Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಒಮ್ಮೆ ಸವಿದರೆ ರುಚಿ ಮರೆಯೋದಿಲ್ಲ..ಇಲ್ಲಿದೆ ಸ್ಪೆಷಲ್ ಮಟ್ವಾಡಿ ಪಲ್ಯ..!
ಉತ್ತರ ಕರ್ನಾಟಕ ಭಾಗದ ವಿಶೇಷ ಅಂದ್ರೆ ಅಲ್ಲಿ ಮಾಡಲಾಗುವ ಅಡುಗೆಗಳು. ಉತ್ತರ ಕರ್ನಾಟಕ ಭಾಗದಲ್ಲಿ ನೋಡಲು ಹಾಗೆ ಸವಿಯಲು ಸಿಗುವಂತಹ ವಿಶೇಷ ಖಾದ್ಯಗಳು ಬೇರೆಲ್ಲೂ ಸಿಗೋದಿಲ್ಲ. ಉತ್ತರ ಕರ್ನಾಟಕದ ಕೆಲವು ಖಾದ್ಯಗಳು ಬೇರೆ ಯಾವುದೇ ಭಾಗದಲ್ಲೂ ಮಾಡೋದಿಲ್ಲ. ಹಾಗೆ ನಾವಿಂದು ಉತ್ತರ ಕರ್ನಾಟಕ ಭಾಗದಲ್ಲಿ ಮಾಡುವಂತಹ ವಿಶೇಷ ಖಾದ್ಯ ಅಂದ್ರೆ ಮಟವಾಡಿ ಅಥವಾ ಮಟ್ವಾಡಿ ಪಲ್ಯ.
ಮಟ್ವಾಡಿ ಪಲ್ಯ ಉತ್ತರ ಕರ್ನಾಟಕ ಭಾಗದ ಅತ್ಯಂತ ಜನಪ್ರಿಯ ಸ್ಟಿರ್ ಫ್ರೈ ಪಾಕವಿಧಾನ. ಈ ಮಟ್ವಾಡಿ ಪಲ್ಯ ಎಲ್ಲರಿಗೂ ಇಷ್ಟವಾಗುತ್ತೆ, ರೊಟ್ಟಿ ದೋಸೆ, ಅನ್ನದ ಜೊತೆಗೂ ಕೂಡ ಬಹಳ ರುಚಿ ನೀಡಲಿದೆ. ಹಾಗೆ ಆರೋಗ್ಯದ ದೃಷ್ಟಿಯಿಂದಲೂ ಸಹ ಅದ್ಭುತ ಪ್ರಯೋಜನಗಳ ಹೊಂದಿದೆ. ಹಾಗೆ ಮಕ್ಕಳ ಆರೋಗ್ಯಕ್ಕೆ ಇದು ಬಹಳ ಉತ್ತಮ.

ಇದು ಮೆಂತ್ಯ ಸೊಪ್ಪು, ಬೇಳೆ ಕಾಳುಗಳ ಹಾಕಿ ಮಾಡುವುದರಿಂದ ದೇಹಕ್ಕೆ ಬಹಳ ಉತ್ತಮ. ಹಲವು ಬೇಳೆಗಳ ಬಳಸುವುದರಿಂದ ರುಚಿ ಕೂಡ ಅದ್ಭುತವಾಗಿರಲಿದೆ. ಸಾಂಪ್ರದಾಯಿಕವಾಗಿ ಮಟ್ವಾಡಿ ಪಲ್ಯವನ್ನು ಬಹಳಷ್ಟು ಎಣ್ಣೆಯನ್ನು ಬಳಸಿ ತಯಾರಿಸಲಾಗುತ್ತದೆ. ಹಾಗಾದ್ರೆ ನಾವಿಂದು ಈ ಮಟವಾಡಿ ಪಲ್ಯ ಮಾಡುವ ಕುರಿತು ತಿಳಿದುಕೊಳ್ಳೋಣ.
ಈ ಮಡ್ವಾಡಿ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಮಟ್ವಾಡಿ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಕಡಲೆ ಬೇಳೆ ಅಥವಾ ತೊಗರಿ ಬೇಳೆ
- ಮೆಂತ್ಯ ಸೊಪ್ಪು
- ಶುಂಠಿ
- ಹಸಿ ಮೆಣಸು
- ತೆಂಗಿನಕಾಯಿ ತುರಿ
- ಸಾಸಿವೆ
- ಜೀರಿಗೆ
- ಉದ್ದಿನ ಬೇಳೆ
- ಒಣ ಮೆಣಸು
- ಅರಶಿಣ
- ಇಂಗು
- ಕರಿಬೇವು
- ಉಪ್ಪು
- ಎಣ್ಣೆ
ಮಟ್ವಾಡಿ ಪಲ್ಯ ಮಾಡುವುದು ಹೇಗೆ?
