Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಘಮ ಘಮ ಎನ್ನುವ ಪುಂಡಿ ಪಲ್ಯ ಮಾಡೋದು ಹೇಗೆ? ಎಲ್ಲರಿಗೂ ಇಷ್ಟವಾಗೋ ಖಾದ್ಯ!
ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷ ಖಾದ್ಯಗಳ ಮಾಡಿ ಸವಿಯುವುದು ಕಾಮನ್. ಹಾಗೆ ಉತ್ತರ ಕರ್ನಾಟಕ ಭಾಗದಲ್ಲಿ ಕಾಣಸಿಗುವ ಕೆಲವು ರೆಸಿಪಿಗಳು ಬೇರೆಲ್ಲೂ ನೀವು ಸವಿಯಲು ಸಾಧ್ಯವಿಲ್ಲ. ಹಾಗೆ ಕೆಲವೊಂದು ರೆಸಿಪಿಗಳನ್ನು ವಿಶೇಷ ದಿನದಲ್ಲಿ ಮಾತ್ರ ಮಾಡಲಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಾಡುವ ಖಾದ್ಯಗಳು ಸ್ವಲ್ಪ ಖಾರವಾಗಿ ಇದ್ದರೂ ರುಚಿ ಅದ್ಭುತ ಎನ್ನಬಹುದು.
ಅದ್ರಲ್ಲು ತಿಂಡಿಯ ಸಮಯದಲ್ಲಿ ಹಾಗೆ ಊಟದೊಂದಿಗೆ ಸವಿಯಲು ಅವರು ವಿವಿಧ ರೀತಿಯ ಖಾದ್ಯಗಳ ಮಾಡುತ್ತಾರೆ. ಅದ್ರಲ್ಲಿ ನಾವಿಂದು ಸುಲಭವಾಗಿ ಮಾಡುವಂತಹ ಹಾಗೆ ಉತ್ತರ ಕರ್ನಾಟಕದ ಫೇಮಸ್ ಪುಂಡಿ ಪಲ್ಯ ಮಾಡುವ ಕುರಿತಾಗಿ ತಿಳಿಯೋಣ. ಪುಂಡಿ ಪಲ್ಯ ಕಬ್ಬಿಣಾಂಶದಲ್ಲಿ ತುಂಬಿದೆ.

ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಮತ್ತು ವಿಟಮಿನ್ ಕೆ ಅನ್ನು ಹೊಂದಿರುತ್ತದೆ. ಹೀಗಾಗಿ ಇದು ನಿಮ್ಮ ಆರೋಗ್ಯಕ್ಕೂ ಬಹಳ ಉತ್ತಮ. ಪುಂಡಿ ಪಲ್ಯದಲ್ಲಿ ಉತ್ಕರ್ಷಣ ನಿರೋಧಕ ಗುಣಗಳು ಹೇರಳವಾಗಿವೆ. ಹೀಗಾಗಿ ಇದು ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಬಹಳ ಉತ್ತಮ ಖಾದ್ಯ ಆಗಿರಲಿದೆ. ರೊಟ್ಟಿ, ಚಪಾತಿ, ದೋಸೆಯೊಂದಿಗೆ ಹಾಗೆ ಊಟದೊಂದಿಗೂ ಕೂಡ ಇದನ್ನು ಸವಿಯಬಹುದು.
ಹಾಗಾದ್ರೆ ಈ ಪುಂಡಿ ಪಲ್ಯ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪುಂಡಿ ಪಲ್ಯ ಮಾಡಲು ಬೇಕಾಗುವ ವಸ್ತುಗಳು
- ಕಡ್ಲೆ ಬೆಳೆ
- ಶೇಂಗಾ
- ಇಂಗು
- ಬೆಳ್ಳುಳ್ಳಿ ಎಸಳು
- ಜೀರಿಗೆ
- ಬೆಲ್ಲ
- ಎಣ್ಣೆ
- ಅರಶಿಣ
- ರುಚಿಗೆ ತಕ್ಕಷ್ಟು ಉಪ್ಪು
ಪುಂಡಿ ಪಲ್ಯ ಮಾಡುವ ವಿಧಾನವೇನು?
