Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಉತ್ತರ ಕರ್ನಾಟಕ ಸೊಗಡಿನ ಹುಚ್ಚೆಳ್ಳು ಚಟ್ನಿ ಮಾಡಿ..! ಎಷ್ಟು ಸುಲಭ ಗೊತ್ತಾ?
ಹುಚ್ಚೆಳ್ಳು ಸಾಮಾನ್ಯವಾಗಿ ಉತ್ತರ ಕರ್ನಾಟಕದ ಮಂದಿಗೆ ಚಿರಪರಿಚಿತ. ಅವರು ಗುರೆಳ್ಳು ಅಂತಲೂ ಇದನ್ನು ಕರೆಯುತ್ತಾರೆ. ಹುಡಿದು ಪುಡಿ ಮಾಡಿದ ಈ ಎಳ್ಳಿನ ರುಚಿ ಸವಿದರಿಗೆ ಗೊತ್ತು. ರಾಗಿ ರೊಟ್ಟಿಯೊಂದಿಗೆ ಹುಚ್ಚೆಳ್ಳು ಚಟ್ನಿ ಇದ್ದರೆ ಹುಟ್ಟೆ ತುಂಬಿದ್ದರೂ ಮತ್ತೆ ಮತ್ತೆ ರೊಟ್ಟಿ ಸವಿಯೋದು ನೋಡಬಹುದು. ಈ ಹುಚ್ಚೆಳ್ಳಿನಲ್ಲಿ ಪ್ರೊಟೀನ್ ಕಾರ್ಬೋಹೈಡ್ರೇಟ್, ಫೈಬರ್, ಕ್ಯಾಲ್ಸಿಯಂ ಹಾಗೆ ವಿಟಮಿನ್ಗಳು ತುಂಬಿರುವುದು ನೋಡಬಹುದು. ಹೀಗಾಗಿ ಇದು ಆರೋಗ್ಯಕ್ಕೂ ಬಹಳ ಉತ್ತಮ.
ಈ ಹುಚ್ಚೆಳ್ಳು ಚಟ್ನಿಯನ್ನು ಊಟದ ಜೊತೆಗೂ ಸವಿಯುವುದು ನೋಡಬಹುದು. ಗುರೆಳ್ಳು ಪುಡಿಯನ್ನು ಬದನೆಕಾಯಿ ಪಲ್ಯ, ಚೌಳಿ ಕಾಯಿ ಪಲ್ಯ ಇತರೆ ಪಲ್ಯಗಳಿಗೂ ಬಳಸುತ್ತಾರೆ. ಹುಚ್ಚೆಳ್ಳು ಆರೋಗ್ಯಕ್ಕೆ ಬಹಳ ಉತ್ತಮ ಇದು ಹೃದಯದ ಆರೋಗ್ಯಕ್ಕೂ ಬಹಳ ಉತ್ತಮ. ಕೊಲೆಸ್ಟ್ರಾಲ್ ನಿರ್ವಹಣೆಗೆ ಇದು ಸಹಕಾರಿಯಾಗಿದೆ. ಇದರ ಎಣ್ಣೆ ನೋವು ನಿವಾರಕವಾಗಿಯೂ ಬಳಕೆಯಾಗುತ್ತದೆ.

ಆದ್ರೆ ಹುಚ್ಚೆಳ್ಳು ಚಟ್ನಿ ಮಾಡುವುದು ಹೇಗೆ ಅನ್ನೋದು ನಿಮಗೆ ತಿಳಿದಿದ್ಯಾ? ಹಾಗಾದ್ರೆ ನಾವಿಂದು ಈ ಹುಚ್ಚೆಳ್ಳು ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಕುರಿತು ತಿಳಿದುಕೊಳ್ಳೋಣ.
ಹುಚ್ಚೆಳ್ಳು ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ಕಪ್ಪು ಎಳ್ಳು - 1 ಕಪ್
- ಒಣ ಮೆಣಸು - 5 ರಿಂದ 6
- ಬೆಳ್ಳುಳ್ಳಿ
- ಉಪ್ಪು
ಹುಚ್ಚೆಳ್ಳು ಚಟ್ನಿ ಮಾಡುವ ವಿಧಾನವೇನು?