ಮೊದಲು ಒಂದು ಕಪ್ನಲ್ಲಿ ಕಡಲೆ ಬೇಳೆ ಅಥವಾ ತೊಗರಿ ಬೇಳೆ ತೆಗೆದುಕೊಂಡು ತೊಳೆದು ಬಳಿಕ ನೀರಿನಲ್ಲಿ ನೆನೆಸಿಡಬೇಕು. ಇನ್ನು 4 ಕಪ್ ಅಷ್ಟು ಮೆಂತ್ಯ ಸೊಪ್ಪನ್ನು ತೊಳೆದು ಬಿಡಿಸಿ ಇಟ್ಟುಕೊಳ್ಳಿ. ಈಗ 3ರಿಂದ 4 ಗಂಟೆ ನೆನೆಸಿಟ್ಟ ಬೇಳೆಯನ್ನು ನೀರಿನಿಂದ ತೆಗೆದು ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ಅದಕ್ಕೆ ಶುಂಠಿ, ಹಸಿ ಮೆಣಸು ಹಾಕಿಕೊಂಡು ನೀರು ಹಾಕದೆ ತರಿ ತರಿಯಾಗಿ ರುಬ್ಬಿಕೊಳ್ಳಬೇಕು.
ರುಬ್ಬುವಾಗ ಅಂಟು ಎನಿಸಿದರೆ 2ರಿಂದ 3 ಚಮಚ ನೀರು ಹಾಕಿ ರುಬ್ಬಿಕೊಳ್ಳಿ. ಈಗ ಈ ರುಬ್ಬಿದ ವಸ್ತುವನ್ನು ದೊಡ್ಡ ಪಾತ್ರೆಗೆ ಹಾಕಿ ಬಳಿಕ ಅದಕ್ಕೆ ತೊಳೆದುಕೊಂಡಿರುವ ಮೆಂತ್ಯ ಸೊಪ್ಪು ಸಹ ಹಾಕಿಕೊಳ್ಳಿ. ಹಾಗೆ ತೆಂಗಿನ ತುರಿ ಕೂಡ ಹಾಕಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಹೀಗೆ ಕಲಸಿಕೊಂಡ ಬಳಿಕ ಈಗ ಬೇಯಿಸಬೇಕು.
ಅದಕ್ಕಾಗಿ ಒಲೆ ಮೇಲೆ ಇಡ್ಲಿ ಪಾತ್ರೆ ಅಥವಾ ಕುಕ್ಕರ್ ಇಟ್ಟು ಅದರೊಳಗೆ ಈ ಮಿಶ್ರಣ ಇಟ್ಟು ಅರ್ಧ ಗಂಟೆ ಬೇಯಿಸಿಬೇಕು. ಇದು ಹಬೆಯಲ್ಲಿ ಬೇಯಬೇಕು. ನಂತರ ಒಲೆ ಆಫ್ ಮಾಡಿ ಇದನ್ನು ತೆಗೆದು ಬೇರೆ ಪಾತ್ರೆಗೆ ಹಾಕಿ ಸ್ವಲ್ಪ ಹರಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾದ ಬಳಿಕ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ, ಒಣ ಮೆಣಸು, ಅರಶಿಣ, ಇಂಗು, ಕರಿಬೇವು ಹಾಕಿ ಒಗ್ಗರಣೆ ಮಾಡಿ.
ಈಗ ಈ ಒಗ್ಗರಣೆಯನ್ನು ತೆಗೆದು ಪಲ್ಯಕ್ಕೆ ಹಾಕಿ ನಂತರ ಪಲ್ಯದ ಪಾತ್ರೆಯನ್ನು ಒಲೆ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. 2ರಿಂದ 3 ನಿಮಿಷ ಚೆನ್ನಾಗಿ ಬೇಯಬೇಕು. ಈ ಸಮಯದಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಉತ್ತರ ಕರ್ನಾಟಕ ಶೈಲಿಯ ಮಟ್ವಾಡಿ ಪಲ್ಯ ರಡಿಯಾಗುತ್ತದೆ.



Click it and Unblock the Notifications