ಮೊದಲು ಪುಂಡಿ ಸೊಪ್ಪನ್ನು ತೆಗೆದುಕೊಂಡು ಸ್ವಚ್ಚ ಮಾಡಿ ಬಿಡಿಸಿಕೊಳ್ಳಿ. ಈಗ ಒಂದು ಕುರ್ಗೆ ಪುಡಿ ಎಲೆ, ಶೇಂಗಾ, ಕಡಲೆ ಬೇಳೆ, ಹಸಿ ಮೆಣಸು ಗಾಕಿ ಮುಳುಗುವಷ್ಟು ನೀರು ಹಾಕಿ ಮುಚ್ಚಳ ಹಾಕಿ 3ರಿಂದ 4 ಸೀಟಿ ಹೊಡೆಸಬೇಕು. ಈಗ ಮುಚ್ಚಳ ತೆಗೆದು ನೀರು ಬಸಿದು ಬೇರೆ ಬೇರೆಯಾಗಿ ತೆಗೆದಿಟ್ಟುಕೊಳ್ಳಿ.
ಈಗ ಮತ್ತೆ ಈ ಪದಾರ್ಥಗಳನ್ನು ಕುಕ್ಕರ್ಗೆ ಹಾಕಿ ಸ್ವಲ್ಪ ನೀರು ಹಾಕಿ ಕುದಿಬರಲು ಬಿಡಿ. ಕುದಿಬರುವಾಗ ಸ್ವಲ್ಪ ಜೋಳದ ನುಚ್ಚು ಇಲ್ಲವೆ ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕುದಿರುವಾಗ ಇಂಗು, ಅರಶಿಣ, ಬೆಲ್ಲ, ಜೀರಿಗೆ, ಜಜ್ಜಿದ ಬೆಳ್ಳುಳ್ಳಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಇದಕ್ಕ ಎಣ್ಣೆ ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ ಕುದಿಯಲು ಬಿಡಿ. ಕುಕ್ಕರ್ ಮುಚ್ಚಳ ಹಾಕಬೇಡಿ ಬೇರೆ ಪ್ಲೇಟ್ ಬಳಸಿ.
ಆಗಾಗ ಮಿಕ್ಸ್ ಮಾಡುತ್ತಾ ಇರಿ. 3 ರಿಂದ 4 ನಿಮಿಷ ಕುದಿ ಬರಿಸಿಕೊಂಡ ಬಳಿಕ ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿ. ಇದರಲ್ಲಿ ನೀರು ಕಡಿಮೆಯಾಗುತ್ತಾ ಪಲ್ಯ ಗಟ್ಟಿಯಾಗುತ್ತಾ ಬರಬೇಕು ಅಷ್ಟು ಕುದಿಸಿಕೊಂಡು ಒಲೆ ಆಫ್ ಮಾಡಿ ಪಲ್ಯ ಇಳಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಪುಂಡಿ ಪಲ್ಯ ರೆಡಿಯಾಗುತ್ತದೆ.
ಇಷ್ಟು ಮಾಡಿದರೆ ನಿಮ್ಮ ಪುಂಡಿ ಪಲ್ಯ ಸವಿಯಲು ಸಿದ್ದವಾಗುತ್ತೆ. ಇದನ್ನು ಚಪಾತಿ, ರೊಟ್ಟಿ, ಅನ್ನ, ದೋಸೆಯೊಂದಿಗೆ ಸೇರಿ ಹಲವು ಖಾದ್ಯದೊಂದಿಗೆ ನೀವು ಸವಿಯಲಬಹುದು. ಇದರಲ್ಲಿನ ಆರೋಗ್ಯರ ಅಂಶವು ನಿಮಗೆ ಬಹಳ ಉತ್ತಮ ಹಾಗೆ ರುಚಿಕರ ಪಲ್ಯದ ಘಲು ನಿಮಗೆ ಸವಿಯಲು ಸಿಗಲಿದೆ. ನೀವು ಕೂಡ ಈ ವಿಶೇಷ ರುಚಿ ಪಲ್ಯ ಟ್ರೈ ಮಾಡಿ ನೋಡಿ



Click it and Unblock the Notifications