ಮೊದಲು ಕಪ್ಪು ಎಳ್ಳು ತೆಗೆದಿಕೊಳ್ಳಿ. ಸುಮಾರು 1 ಕಪ್ ಕಪ್ಪು ಎಳ್ಳು ತೆಗೆದುಕೊಂಡು ಒಲೆ ಮೇಲೆ ಒಂದು ಕಾವಲಿ ಇಟ್ಟು ಅದಕ್ಕೆ ಹಾಕಿ ಹುರಿದುಕೊಳ್ಳಬೇಕು. ಸಣ್ಣ ಉರಿಯಲ್ಲಿ ಇಟ್ಟು ಹುರಿದುಕೊಳ್ಳಬೇಕು. ಹೀಗೆ ಹುರಿಯುವಾಗ ಎಳ್ಳು ಚಟಪಟ ಎಂದು ಸಿಡಿಯಲು ಆರಂಭಿಸುತ್ತದೆ. ಹೀಗೆ ಸಿಡಿಯಲು ಆರಂಭಿಸಿದಾಗ ಒಲೆ ಮೇಲಿನ ಎಳ್ಳು ತೆಗೆದು ಮತ್ತೊಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ.
ಈಗ ಅದೇ ಬಾಣಲೆಗೆ 5ರಿಂದ 6 ಒಣ ಮೆಣಸು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಈ ಒಣ ಮೆಣಸು ಕೂಡ ತೆಗದು ಬದಿಗಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ ಸ್ವಲ್ಪ ಜೀರಿಗೆ ಹಾಕಿ ಬಿಸಿ ಮಾಡಿಕೊಂಡರೆ ಸಾಕು. ಈಗ ಎಲ್ಲಾ ವಸ್ತುಗಳನ್ನು ತಣ್ಣಗಾಗಲು ಬಿಡಿ. ಬಿಸಿ ಇದ್ದಾಗ ಇದನ್ನು ಪುಡಿ ಮಾಡಿಕೊಳ್ಳಲು ಹೋಗಬೇಡಿ.
ಬಿಸಿ ಇದ್ದಾಗಲೇ ಪುಡಿ ಮಾಡಲು ಹೋದರೆ ಗಟ್ಟಿಯಾಗಬಹುದು, ಇಲ್ಲವೆ ಮಿಕ್ಸಿ ಜಾರ್ ಕೂಡ ಹಾಳಾಗಬಹುದು. ಈ ವಸ್ತುಗಳು ಸಂಪೂರ್ಣ ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಎಲ್ಲಾ ವಸ್ತುಗಳನ್ನು ಸಹ ಹಾಕಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಎರಡು ಸುತ್ತು ಪುಡಿ ಮಾಡಿ, ನಂತರ ಇದಕ್ಕೆ ಎರಡು ಬೆಳ್ಳುಳ್ಳಿ ಸಿಪ್ಪೆ ತೆಗೆದು ಇದಕ್ಕೆ ಹಾಕಿಕೊಂಡು ಮತ್ತೆ ರುಬ್ಬಿಕೊಳ್ಳಿ. ಇದು ನುಣ್ಣಗೆ ಪುಡಿಯಾಗುವವರೆಗೂ ಪುಡಿ ಮಾಡಿಕೊಳ್ಳಿ.
ಈ ರೀತಿ ಪುಡಿ ಮಾಡಿದರೆ ನಿಮ್ಮ ಮುಂದೆ ರುಚಿ ರುಚಿಯ ಹುಚ್ಚೆಳ್ಳು ಚಟ್ನಿ ರೆಡಿಯಾಗುತ್ತದೆ. ಈ ಪುಡಿಯನ್ನು ಯಾವುದೇ ಖಾದ್ಯದೊಂದಿಗೆ ನೀವು ಸವಿಯಬಹುದು. ನೀವು ಕೂಡ ಮನೆಯಲ್ಲಿ ಈ ರೀತಿ ಹುಚ್ಚೆಳ್ಳು ಚಟ್ನಿ ಮಾಡಿ ನೋಡಿ. ಇದನ್ನು ಎಲ್ಲಾ ತಿಂಡಿಗೂ ಬಳಸಬಹುದು, ಹಾಗೆ ಊಟದ ಜೊತೆಗೂ ಕೂಡ ಅದ್ಭುತ ರುಚಿ ನೀಡಲಿದೆ. ಹಾಗೆ ಆರೋಗ್ಯದ ದೃಷ್ಟಿಯಲ್ಲೂ ಈ ಹುಚ್ಚೆಳ್ಳು ಬಹಳ ಉತ್ತಮವಾಗಿದೆ. ಮಾಡುವುದು ಕೂಡ ಬಹಳ ಸುಲಭವಾಗಿದೆ.



Click it and Unblock the Notifications
