿ ಸವಿದು ನೋಡಿ.
ಊಟದೊಂದಿಗೆ ಹಾಗೆ ಎಲ್ಲಾ ತಿಂಡಿಯೊಂದಿಗೆ ಸವಿಯಲು ಇದು ಬಹಳ ರುಚಿ ನೀಡಲಿದೆ. ಹಾಗೆ ನಾಲಗೆ ರುಚಿ ಕೆಟ್ಟಿದ್ದರೆ ನೀವು ಈ ಚಟ್ನಿಯನ್ನು ಒಮ್ಮೆಯಾದರು ಟ್ರೈ ಮಾಡಿ ನೋಡಿ. ಅದರ ರುಚಿಯಲ್ಲಿ ನೀವು ಊಟ ತಿಂಡಿ ಮತ್ತಷ್ಟು ಮಾಡೋದು ಖಚಿತ.



Click it and Unblock the Notifications